Sunday, May 10, 2009

ಕುಟುಂಬ ಬೇಕೆ ?

  "ವೇಗಕ್ಕೆ ಮುಖವೊಡ್ಡಿರುವ ಆಧುನಿಕ ಬದುಕಿನಲ್ಲಿ - ಕೌಟುಂಬಿಕ ನೆಮ್ಮದಿಯನ್ನು ಕಂಡುಕೊಳ್ಳುವುದು ಹೇಗೆ? "

  ಕುಟುಂಬ - ಒಂದು ಆಕರ್ಷಕ ಸಂಸ್ಥೆ. ಕುಟುಂಬ ಅಂದರೆ... ಹೆಣ್ಣು ಗಂಡು, ಹಿರಿಯರು ಕಿರಿಯರು, ಮಕ್ಕಳು, ವೃದ್ಧರು... ಎಲ್ಲರೂ ಸೇರಿಕೊಂಡು ಒಟ್ಟಿಗೆ ಜೀವನ ನಡೆಸುವ ಒಂದು ವ್ಯವಸ್ಥೆ.

ಯಾವುದೇ ಕುಟುಂಬದ ಸದಸ್ಯರಾಗುವುದಕ್ಕೆ - ಮಗ ಅಥವ ಮಗಳಾಗಲಿಕ್ಕೆ - ಶುಲ್ಕ ತುಂಬಿ ಅರ್ಜಿ ಹಾಕಲು ಆಗುವುದಿಲ್ಲ. ಬದುಕುಗಳ ನಡುದಾರಿಯಲ್ಲಿ ಪ್ರವೇಶಿಸುವ ಹೆಂಡತಿ ಅಥವ ಸೊಸೆ ಮುಂತಾದ ಪಾತ್ರಗಳ ಅರ್ಹತೆಯನ್ನು ಕರಾರುವಾಕ್ಕಾಗಿ ಲೆಕ್ಕಹಾಕಿ, ಹೊಸಪಾತ್ರಗಳನ್ನು ಯಾವುದೇ ಕುಟುಂಬದ ಭಾಗವಾಗಿಸಿಕೊಳ್ಳುವುದೂ ಕೂಡ - ಮನುಷ್ಯ ಶಕ್ತಿಗೆ ಮೀರಿದ ವಿಷಯ ಎಂಬುದು - ವಾಸ್ತವ. ಏನೋ ಒಂದು ಅಂದಾಜು - ಸಾಮಾನ್ಯ ಲೆಕ್ಕಾಚಾರದಲ್ಲಿಯೇ ನಿಭಾಯಿಸುತ್ತ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಸಂಸ್ಥೆ ಇದು. ಉದ್ಯೋಗ ವಲಯಗಳಲ್ಲಿ ಜ್ಯಾರಿಯಲ್ಲಿರುವ Service Rule .. ತರಹದ - ಕಟ್ಟುನಿಟ್ಟಾದ ನೀತಿನಿಯಮಗಳು - ಕೌಟುಂಬಿಕ ವಲಯದಲ್ಲಿ ಹೆಚ್ಚು ಸಹಕರಿಸುವುದಿಲ್ಲ. ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆಯಾ ಸಂದರ್ಭಕ್ಕೆ ಅನುಗುಣವಾಗಿ ವರ್ತಿಸುವ - "ವಿವೇಚನೆ" ಎಂಬ ಅರ್ಹತೆಯೇ - ಯಾವುದೇ ಕುಟುಂಬವನ್ನು ಭದ್ರಗೊಳಿಸಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

  ಆದ್ದರಿಂದ, ಯಾವುದೇ ಕುಟುಂಬದ ಸದಸ್ಯರು - ತಮ್ಮ ಕೌಟುಂಬಿಕ ಆಗುಹೋಗುಗಳಲ್ಲಿ ಯಾವುದನ್ನೂ - "ತನ್ನ ಯತ್ನದಿಂದ ಅಥವ ತನ್ನಿಂದಲೇ ಆದದ್ದು.." ಅಂದುಕೊಳ್ಳಲು ಸಾಧ್ಯವಿಲ್ಲ. ಅಲ್ಲಿ ನಡೆಯುವುದು - ಭಾವನೆಗಳ ಹರಿದಾಟ; ಬಹಳ ಸೂಕ್ಷ್ಮವಾದ ಸಾಮೂಹಿಕ ಭಾಗೀದಾರಿಕೆ. ಕೌಟುಂಬಿಕ ವಲಯದಲ್ಲಿ ಆಡುವ, ಮಾಡುವ ಎಲ್ಲವೂ... ತೆರೆಮರೆಯ ತಿಣುಕಾಟ ಎಂಬ ಭಾವನೆಯು ಪ್ರತಿಯೊಬ್ಬ ಸದಸ್ಯರಲ್ಲೂ ಒಂದಲ್ಲ ಒಂದು ಘಟ್ಟದಲ್ಲಿ ಸಹಜವಾಗಿ ಮೂಡುವುದಿದೆ; ಕುಟುಂಬ ಅಂದರೆ  ದಿನನಿತ್ಯದ ಪರೀಕ್ಷೆ ಅನ್ನಿಸುವುದೂ ಇದೆ; ಆದದ್ದು ಒಂದು - ಅಂದುಕೊಂಡದ್ದೊಂದು... ಎಂಬಂತಹ ಕ್ಷಣಗಳು ಕೌಟುಂಬಿಕ ಬದುಕಿನಲ್ಲಿ ಬಂದುಹೋಗುತ್ತಲೇ ಇರಬಹುದು. ಮನುಷ್ಯ ಸಂಕಲ್ಪಗಳೊಂದೂ ನಡೆಯದೆ, ಇನ್ನೊಂದೇ ದೃಶ್ಯ ಹೊರಹೊಮ್ಮಲೂ ಬಹುದು. "ನಾನು, ನನ್ನಿಂದ... ಅಲ್ಲ; ನಾನು ಏನೂ ಅಲ್ಲ; ಕೌಟುಂಬಿಕ ಬದುಕು ಎಂಬುದು ಕೇವಲ ಸಂಭವಿಸುವಂಥದ್ದು... ಇಲ್ಲಿ ನನ್ನದೇನೂ ಇಲ್ಲ.." ಎನ್ನುವ ವೇದಾಂತದ ಹತ್ತಿರಕ್ಕೆ ನಮ್ಮನ್ನು ಕರೆದೊಯ್ಯುವಷ್ಟು - ಬದುಕುಗಳನ್ನು ಪಳಗಿಸುವುದೂ - ಕುಟುಂಬಗಳೇ ಆಗಿವೆ.

