ಅನಿವಾಸೀ ಭಾರತೀಯರಾದ ಶ್ರೀ ಶ್ರೀವತ್ಸ ಜೋಶಿ ಅವರು ಇತ್ತೀಚೆಗೆ ತಮ್ಮ Facebook ನಲ್ಲಿ ಒಂದು ಸ್ನಿಗ್ಧ ಕನವರಿಕೆಯನ್ನು ತೇಲಿಬಿಟ್ಟಿದ್ದರು. ಅದಕ್ಕೆ ಪರೋಕ್ಷವಾಗಿ ನಾನಾಡಿದ ಜೂಟಾಟವೇ ಕಾರಣವಾಗಿತ್ತು. ಆ ನೆನಪಿನಲ್ಲಿ ನನ್ನ ಹಿಂದೆ ಅವರು ಸರಿಯುತ್ತ... ಸಾರ್ವಜನಿಕ ಪ್ರಸಾರ ಸಂಸ್ಥೆ "ಆಕಾಶವಾಣಿ" ಯನ್ನು ಚಪ್ಪರಿಸಿದ್ದನ್ನು ಮತ್ತು ಅದರ ಜೊತೆಗೆ ನೂರಾರು ಜನರು ಆಕಾಶವಾಣಿಯ ಬಾಂಧವ್ಯದ ತಮ್ಮ ತಮ್ಮ ನೆನಪುಗಳನ್ನು ಆಸ್ವಾದಿಸಿದನ್ನು ಕಂಡಾಗ, ಅಕಾಶವಾಣಿಯೆಂಬ ಸಂಸ್ಥೆಯು ಸಾಧಿಸಿದ ಮೇರು ಸಾಧನೆ ಮತ್ತು ಆ ಹಿನ್ನೆಲೆಯನ್ನು ಸುಪುಷ್ಟಗೊಳಿಸುವ ಬಾಧ್ಯತೆಯನ್ನು ಪುನರಪಿ ಅವಲೋಕನ ಮಾಡುವಂತೆ ಮಾಡಿದೆ. ಆಕಾಶವಾಣಿಯನ್ನು ಗೌರವಿಸುವ, ಹಿಂಬಾಲಿಸುವ ಸಮಸ್ತ ಜನತೆಗೆ ಋಣಿಯಾಗಿರುತ್ತ ನನ್ನೊಳಗಿನ ಕೆಲವು ಅವ್ಯಕ್ತಗಳಿಗೆ ಶಬ್ದಗಳನ್ನು ಜೋಡಿಸುತ್ತಿದ್ದೇನೆ.
ಮೇರು ಸಂಗೀತ ಕಲಾವಿದರು, ಸಾಹಿತಿಗಳು, ಸಮಾಜದ ವಿಭಿನ್ನ ವರ್ಗದ ಅನೇಕ ಸಾಧಕರನ್ನು ಮಾತ್ರವಲ್ಲದೆ ಅರಳುತ್ತಿರುವ ಪ್ರತಿಭೆಗಳನ್ನೂ ಜನರ ಮನೆಯೊಳಗೇ ಹೊಗ್ಗಿಸಿ, ಸಮಸ್ತ ರಸಿಕರ ಹೃದಯದಲ್ಲಿ ಅವರನ್ನು ಸ್ಥಾಪಿಸುವಂತೆ ಮಾಡಿದ ಕೀರ್ತಿ "ಅಕಾಶವಾಣಿ"ಗೆ ಸಲ್ಲುತ್ತದೆ.
ಸಾರ್ವಜನಿಕ ಪ್ರಸಾರ ಸಂಸ್ಥೆಯಾದ ಆಕಾಶವಾಣಿಯು "ಬಹುಜನ ಹಿತಾಯ ಬಹುಜನ ಸುಖಾಯ" ಎಂಬ ತನ್ನ ಧ್ಯೇಯ ವಾಕ್ಯಕ್ಕೆ ಸಂಪೂರ್ಣ ಬದ್ಧವಾಗಿ ನಡೆದುಕೊಳ್ಳುತ್ತಿರುವ ಸಂಸ್ಥೆ. ಸಾಮಾಜಿಕ ಕಿರಿ ಕಿರಿಗಳನ್ನು ದೊಡ್ಡ ಸುದ್ದಿ ಎಂಬಂತೆ ಪ್ರಸಾರ ಮಾಡಿದ ಕುಖ್ಯಾತಿಯು ಇಂದಿಗೂ ಆಕಾಶವಾಣಿಗೆ ತಟ್ಟಿಲ್ಲ. ಸುದ್ದಿಗಳಲ್ಲಿಯೂ ಸಭ್ಯತೆ, ಸ್ವಚ್ಚತೆ, ಸುಭಗತೆಯನ್ನು ಕಾಯ್ದುಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳುತ್ತಿರುವ ಈ ಸಂಸ್ಥೆಯು ತನ್ನ ಲಕ್ಷ್ಮಣ ರೇಖೆಯನ್ನು ದಾಟಿಲ್ಲ. ಮಾನವಂತರ ಮಾನವನ್ನು ಎತ್ತರಿಸುತ್ತ, ಮಾನಗೇಡಿತನವನ್ನು ಉಪೇಕ್ಷಿಸುತ್ತ ಸದ್ದುಗದ್ದಲವಿಲ್ಲದೆ ತನ್ನ ಹೊಣೆಗಾರಿಕೆಯನ್ನು ನಿಭಾಯಿಸುತ್ತ ಬಂದಿರುವ ಆಕಾಶವಾಣಿಯು ಇಂದಿಗೂ "ಸಜ್ಜನಿಕೆ"ಗೆ ಇತರರಿಗೆ ಮಾದರಿಯಾಗಿಯೇ ಉಳಿದಿದೆ.
ಹೌದು. ೧೯೯೦ರ ನಂತರ ಹೊಸ ಗಾಳಿ ಬೀಸತೊಡಗಿದ ಮೇಲೆ, ಆಕಾಶವಾಣಿಯ ಅಂತರಂಗದಲ್ಲಿ ಹಲವಾರು ಕೋಲಾಹಲವೆದ್ದಿದೆ. ಅಲ್ಲಿಂದ ಮುಂದಿನ ೨೫ ವರ್ಷಗಳಲ್ಲಿ ಆಕಾಶವಾಣಿಯಲ್ಲಿ ಅಪಾರ ಪರಿವರ್ತನೆಗಳಾಗಿವೆ. "ಭಯ ಭಕ್ತಿ"ಯಿಂದ ಕಾರ್ಯ ನಿರ್ವಹಿಸುವ ಸಮರ್ಪಣಾ ಭಾವದ ಒಳಪದರವು ಕ್ಷೀಣಗೊಳ್ಳುತ್ತಿದೆ. ಸರಕಾರದ ಹಲವು ಕಾನೂನುಗಳ ಸದುಪಯೋಗದಷ್ಟೇ ದುರುಪಯೋಗವೂ ಅಲ್ಲಲ್ಲಿ ಕಾಣುತ್ತಿದೆ. ಒಟ್ಟಾರೆ ಸಮಾಜದ ಪ್ರತಿಬಿಂಬದಂತೆ ಇಂತಹ ಘಟನೆಗಳು ನಡೆದಾಗ, ಒಂದು ಸಂಸ್ಥೆ ಮಾತ್ರವೇ ಇಂತಹ ಅನಿಷ್ಟಗಳಿಗೆ ಕಾರಣವಾಗದು. ಅಷ್ಟರ ಮಟ್ಟಿಗೆ "ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ...ಕಾಲಾಯ ತಸ್ಮೈ ನಮಃ" ಎಂದು ಹೇಳಿ ಸಮಾಧಾನ ಮಾಡಿಕೊಳ್ಳಲೂ ಬಹುದು.
ಒಂದು ಸಮಾಜದಲ್ಲಿ ಉತ್ತಮ ಅಭಿರುಚಿಯನ್ನು ಬೆಳೆಸಿ ಪೋಷಿಸುವಲ್ಲಿ ಆಕಾಶವಾಣಿಯು ನಿರ್ವಹಿಸಿದ ಪಾತ್ರ ಅಮೋಘವಾದದ್ದು. ನೆನಪಿನತ್ತ ಜಾರಿದರೆ......