  ಹೀಗಿದ್ದರೂ... ಯಾವುದೇ ಕುಟುಂಬವೊಂದನ್ನು ಕಟ್ಟುವಲ್ಲಿ ಮತ್ತು ಮೆಟ್ಟುವಲ್ಲಿಯೂ... ಮಹಿಳೆಯರ ಪಾತ್ರವು ಗುರುತಿಸುವಂಥದೇ ಆಗಿರುತ್ತದೆ. ಒಂದು ಕುಟುಂಬದಲ್ಲಿ ಮಹಿಳೆಯು ಸೋತಾಗ, ಆ ಕುಟುಂಬವು ಪೂರ್ತಿಯಾಗಿ ನೆಲ ಕಚ್ಚುವುದು ಮತ್ತು ಪುರುಷ ಸೋತರೆ - ಕುಟುಕು ಜೀವದೊಂದಿಗಾದರೂ ಉಳಿದುಕೊಳ್ಳುವುದು... ಎಲ್ಲರ ಅನುಭವದ ಸತ್ಯ.

  ಆದ್ದರಿಂದ, ಇಲ್ಲಿ ಮಹಿಳೆಯೇ ಕೇಂದ್ರವಸ್ತುವಾದರೂ - ಕುಟುಂಬದ "ಸಮಗ್ರ ಸುತ್ತಾಟವು" ಅನಿವಾರ್ಯವಾಗಿದೆ. ಕಾಲಕಾಲಕ್ಕೆ ತನ್ನ ರೂಪಲಾವಣ್ಯಗಳನ್ನು ಮರುಹೊಂದಿಸಿಕೊಳ್ಳುವುದು ಕುಟುಂಬ ವ್ಯವಸ್ಥೆಯ ವೈಶಿಷ್ಟ್ಯ. ಇವತ್ತಿನ ಆಧುನಿಕ ಸಂಸ್ಕೃತಿ, ಜಾಗತೀಕರಣ ಮುಂತಾದ ಹೊಸ ಅಲೆಯಿಂದಾಗಿ, ಭಾರತೀಯ ಕುಟುಂಬ ಶಕ್ತಿಯು ಕ್ಷೀಣಿಸುತ್ತಿರುವಂತೆ ಈಗ ಭಾಸವಾಗುತ್ತಿರುವುದು ಸುಳ್ಳಲ್ಲ. ಆದ್ದರಿಂದಲೇ - ಹೊಸ ನೆಲೆಯಲ್ಲಿಯೇ ನಿಂತು, ಇಂದಿನ ಕುಟುಂಬಗಳ ಪಕ್ಷಿನೋಟ ನಡೆಸಬೇಕಾಗಿದೆ.

  ಕುಟುಂಬ ಎಂಬ ಕಲ್ಪನೆಯ ಅಡಿಪಾಯವೇ ಪರಸ್ಪರ ಹೊಂದಾಣಿಕೆ. ಸಂಬಂಧಗಳ ಬಗೆಗೆ ಪರಸ್ಪರ ಗೌರವ ಮತ್ತು ಸಹ ಸದಸ್ಯರ ಸುಖ ದುಃಖಗಳನ್ನು ಅರ್ಥ ಮಾಡಿಕೊಂಡು ಬದುಕುವುದು - ಕುಟುಂಬದ ಭದ್ರತೆಗೆ ಬೇಕಾದ ಮೂಲಭೂತ ಗುಣಸಂಪತ್ತು. ಪ್ರೀತಿ ಎಂಬುದು  - ಸರ್ವಾಂಗ ಸುಂದರ ಕುಟುಂಬದ ಗುಣಾಕಾರಕ್ಕೆ ತೊಡಿಸುವ ಮುಕುಟಮಣಿ ! 