ಅಂದು....ಬೆಳಗಿನ ೭.೧೫ ಘಂಟೆಗೆ ಪ್ರಸಾರವಾಗುತ್ತಿದ್ದ ಶಾಸ್ತ್ರೀಯ "ಸಂಗೀತ ಸುಧಾ", ೮.೩೦ಕ್ಕೆ ಪ್ರಸಾರವಾಗುತ್ತಿದ್ದ ಗಂಭೀರ ಶಾಸ್ತ್ರೀಯ ಸಂಗೀತ ಮಿಡಿತವು ಕೇಳುಗರ ಮನಸ್ಸನ್ನು ಶಾಂತ ಪ್ರಸನ್ನಗೊಳಿಸುತ್ತಿದ್ದವು. ಪ್ರತೀ ಬೆಳಗನ್ನೂ ಪ್ರಫ಼ುಲ್ಲ ಗೊಳಿಸುತ್ತಿದ್ದವು. ಸಂಜೆ ಮತ್ತು ರಾತ್ರಿಯೂ ಶಾಸ್ತ್ರೀಯ ಸಂಗೀತದ ಒರತೆಯು ಹೊಮ್ಮುತ್ತಿತ್ತು. ಮಧ್ಯಾಹ್ನ ಅಥವ ಸಂಜೆಯ ರಾಗವೊಂದು (ಹಿಂದೂಸ್ತಾನಿ ಶೈಲಿ) ಬೆಳಿಗ್ಗೆ ಪ್ರಸಾರವಾದರೆ - ಶ್ರೋತೃಗಳು "ಹಾಗಲ್ಲ ಹೀಗೆ" ಎಂದು ಪ್ರತಿಕ್ರಿಯಿಸುತ್ತಿದ್ದರು. ಇದರಿಂದಾಗಿ ಸಂಗೀತ ಉಣಬಡಿಸುವ ನಿಲಯದ ಸಿಬ್ಬಂದಿಗಳೂ ಎಚ್ಚರದಲ್ಲಿರುತ್ತಿದ್ದರು. ಶ್ರೋತೃಗಳು ತಮಗೆ ಬೇಕಾದುದನ್ನು ಕೇಳಿ ಪಡೆಯುತ್ತಿದ್ದುದೂ ಅಪರೂಪವಲ್ಲ. ಅಷ್ಟರ ಮಟ್ಟಿಗೆ "ಆಕಾಶವಾಣಿ- ಕೇಳುಗ" ಸೇತುವು ಬಲಿಷ್ಠವಾಗಿತ್ತು. ದೊಡ್ಡ ಸಂಖ್ಯೆಯ ಜನರ ಅಭಿರುಚಿಯೂ ಆರೋಗ್ಯಪೂರ್ಣವಾಗಿದ್ದ ಆ ದಿನಗಳಲ್ಲಿ ಸ್ವಸ್ಥ ಮನಸ್ಸಿಗೆ ಬೇಕಾದ ವ್ಯಂಜನಗಳನ್ನು ಬಡಿಸುವುದರಲ್ಲಿ ಆಕಾಶವಾಣಿಯು ಮುಂಚೂಣಿಯಲ್ಲಿತ್ತು.
ಇಂದೂ ಎಲ್ಲ ಬಗೆಯ ಸಂಗೀತವು...ಅಂದಿನ ಪ್ರಮಾಣದಲ್ಲಿ ಅಲ್ಲದಿದ್ದರೂ, ಸಾಕಷ್ಟು ಪ್ರಸಾರವಾಗುತ್ತಿದೆ. ಆದರೆ ಪ್ರಸಾರಯೋಗ್ಯ ಮತ್ತು ಅಯೋಗ್ಯ ಎಂಬ ಅಳತೆಗೋಲು ಈಗ ಚಾಲ್ತಿಯಲ್ಲಿರುವಂತೆ ಕಾಣುವುದಿಲ್ಲ. ಇದ್ದಬಿದ್ದ CD ಗಳನ್ನೆಲ್ಲ ಇತರ FM ಗಳಂತೆ ನಾವೂ ಪ್ರಸಾರ ಮಾಡುತ್ತಿದ್ದೇವೆ. ಸೋಸುವಿಕೆಯಲ್ಲಿ ಮೊದಲಿನ ನಿಷ್ಠುರತೆಯಿಲ್ಲ. ಬದಲಾದ ಕಾಲಘಟ್ಟದಲ್ಲಿ ಬಹುಶಃ ಇಂತಹ ನಿರ್ಧಾರಗಳು ಅನಿವಾರ್ಯವೇ ಇರಬಹುದು. ಆದರೆ, ಈ ಸ್ಪರ್ಧಾಯುಗದಲ್ಲಿ, ನಮಗಿಂತ ಉತ್ತಮರೊಂದಿಗೆ ಸ್ಪರ್ಧಿಸಿದರೆ ಮಾತ್ರ ನಾವು ಇನ್ನಷ್ಟು ಉತ್ತಮಿಕೆಯತ್ತ ಹೊರಳಬಹುದು - ಎಂಬ ಎಚ್ಚರವು ಅಂತರಂಗದ ಅಪೇಕ್ಷೆಯಾಗಿದ್ದರೆ ಒಳ್ಳೆಯದು.
ಅಂದಿನ ದಿನಗಳಲ್ಲಿ ದಿನಕ್ಕೆ ಒಂದರಿಂದ ಒಂದೂವರೆ ಘಂಟೆಗಳ ಕಾಲ ಮಾತ್ರ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ಆ ಗೀತೆಗಳನ್ನು ತಿಂಗಳ ಮೊದಲೇ ಆಯ್ಕೆ ಮಾಡಿ ಪಟ್ಟಿ ತಯಾರಿಸಬೇಕಿತ್ತು. ಉದ್ಘೋಷಕರೇ ಈ ಕೆಲಸವನ್ನು ಮಾಡುತ್ತಿದ್ದರು (ಬಹುಶಃ ಚಿತ್ರಗೀತೆಗಳ ವಿಶೇಷ ಪರಿಣತರು ಎಂದಿರಬೇಕು) ಹಬ್ಬ ಹರಿದಿನಗಳನ್ನು ನೋಡಿಕೊಂಡು ಸಾಂದರ್ಭಿಕವಾಗಿ ಸೂಕ್ತ ಗೀತೆಗಳನ್ನು ಆಯ್ಕೆ ಮಾಡಬೇಕಾಗಿತ್ತು. ಒಂದು ಗೀತೆಯು ಪದೇ ಪದೇ ಪ್ರಸಾರವಾದರೆ, ನಿಗದಿಗೊಳಿಸಿದವರು "ವಿವರಣೆ" ನೀಡಬೇಕಾದ ಫಜೀತಿ ಎದುರಾಗುತ್ತಿತ್ತು. ಈ ಶಿಸ್ತಿನಿಂದಾಗಿ ಕೇಳುಗನಿಗೆ ಕಿರಿ ಕಿರಿಯಾಗುವುದು ತಪ್ಪುತ್ತಿತ್ತು. ಆದರೆ ಇಂದು ದಿನವೂ ಎರಡೂವರೆ - ಮೂರು ಘಂಟೆಗಳ ಕಾಲ ಚಿತ್ರಗೀತೆಗಳು ಪ್ರಸಾರವಾಗುತ್ತವೆ. ಚಿತ್ರಗೀತೆಗಳೆಂದರೆ ಸಿದ್ಧ ಆಹಾರ. ಈ ಸಿದ್ಧ ಆಹಾರವನ್ನು ಬಡಿಸಲಿಕ್ಕೂ ಒಂದಿಷ್ಟು ಶಿಸ್ತು ಬೇಕು. ಆದರೆ ಈಗ ಬಡಿಸುವ ಶಿಸ್ತೂ ಶಿಥಿಲವಾಗಿದೆ. "ಉದ್ಘೋಷಕರ ಮೆಚ್ಚಿನ" ಚಿತ್ರಗೀತೆಗಳನ್ನು ಕೇಳುಗರಿಗೆ ಕೇಳಿಸುವಂತಾಗಿದೆ. ಕೆಲವೊಮ್ಮೆ ನೂರಾರು ಬಾರಿ ತಿರುಗಿ ಸೋತುಹೋದ ಅದೇ ಚಿತ್ರಗೀತೆಗಳನ್ನೇ ಆಧರಿಸಿ, ಉದ್ಘೋಷಕರ ಸಂಕ್ಷಿಪ್ತ ವಿವರಣೆಗಳೊಂದಿಗೆ, ನೇರಪ್ರಸಾರವಾಗಿ, ಕರ್ತವ್ಯನಿರತ ಉದ್ಘೋಷಕರು ಸಂಯೋಜಿತ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿದ್ದಾರೆ.ಇದು ಏಕತಾನತೆಯಿಂದ ಪಾರಾಗಲು ಉದ್ಘೋಷಕರೇ ಕಂಡುಕೊಂಡ ವಿಧಾನ. "ಹಳೆಯ ಅಮ್ಮನಿಗೆ ಹೊಸ ಸೀರೆ ಉಡಿಸಿದಂತೆ" ಇಂತಹ ಕಾರ್ಯಕ್ರಮಗಳು ಜನಪ್ರಿಯವಾದುದೂ ಇದೆ. ಆದರೆ ಆಕಸ್ಮಿಕಗಳಂತೆ ಮೂಡಿಬರುವ ಇಂತಹ ಕುಸ್ತಿಗಳೇ ಸಾಲದು. "ಪೂರ್ವತಯಾರಿ" ಎಂಬ ಅತ್ಯಂತ ಅವಶ್ಯಕವಾದ ಶಿಸ್ತನ್ನು ಮತ್ತೊಮ್ಮೆ ಸ್ವೀಕರಿಸದಿದ್ದರೆ ನಮ್ಮ ಹೊಳಪು ಕಂದಿ ಹೋದೀತು ಎಂಬ ಎಚ್ಚರವಿದ್ದರೆ ಒಳ್ಳೆಯದು.