  ಮಹಿಳೆಯರೂ ಕುಟುಂಬದ ಆದಾಯಕ್ಕಾಗಿ ಉದ್ಯೋಗಸ್ಥರಾಗುತ್ತಿರುವ ಇಂದಿನ ಸಮಾಜದಲ್ಲಿ ಗೌರವ, ಪ್ರೀತಿ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವುದಕ್ಕೆ ಎಲ್ಲಿದೆ ವ್ಯವಧಾನ ?? ಬೆಳಿಗ್ಗೆ ಏಳುವಾಗಲೇ ಅವಸರದ ಆತಂಕ; ಒತ್ತಡ. ಬೇಗಬೇಗ ಬೆಳಗಿನ ತಿಂಡಿಮಾಡಿ ಜಡಿದು, ಮಧ್ಯಾಹ್ನದ ಬುತ್ತಿಗೆ ಹೊಂದಿಸಿ, ಗಂಡ ಮಕ್ಕಳನ್ನು ಸಾಗಹಾಕಿ, ತಾನೂ ತಯಾರಾಗಿ ಉದ್ಯೋಗಕ್ಕೆ ಓಟ. ಸಂಜೆ ಸುಸ್ತಾಗಿ ಮನೆಗೆ ಬಂದರೆ ಮತ್ತೆ ಶುರುವಾಗುತ್ತದೆ... ಸಂಜೆಯ ಕಾಫಿ ತಿಂಡಿ; ರಾತ್ರಿಯ ಊಟ - ಇತ್ಯಾದಿ... ಇವೆಲ್ಲದರ ಜತೆಗೆ ಕೆಲವು ದಿನ ನೆಂಟರ ಕಾಟ. ಅತಿಥಿ ದೇವೋ ಭವ ಎಂಬ ಮಾತು ಒಳಗೊಳಗೇ ಕುಟುಕುತ್ತಿದ್ದರೂ ಕೂಡ ಎರಡು ದೋಣಿಯಲ್ಲಿ ಕಾಲಿಟ್ಟಂತಹ ಒತ್ತಡಗಳಿಂದಾಗಿ, "ನೆಂಟರೂ ಕಾಟ" ಅನ್ನಿಸುವ ಸಂದರ್ಭಗಳೂ ಎದುರಾಗುತ್ತಿವೆ. ಕೆದರಿದ ಮುಡಿಯಲ್ಲಿ - ಅರಳಿದ ಹೂವೊಂದು ನಗುವಂತೆ(!) ಒತ್ತಡದ ಭಾವ... ಉದ್ಯೋಗಸ್ಥ ಮಹಿಳೆಯರಲ್ಲಿ.

  ಸಂಬಳದ ಚೌಕಟ್ಟಿನಲ್ಲಿ ಮನೆಯ ಹೊರಗೂ ದುಡಿಯುವ ಉದ್ಯೋಗಸ್ಥ ಮಹಿಳೆಯರನ್ನು "ದುಡಿಯುವ ಮಹಿಳೆ" ಎನ್ನುವುದು - - ಹೆಚ್ಚಿನ ಒತ್ತಡ ಎಂಬ ದೃಷ್ಟಿಯಿಂದ ಹೀಗೆ ಗುರುತಿಸುವುದೂ ಕೂಡ - ಅನ್ವರ್ಥವೇ ಆಗಿದೆ. ಹಾಗಿದ್ದರೆ ಅಡಿಗೆ ಊಟ ಮನೆವಾರ್ತೆ ಎಂಬುದು ದುಡಿಮೆ ಅಲ್ಲವೆ ? ಅದಕ್ಕೆ ಬೆಲೆ ಇಲ್ಲವೆ ? ಹೊರಗಿನ ದುಡಿಮೆ ಮಾತ್ರ ಉದ್ಯೋಗವೆ ? ಮನೆಯ ಹೊರಗಿನ ದುಡಿಮೆ ಎಂಬುದು ಅಷ್ಟೊಂದು ಕಷ್ಟವೇ? ಎಂದು ಕೇಳಿದರೆ - ಅಲ್ಲವೇ ಅಲ್ಲ; ಹಾಗಲ್ಲ... 

  ತನ್ನ ಮನೆಗಾಗಿ ಮನೆಯೊಳಗಿದ್ದೇ ದುಡಿಯುವುದು ಅಂದರೆ - ಒಂದೇ ದೋಣಿಯಲ್ಲಿ ಕೂತು ಪ್ರಯಾಣ ಮಾಡಿದಂತೆ. ಹೊರಗೂ ಒಳಗೂ ದ್ವಿಪಾತ್ರ ನಿರ್ವಹಿಸುವುದೆಂದಾಗ - ಅದು ಎರಡು ದೊಣಿಯಲ್ಲಿ ಒಂದೊಂದು ಕಾಲನ್ನಿಟ್ಟು ಪ್ರಯಾಣ ಮಾಡಿದಂತಹ ಅನುಭವ. ಸ್ವಲ್ಪ ಸಮತೋಲನ - ಎಚ್ಚರ ತಪ್ಪಿದರೂ ನೀರುಪಾಲಾಗುವ ಅವಸ್ಥೆ ಅದು. ಆದರೆ, "ಇಂತಹ ಬಿಡುವಿರದ ದುಡಿಮೆಯಲ್ಲಿ ತೊಡಗಿಕೊಂಡ ಮಹಿಳೆಯರಿಗೆ ಸುಖವೇ ಇಲ್ಲವೇ?" ಎಂದು ಕೇಳಿದರೆ "ಒಮ್ಮೊಮ್ಮೆ ಯಾಂತ್ರಿಕವೆನ್ನಿಸಿದರೂ - ಶಸ್ತ್ರ ಸನ್ಯಾಸ ಕೈಗೊಳ್ಳುವ ಅನ್ನಿಸಿದರೂ... ಅಲ್ಲಿಯೂ ಸುಖವಿದೆ. ಈ "ಸುಖ" ಎಂಬುದನ್ನು ಅವರವರೇ ಕಂಡುಕೊಳ್ಳುವ "ಚಾಣಾಕ್ಷ ಸಮಯ ನಿರ್ವಹಣೆಯ" ಪ್ರತಿಭೆ ಎನ್ನಬಹುದು.

  ಯಾವುದೇ ಮನೆವಾರ್ತೆಯು ಕಷ್ಟ ಅಲ್ಲವೇ ಆಲ್ಲ. ಆದರೆ, ಆತಂಕರಹಿತವಾಗಿ, ಉದ್ವೇಗವಿಲ್ಲದೆ, ಹಗುರ ಮನಃಸ್ಥಿತಿಯಲ್ಲಿ  ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಸರ್ಕಸ್ಸಿಗೆ ಮಾತ್ರ - ಸ್ವಲ್ಪ ಪೂರ್ವತಯಾರಿ ಬೇಕಾಗುತ್ತದೆ. ಬಹುಪಾಲು ಮಹಿಳೆಯರು ಎಡವಿ ಬೀಳುವ ಸ್ಥಾನ ಇದೇ. ಹೀಗಿರುವಾಗ, ಮನೆ ಮತ್ತು ಕಚೇರಿಯೆಂಬ - ಎರಡು ದೋಣಿಯಲ್ಲಿ ಕಾಲಿಟ್ಟು - ಎರಡೂ ವೇದಿಕೆಗೆ ನಿಷ್ಠೆಯಿಂದ ನ್ಯಾಯ ಒದಗಿಸಲು ಹೆಣಗಾಡುವ ಯಾವುದೇ ದುಡಿಯುವ ಹೆಣ್ಣಿನ ಸ್ಥಿತಿಯು - ಅಷ್ಟೊಂದು ಸರಳವಾಗಿಲ್ಲ ಎಂಬುದು ವಾಸ್ತವ. ಆಕೆಯದು ಅತ್ಯಂತ ಅವಸರದ ಬದುಕಾಗಿ ಬಿಡುತ್ತಿದೆ. ಹೀಗೆ ಪ್ರತೀ ದಿನವೂ.. ಕ್ಷಣವೂ - ಅವಸರ ಮತ್ತು ಒತ್ತಡದ ಯಾಂತ್ರಿಕತೆಗೆ ಸಿಲುಕಿದಾಗ... "ಬದುಕಿನ ಪೂರ್ತಿ ರಸಾಸ್ವಾದನೆಯ ಸುಖಾನುಭವ ಎಂಬುದು ದುಡಿಯುವ ಮಹಿಳೆಗೆ ಕನ್ನಡಿಯ ಗಂಟು" ಎಂದೆನ್ನಿಸುವ ಘಳಿಗೆಗಳು ಬರುತ್ತಲೇ ಇರುತ್ತವೆ. 

  ಅದು ಹೇಗೆಂದರೆ, ಜಿಲೇಬಿಯನ್ನು ಜಗಿಯದೇ - ಗುಳುಂ ಎಂದು ನುಂಗಿದಂತೆ !!! 
ಜಿಲೇಬಿ ತಿಂದೆಯಾ ? ಅಂತ ಕೇಳಿದರೆ... "ಹೌದು"; 
"ಹೇಗಿತ್ತು ?" ಎಂದರೆ... ಸಿಹಿಯಾಗಿತ್ತು... ಅನ್ನಬಹುದು... ಅಷ್ಟೆ.
ಯಾವುದೇ ಅವಸರದ ರಸಾಸ್ವಾದಕ್ಕೆ ಯಾಂತ್ರಿಕ ಮಿತಿ ಎಂಬುದು - ತಡೆಯಾಗಿ ಇದ್ದೇ ಇರುತ್ತದೆ ಅಲ್ಲವೆ ?


  ದುಡಿತದ ಪಾಳಿಯಲ್ಲಿ ಕೆಲಸ ಮಾಡುವ ಸರ್ಕಾರೀ ನೌಕರಿಯಲ್ಲಿರುವ ಗೆಳತಿಯೊಬ್ಬಳು ಮೊನ್ನೆ ಪೇಟೆಯಲ್ಲಿ ಅಕಸ್ಮಾತ್ ಭೇಟಿಯಾದಾಗ ಖುಶಿಯಾಗಿ, ಆಕೆಯನ್ನು ಮನೆಗೆ ಬರುವಂತೆ ಆಹ್ವಾನಿಸಿದ್ದೆ; ಅಷ್ಟೆ. ಅಲ್ಲೇ ಹತ್ತಿರದಲ್ಲೇ ಆಕೆಯ ಮನೆ. ನಾನು ಮನೆಗೆ ಬಾ ಎಂದ ತಕ್ಷಣವೇ - ಬ್ರೇಕಿಲ್ಲದಂತೆ ಅವಳ ಗೋಳಿನ ಕಥೆ ಓಡಿತ್ತು.