ಇವೆಲ್ಲವೂ ಸಣ್ಣ ಪುಟ್ಟ ಏರಿಳಿತಗಳ - ಮೆಲುಕು.... ಅಷ್ಟೆ.
ಶ್ರೀ ಶ್ರೀವತ್ಸ ಜೋಶಿ ಅವರಂತಹ ಲಕ್ಷಾಂತರ ಶ್ರೋತೃಗಳು ನಮ್ಮ ಜೊತೆ ಇದ್ದಾರೆ. ಆಕಾಶವಾಣಿಯನ್ನು ಮನೆ ಮಗನಂತೆ ಆದರಿಸುವವರು ಇಂದಿಗೂ ಇದ್ದಾರೆ. ಆದ್ದರಿಂದ ಸ್ವಂತ ಲಾಭದ ಜೊತೆಗೇ ಆಕಾಶವಾಣಿಯೆಂಬ ಸಂಸ್ಥೆಯ ಹೊಸ ಹೊಳಹುಗಳನ್ನು ಚಿಂತಿಸಬಲ್ಲ ಸಾಮರ್ಥ್ಯವುಳ್ಳ ಅಂತರಂಗಿಗಳೂ ಮುಕ್ತ ಮನಸ್ಸಿನಿಂದ ಕಾರ್ಯೋನ್ಮುಖರಾಗಲು ಕಾಯಬೇಕಾಗಿಲ್ಲ.
"ಈ ಖಾಸಗೀ FMಗಳ ಎದುರಿನಲ್ಲಿ ಆಕಾಶವಾಣಿಗೆ ಉಳಿಗಾಲವಿಲ್ಲ" ಎನ್ನುವ ಮಾತು ಬಾಲಿಶ ಮತ್ತು ಅರ್ಥಹೀನವಾದದ್ದು. ಪಾನೀಪುರಿ ತಿನ್ನುತ್ತ ಬದುಕು ಸಾಗಿಸಲು ಸಾಧ್ಯವೇ !!?? ವೈದ್ಯರು ಕಟ್ಟುನಿಟ್ಟಿನ ಆಹಾರ ಕ್ರಮ ಸೂಚಿಸುವವರೆಗೆ ಅಂತಹ ಹುಡುಗಾಟ ನಡೆದೀತು!! ಆರೋಗ್ಯ ಕೆಡಿಸಿಕೊಂಡಮೇಲೆ ಸಹಜ ಆಹಾರ ಕ್ರಮದತ್ತ ಒತ್ತಾಯಪೂರ್ವಕವಾಗಿಯಾದರೂ ಮರಳಲೇಬೇಕು. ಈ ಮಧ್ಯಂತರ ಅವಧಿಯಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಪ್ರಿಯವಾಗಿ ಪ್ರಸ್ತುತ ಪಡಿಸುವ ದಿಕ್ಕಿನಲ್ಲಿ ಆಕಾಶವಾಣಿಯೂ ತಾಳ್ಮೆಯಿಂದ ಯೋಚಿಸಬೇಕು.