  “ಹತ್ತು ಮೈಲಿ ದೂರದಲ್ಲಿರುವ ಅಪ್ಪನ ಮನೆಗೆ ಹೋಗದೆ ಆರು ತಿಂಗಳಾಯಿತು - ಗೊತ್ತುಂಟಾ? ಎಲ್ಲಿಗೆ ಹೋಗಲಿಕ್ಕೂ ಆಗುವುದಿಲ್ಲ. ಬೆಳಗಾಗೆದ್ದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಲಿಕ್ಕೆ ಶುರುವಾದರೆ ರಾತ್ರಿ ಹಾಸಿಗೆಗೆ ಬೀಳುವವರೆಗೂ ಓಡುವುದೇ ಆಗಿದೆ ಮಾರಾಯ್ತಿ. ಒಂದೊಂದು ಸಾರಿ ಯಾಕಾದರೂ ಬೆಳಗಾಗತ್ತೋ ಅನ್ನಿಸುತ್ತದೆ. ಏನೋ ಒಂದಿಷ್ಟು ಓದಬೇಕು ಅಂತ ಹೊಸ ಪುಸ್ತಕಗಳನ್ನು ತಂದಿಟ್ಟುಕೊಂಡಿದ್ದೇನೆ. ದಿನಕ್ಕೆ ಹತ್ತು ಪುಟವನ್ನೂ ಓದಲಿಕ್ಕಾಗುವುದಿಲ್ಲ. ಹೋಗ್ಲಿಬಿಡು. ಒಲೆಯ ಮೇಲೆ ಸಾರು ಕುದಿಯಲಿಕ್ಕೆ ಇಟ್ಟು ಓಡಿಕೊಂಡು ಹೊರಗೆ ಬಂದಿದ್ದೇನೆ. "ಕೊತ್ತುಂಬರಿ ಸೊಪ್ಪು ಇದೆ" ಅಂತ ಅಂದುಕೊಂಡಿದ್ದೆ; ಇವತ್ತು ನೋಡುವಾಗ, ಅದು ಒಣಗಿ ಹೋಗಿದೆ ಮಾರಾಯ್ತಿ. ಈಗ ತಗೊಂಡು ಹೋಗಬೇಕು. ಒಲೆ ಉರೀತಾ ಇದೆ; ಬರ್ಲಾ ?..." 

  ನಾಲ್ಕು ಹೆಜ್ಜೆ ಮುಂದೆ ನಡೆದವಳು ತಿರುಗಿ ನೋಡುತ್ತ, "ನೋಡು.. ನೀನೇ ಒಮ್ಮೆ ನಮ್ಮ ಮನೆಗೆ ಬಾ... ಮರೆತೆ... ನಾಳೆಬೇಡ, ನನಗೆ ಸಂಜೆಯ ಡ್ಯೂಟಿ ಇದೆ. ಶನಿವಾರ ಸಾಯಂಕಾಲ ಐದು ಗಂಟೆಯ ನಂತರ ಬಾ...ಆಯ್ತಾ? ಅಯ್ಯೋ ಆದಿತ್ಯವಾರ ಮಾತ್ರ ಬರಬೇಡ ಮಾರಾಯ್ತಿ - ಬೇಜಾರು ಮಾಡಿಕೊಳ್ಳಬೇಡ. ಆ ದಿನ ತುಂಬ ಕೆಲಸ ಇರ್ತದೆ. ಇಡೀ ವಾರದ ಬಟ್ಟೆ ಒಗೆಯುವುದೇ ಒಂದು extra ಕೆಲಸ. ಅದಕ್ಕೇ ಹೇಳಿದೆ....ಆಯ್ತಾ? ಬರ್ತೇನೆ.”..... ಬಿರುಗಾಳಿಯ ತರಹ ಹೊರಟೇ ಹೋದಳು. ನಾನು ನೋಡುತ್ತಲೇ ಇದ್ದೆ. 

  ಇವಳು ನನ್ನನ್ನು ನಿಜವಾಗಿಯೂ ತನ್ನ ಮನೆಗೆ ಬಾ ಅಂತ ಆಹ್ವಾನಿಸಿದ್ದಾ ಅಥವಾ ಬರಬೇಡ ಎಂದು ಹೇಳಿದ್ದಾ? ಎಂಬುದು ನನಗೆ ನಿಜವಾಗಿಯೂ ಅರ್ಥವಾಗಲಿಲ್ಲ. "ಇವಳ ಜೊತೆ ಮಾತಾಡಲಿಕ್ಕೆ ಇಷ್ಟೆಲ್ಲ ಪೂರ್ವಸಿದ್ಧತೆ ಮಾಡಬೇಕಾ? ಇದೆಂಥಾ ಬದುಕು?" ಎಂದೂ ಅನ್ನಿಸಿತ್ತು.

  ಯಾಕೆ ಹೀಗಾಗ್ತಾ ಇದೆ ? ಎಲ್ಲೋ ಲೆಕ್ಕ ತಪ್ಪುತ್ತಿದೆಯಾ ?
  ಕಾರಣ ಹುಡುಕಲಿಕ್ಕೆ - ಸ್ವಲ್ಪ ಹಿಂದೆ ಸರಿದು ನೋಡಬೇಕಾಗುತ್ತದೆ. 

  ಕೂಡಿ ಬಾಳಿ ಸ್ವರ್ಗ ಸುಖ ಕಾಣಬಹುದಾದ ಕುಟುಂಬ ವ್ಯವಸ್ಥೆ ನಮ್ಮ ಭಾರತೀಯರದು. ಆದರೆ... ನಾನೂ - ನನ್ ಹೆಂಡ್ತಿ ಅಥವಾ ನಾನೂ - ನನ್ ಗಂಡ... ಬೇರೆ ಯಾರೂ ಬೇಡ - ಎಂಬ ಹೊಸ ವ್ಯವಸ್ಥೆಗೆ - ಬಯಸಿ ಬಯಸಿ - ನಮ್ಮನ್ನು ನಾವು ಈಗಾಗಲೇ ಒಡ್ಡಿಕೊಂಡಿರುವಾಗ ಈ ತುದಿಗಾಲ ಓಟದಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ? "ಅಪ್ಪ ಅಮ್ಮ, ಬಂಧುಬಳಗ.. ಯಾರೂ ಬೇಡ" ಎಂಬ ಸೂತ್ರದ ಅಡಿಯಲ್ಲಿ, ತಂತಮ್ಮ ಕುಟುಂಬದ ಗಾತ್ರವನ್ನು ಇಳಿಸಿಕೊಳ್ಳುತ್ತ ಬಂದ ಮೇಲೆ, ಅಂತಹ ಹೊಸ ವ್ಯವಸ್ಥೆಯ ಕೆಲವು ಲಾಭಗಳೊಂದಿಗೆ ನಷ್ಟಗಳನ್ನೂ ಒಪ್ಪಿಕೊಳ್ಳದೆ - ಬೇರೆ ದಾರಿಯುಂಟೆ ?

  ಮದುವೆಯೆಂಬುದು ಗಂಡು ಹೆಣ್ಣಿನ ಮಿಲನ ಮಾತ್ರವಲ್ಲ; ಎರಡು ಕುಟುಂಬಗಳ ಬಂಧನ. ಇದು ಭಾರತೀಯ ಸಿದ್ಧಾಂತ.  ಹೆಣ್ಣು ತನ್ನ ಅತ್ತೆ ಮಾವನನ್ನು "ನಿಮ್ಮಮ್ಮ ನಿಮ್ಮಪ್ಪ" ಅನ್ನುವುದು, ಗಂಡೂ ಕೂಡ ಆಗಾಗ ಭಾವ, ಮಾವ ಎಂದು ಸಂಬೋಧಿಸಲು ಹಿಂಜರಿಯುತ್ತ - "ನಿನ್ನಣ್ಣ ನಿನ್ನಪ್ಪ" ಅನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಹೋಗಿದೆ. ಯಾವುದೇ ಕೌಟುಂಬಿಕ ಸಂಬಂಧಗಳ ಭಾವ ಶೈಥಿಲ್ಯಕ್ಕೆ ಇದೊಂದು ಉದಾಹರಣೆ ಅಷ್ಟೆ. 


  “ನಾನು-ನನ್ನಪ್ಪ-ನನ್ನಮ್ಮ" ಎನ್ನುವಲ್ಲಿಗೇ ಯಾವುದೇ ಸಂಬಂಧಗಳು ಮುಗಿದೀತೆ ? ಮುಗಿಯುವುದಿಲ್ಲ; ಮುಗಿಯಲೂ  ಬಾರದು. ಪ್ರತೀ ಸಂಬಂಧಕ್ಕೂ - ಒಂದು ಹಿಂದೆ - ಮತ್ತೊಂದು ಮುಂದೆ - ಇವೆರಡನ್ನೂ ಜೋಡಿಸಬೇಕಾಗುತ್ತದೆ. ನಾನು ನನ್ನದು ಎಂಬ ಸೀಮಿತ ಭಾವವನ್ನು ಮೀರಿ...  ಅದರಾಚೆಗಿನ ಸಂಬಂಧಗಳೂ ಕುಟುಂಬ ವ್ಯವಸ್ಥೆಗೆ ಅತೀ ಮುಖ್ಯ. ಸಂಬಂಧ-ಬಳಕೆಗಳು ಸುಸೂತ್ರವಾಗಿದ್ದು ಪರಸ್ಪರರ ಕಷ್ಟ ಸುಖಗಳಿಗೆ ಸ್ಪಂದಿಸುವ ವಾತಾವರಣವು ಯಾವುದೇ ಕೌಟುಂಬಿಕ ಪರಿಸರದಲ್ಲಿದ್ದರೆ ಅಂತಹ ಕುಟುಂಬ ಮಾತ್ರವಲ್ಲ.. ಅಂತಹ ಕುಟುಂಬಗಳ ಮಕ್ಕಳು ಕೂಡ - ಮುಂದಿನ ಪೀಳಿಗೆ ಕೂಡ ಬದುಕಿನ ಸಣ್ಣ ಪುಟ್ಟ ಏರುಪೇರುಗಳನ್ನು ಸುಲಭದಲ್ಲಿ ನಿಭಾಯಿಸುವಂತೆ ರೂಪುಗೊಳ್ಳುತ್ತಾರೆ. ಗಂಡು ಮತ್ತು ಹೆಣ್ಣು, ಅನ್ಯ+ಅನ್ಯ ಜೊತೆಯಾಗಿ, ಅನ್ಯೋನ್ಯ ಆದಾಗಲೇ - ಅವು.. ಒತ್ತಡ ಹಂಚಿಕೊಳ್ಳುವ ದಾಂಪತ್ಯ ನಡೆಸುವ ಕುಟುಂಬಗಳಾಗಿ, ಯಾವುದೇ ಬದುಕು - ಉತ್ಸವದ ಸಂಭ್ರಮ ಆಗಿ ಸಂಭವಿಸುತ್ತದೆ. ಅಲ್ಲವೆ ?