ಹಳೆಯದೆಲ್ಲವೂ ಕೊಳಕಲ್ಲ; ಹೊಸತೆಲ್ಲವೂ ಅಮೃತವಲ್ಲ. ಹೊಸ ಚಿಗುರು ಹಳೆ ಬೇರು ಕೂಡಿರುವ ಸೊಗಸಾದ "ಪ್ರಸಾರ ವೃಕ್ಷ"ವನ್ನು ಆವಿರ್ಭವಿಸಿಕೊಳ್ಳಬೇಕು. "ಆ ಕಸವಾನಿ "ಎನ್ನುತ್ತ ಪದೇ ಪದೇ ಕೇಳುಗರನ್ನು ತಬ್ಬಿಬ್ಬುಗೊಳಿಸುವವರನ್ನು ಧ್ವನಿವರ್ಧಕದತ್ತ ಸುಳಿದಾಡಲೂ ಬಿಡಬಾರದು. ಧ್ವನಿಯಿಂದಲೇ ಅಕ್ಷರಗಳನ್ನುಸಲಹುತ್ತ , ಸರ್ವಸ್ವವನ್ನೂ ಕಟ್ಟಿಕೊಡಬೇಕಾದ ಅನಿವಾರ್ಯತೆ ಇರುವ ಆಕಾಶವಾಣಿಯನ್ನು ಮೂರ್ಖರ ಕೈಗೆ ಒಪ್ಪಿಸಿ, ದುರ್ಬಲಗೊಳ್ಳದಂತೆ ಕಾಯ್ದುಕೊಳ್ಳಬೇಕು. ಮಾತ್ರವಲ್ಲ; ಸ್ವಕೇಂದ್ರಿತ ಮನಸ್ಸುಗಳು ತಮ್ಮ ಪರಿಧಿಯನ್ನು ಇತ್ಯಾತ್ಮಕವಾಗಿ ನಿಯಂತ್ರಿಸಿಗೊಳ್ಳಲೂ ಬೇಕಾಗಿದೆ.
ಉದಾತ್ತ ಧ್ಯೇಯವನ್ನು ಹೊಂದಿದ ಆಕಾಶವಾಣಿಗೆ ಅಂತರಂಗದಲ್ಲೇ ಕಾಯಕಲ್ಪವಾಗಬೇಕು. ಒಳ್ಳೆಯದನ್ನು ಎಲ್ಲಿದ್ದರೂ ಹೇಗಿದ್ದರೂ ಸ್ವೀಕರಿಸುವ ಹೃದಯಶೀಲತೆಯನ್ನು ಮೆರೆಯಬೇಕು. ಯಾವುದೇ ಸಂಸ್ಥೆಯು "ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ" ಎಂಬ ಸಂದೇಹ ಬರುವಂತಿರಬಾರದು. "ವ್ಯಕ್ತಿಗಿಂತ ಸಂಸ್ಥೆ ದೊಡ್ಡದು" ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು. ಕಾಲ, ಸ್ಥಳ, ಸಂದರ್ಭಗಳಿಗೆ ಹೊಂದಿ ಬದಲಾಗಬಹುದಾದ "ಹೊಗಳಿಕೆ" ಎಂಬ ಸಂಚಾರೀ ಭಾವಕ್ಕೆ ಸಮರ್ಪಣಾ ಭಾವದ ಆಭಾರ ಸಲ್ಲಿಸಿ ಸುಮ್ಮನಾಗುವುದು ವಿವೇಕ. ಸಂಚಾರೀ ಭಾವಕ್ಕೆ ಸಿಲುಕಿ ಸ್ವಂತ ಮನೆಯ ಸ್ಥಾಯೀ ವಿಳಾಸವೇ ಮರೆತು ಹೋಗಬಾರದು.
ಈ ಸಂಸ್ಥೆಯ ಮಾನವ ಸಂಪನ್ಮೂಲವು ಸದ್ಬಳಕೆಯಾದರೆ ಆಕಾಶವಾಣಿಯ ಹತ್ತಿರಕ್ಕೆ ಸುಳಿಯುವ ಅರ್ಹತೆ ಪಡೆಯಲೂ ಉಳಿದ ಸ್ಪರ್ಧಾಳುಗಳು ತಿಣುಕಬೇಕಾದೀತು.