ಸ್ಥಾನಗಳ ಸಮರ್ಪಕ ನಿರ್ವಹಣೆ :


  ಅಪ್ಪ - ಅಮ್ಮ, ಅಜ್ಜ - ಅಜ್ಜಿ, ಮಾವ - ಭಾವ, ಅತ್ತೆ - ಅತ್ತಿಗೆ, ಮೈದುನ - ನಾದಿನಿ, ಅಣ್ಣ - ತಂಗಿ, ಅಕ್ಕ - ತಮ್ಮ,  ಮುಂತಾದ ಎಲ್ಲ ಸ್ಥಾನಗಳಿಗೂ ಒಂದಿಷ್ಟು ಅಲಿಖಿತ ಹೊಣೆಗಳೂ ಇರುತ್ತವೆ. ಯಾವುದೇ ಕೌಟುಂಬಿಕ ಯಶಸ್ಸಿನಲ್ಲಿ - ಈ ಎಲ್ಲ ಪಾತ್ರಗಳೂ ಸಮರ್ಪಕವಾಗಿ ಅಭಿನಯಿಸಬೇಕಾಗುತ್ತದೆ. ಈ ಎಲ್ಲ ಸಂಬಂಧಗಳೂ ಕುಟುಂಬವೆಂಬ ಗಾಡಿಯ ಹಲವು ಗಾಲಿಗಳು. ಎಲ್ಲ ಗಾಲಿಗಳೂ ಕಾರ್ಯಶೀಲ ಸ್ಥಿತಿಯಲ್ಲಿದ್ದರೆ ಮಾತ್ರವೇ ಕುಟುಂಬದ ಓಟ ಸರಾಗ. ಗಾಲಿಯ ಕೀಲಿಗಳು ಅಲ್ಲಲ್ಲಿ ಸಡಿಲಿದರೆ ಕುಟುಂಬವೆಂಬ ಯಂತ್ರವು ಸಹಜವಾಗಿಯೇ ಕುಂಟುತ್ತದೆ. ಪ್ರತೀ ಕುಟುಂಬದ ಒಂದೊಂದು ಸ್ಥಾನವೂ ಒಂದೊಂದು ಗಾಲಿ - ಕೀಲಿ. ಆದ್ದರಿಂದ ಸ್ಥಾನಗಳ ಸಮರ್ಪಕ ನಿರ್ವಹಣೆಯೇ ಕುಟುಂಬದ ಯಶಸ್ಸಿನ ಕೀಲಿಕೈ. ಕುಟುಂಬದ ಯಾವುದೇ ಒಬ್ಬ ಪಾತ್ರಧಾರಿಯು ಎಡವಿದರೂ ಇಡೀ ಕೌಟುಂಬಿಕ ನಾಟಕದ ಯಶಸ್ಸಿಗೆ ಅಡ್ಡಿಯಾಗುತ್ತದೆಯಲ್ಲವೆ ? ಹಾಗೇ. ಆದ್ದರಿಂದ - ಇದೊಂದು ಸಾಮೂಹಿಕ ಜವಾಬ್ದಾರಿ. ಸಣ್ಣಪುಟ್ಟ ಏರುಪೇರುಗಳು ಬರುತ್ತಲೇ ಇರುತ್ತವೆ; ಅವನ್ನೆಲ್ಲ, ಮುಕ್ತವಾಗಿ ಆಗಿಂದಾಗ ನಿಭಾಯಿಸಿಕೊಳ್ಳುವುದು ಅತೀ ಅಗತ್ಯ. ದಿನನಿತ್ಯದ ಯಾವುದೇ ಸಮಸ್ಯೆಗಳನ್ನು ಗಂಟುಕಟ್ಟಿ ಜೋಪಾನ ಮಾಡಲೇಬಾರದು. ಅದರಿಂದ ನಿಶ್ಚಯವಾಗಿ, ಕುಟುಂಬದ ಸ್ವಾಸ್ಥ್ಯ ಕೆಡುತ್ತದೆ. ಕೆಲವನ್ನು ಮರೆಯುತ್ತ ಅಥವ - "ಮರೆತಂತೆ" ತಮ್ಮನ್ನು ತಾವೇ ಒಪ್ಪಿಸಿಕೊಳ್ಳುತ್ತ ಬದುಕಬಲ್ಲೆವಾದರೆ... ಆಗ ಮಾತ್ರ, ಕುಟುಂಬಗಳು ಸರಾಗವಾಗಿ ಓಡುತ್ತವೆ. ಉಳಿದುಕೊಳ್ಳುತ್ತವೆ. Forget and Forgive Policy... ಭಂಡನಾದೆನು ನಾನು ಸಂಸಾರದಿ... ಅಂತ ದಾಸರು ಹೇಳಿದ್ದು ಸುಮ್ಮನೇ ಅಲ್ಲ; ಈ ಸಂಸಾರದಲ್ಲಿ ಬದುಕಬೇಕಾದರೆ - ಪದೇಪದೇ - ಕಂಡೂ ಕಾಣದ ಹಾಗೆ ಇರಲೇಬೇಕಾಗುತ್ತದೆ.