ಸ್ವಚ್ಚ, ಸಮೃದ್ಧ ಆಕಾಶವಾಣಿಯು ಮತ್ತೊಮ್ಮೆ ಮೈ ಕೊಡವಿಕೊಂಡು ಎದ್ದರೆ ಶ್ರೀ ಶ್ರೀವತ್ಸ ಜೋಶಿ ಅವರಂತಹ ಲಕ್ಷಾಂತರ ನಿಸ್ವಾರ್ಥ, ಅಕಳಂಕ ಅಭಿಮಾನಿಗಳನ್ನು ಮುಂದೆಯೂ ಬಹುಕಾಲ ತನ್ನ ತೆಕ್ಕೆಯಲ್ಲಿ ಪೋಷಿಸುವಂತಾದೀತು. ಅಂತಹ ಸಂಕಲ್ಪ ಮತ್ತು ಕ್ರಿಯಾಶಕ್ತಿ ಮೇಳೈಸಲು ಪುರುಷಪ್ರಯತ್ನವೂ ಬೇಡವೇ ?
ಆಕಾಶವಾಣಿಯಲ್ಲಿ ಬೃಹತ್ ಸಂಪತ್ತಿನ ಭಂಡಾರವಿದೆ. ಆ ಭಂಡಾರಕ್ಕೆ ನಾನೂ ನನ್ನ ಕಿರುಗಾಣಿಕೆಯನ್ನು ಸಮರ್ಪಿಸಿದ್ದೇನೆಂಬ ಆತ್ಮತೃಪ್ತಿ ನನಗಿದೆ. "ನನ್ನ ಆಕಾಶವಾಣಿ"ಯು ಸಹಸ್ರದಳ ಕಮಲದಂತೆ ಆಕರ್ಷಕವಾಗಿ ಸುಗಂಧ ಭರಿತವಾಗಿ, ಕರ್ಣ - ಮನ ಸೂರೆಗೊಳ್ಳುವಂತಿರಬೇಕು ಎಂಬುದಷ್ಟೇ - ಸಂಸ್ಥೆಯ ಋಣ ಭಾರದಿಂದ ಬಾಗಿರುವ ನನ್ನ ಈ ಬರಹದ ಉದ್ದೇಶ.
ಸ-ನಾಥ ಸುರಕ್ಷಿತ ಪ್ರಜ್ಞೆಯು ಒಳಗೂ - ಹೊರಗೂ ಕಾಣುವಂತಾಗಲಿ.

Amen! Thank you for this wonderful article Madam.
ReplyDeleteಲೇಖನ ಚೆನ್ನಾಗಿದೆ. ನಾನೂ ಆಕಾಶವಾಣಿಯ ಅಭಿಮಾನಿ. ಈಗಿನ ಎಫ್ ಎಂ ಗಳ ಕಂಗ್ಲಿಷ್ ಕೇಳಲೇ ಅಸಹ್ಯ. ನಾನು ೧೯೮೦ ಯಲ್ಲಿ IMS ಹಾಸ್ಟೆಲ್ ನಲ್ಲಿ ಇದ್ದಾಗ ನೀವೂ ಅಲ್ಲೇ ಇದ್ದ ನೆನಪು. ನಾನಾಗ ತಂತಿ ಕೇಂದ್ರೀಯ ಕಚೇರಿಯಲ್ಲಿ ಕೆಲಸ ಮಾಡುತಿದ್ದೆ . ನಂತರ ವರ್ಗಾವಣೆ ಆಗಿ ಈಗ ಮೈಸೂರಲ್ಲಿ ನೆಲಸಿದ್ದೇವೆ. ಈಗ ತಂತಿ ವಿಭಾಗವೇ ಮುಚ್ಚಿ ಹೋಯಿತು. ನಾನೂ ಕಳೆದ ವರ್ಷ ಸ್ವಯಂ ನಿವೃತ್ತಿ ತೆಗೆದುಕೊಂಡೆ .
ReplyDeleteನಿಮ್ಮ ಬ್ಲಾಗಿನ ಎಲ್ಲ ಲೇಖನಗಳನ್ನು ಓದಿದೆ. ಇಸ್ಟವಾಯಿತು. ಶ್ರೀವತ್ಸ ಜೋಷಿಯವರ ಬರಹದ ಕೊಂಡಿಯ ಮೂಲಕ ನಿಮ್ಮ ಪರಿಚಯವಾಗಿದ್ದು ನನ್ನ ಸೌಭಾಗ್ಯ. Jayalaxmi.P>Rao
ಮತ್ತೊಮ್ಮೆ ನಿಮ್ಮ ಪರಿಚಯದ ಪುನರ್ನವೀಕರಣವಾಗಿದೆ . ಜೊತೆಯಾಗಿರಿ ಧನ್ಯವಾದ .
ReplyDelete