ಇವತ್ತಿನ ಕುಟುಂಬದ ವ್ಯವಸ್ಥೆಯಲ್ಲಿ ಜವಾಬ್ದಾರಿಯ ನಿರ್ವಹಣೆಯು ಸಮರ್ಪಕವಾಗಿದೆಯೆ?


  ಬಹುಶಃ ಇಲ್ಲೇ - ಆಧುನಿಕ ಎಂದುಕೊಳ್ಳುವ ಇವತ್ತಿನ ಕುಟುಂಬಗಳು ಎಡವುತ್ತಿರುವಂತಿದೆ. ಇವತ್ತು, ಹಕ್ಕಿನ ಕಾಟ ಜೋರಾಗಿದೆ; ಜವಾಬ್ದಾರಿ ಬೇಡವಾಗಿದೆ. ಪೂರ್ವಾಪರ ಯೋಚನೆ ಮಾಡದೆ ಕೈಗೊಳ್ಳುವ ಅನೇಕ ಬಾಲಿಶ ನಿರ್ಧಾರಗಳು ಇಂದಿನ ಕುಟುಂಬಗಳನ್ನು ಬಳಲಿಸುತ್ತಿರುವಂತೆಯೂ ಕಾಣುತ್ತದೆ. 

  ಮನೆ ತುಂಬ ಬಹುಬೆಲೆಯ ವಸ್ತುಗಳ ಭರಾಟೆಯು ಇಂದಿನ ವಿದ್ಯಮಾನ. ರೇಡಿಯೊ, ಟೀವಿ, ಫ್ರಿಜ್, ಕಂಪ್ಯೂಟರ್, ಒಂದಷ್ಟು ಮೊಬೈಲ್ ಗಳು...ಇತ್ಯಾದಿಗಳನ್ನು ಮನೆತುಂಬ ತುಂಬಿಕೊಳ್ಳುವ, ಆಗಾಗ ಬದಲಿಸುವ ಫ಼್ಯಾಶನ್ನಿನ ಪೈಪೋಟಿಯು ಇಂದಿನ ಸಮಸ್ಯೆಯಾದಂತಿದೆ. ಕೊಳ್ಳುಬಾಕತನವು ಏಕಮಾತ್ರ ಧಂದೆಯಂತಾಗಿಬಿಟ್ಟಿದೆ. ಇದು - ಗೀಳು; ಕೊಂಡುಕೊಳ್ಳುವ ಗೀಳು. ಇದರಿಂದ ನಾನಾ ಸಮಸ್ಯೆಗಳು ಉದ್ಭವಿಸುತ್ತಿವೆ. 

  ಕುಟುಂಬದ ಸದಸ್ಯರ ನಡುವೆ "ಕೊಡುವುದು - ಪಡೆಯುವುದು" ಎಂಬ ಕ್ರಿಯೆಯು ಎಡೆಬಿಡದೆ ನಡೆಯುತ್ತಿರಲೇಬೇಕೆಂಬ ಕೃತಕ  ವಾತಾವರಣವನ್ನು - ಈಗ ನಾವು ನಾವೇ ನಿರ್ಮಿಸಿಕೊಂಡಿದ್ದೇವೆ. ವಿನಾಕಾರಣ ಪೇಟೆ ಸುತ್ತುವುದು; ಅಲ್ಲಿ ಕಂಡದ್ದನ್ನೆಲ್ಲ ಕೊಳ್ಳುವುದು ! ಈ ಬೇಜವಾಬ್ದಾರಿಯ ಚಾಳಿಯನ್ನು ನಿಭಾಯಿಸುವ ಸಲುವಾಗಿಯೇ - ಏನಕೇನ ಪ್ರಕಾರೇಣ ದುಡ್ಡು ಸಂಪಾದಿಸಲಿಕ್ಕೂ ಹೊರಟಿದ್ದೇವೆ. ಅದು ಹಗಲೋ ರಾತ್ರಿಯೋ/ ಹೆಣ್ಣೋ ಗಂಡೋ/ ನೈತಿಕವೋ ಅನೈತಿಕವೋ .... ಒಟ್ಟಾರೆ ದುಡ್ಡಾಗಬೇಕು; ಬಿಡುಬೀಸಾಗಿ ಖರ್ಚು ಮಾಡಬೇಕು ! ತನ್ಮೂಲಕ - "ದೊಡ್ಡ ಮನುಷ್ಯ" ಅನ್ನಿಸಿಕೊಳ್ಳಬೇಕು ! ಇಂತಹ "ಪ್ರತಿಷ್ಠೆಗಳನ್ನು" ತೃಪ್ತಿಪಡಿಸಲು ನಾವು ತೆರುತ್ತಿರುವ ಬೆಲೆಯಾದರೂ ಎಷ್ಟು ? ಕೌಟುಂಬಿಕ ಜಾಲವೇ ಸಡಿಲಗೊಳ್ಳುತ್ತಿಲ್ಲವೆ ? ಯೋಚಿಸಬೇಕು. ನಮ್ಮ ಬೇಕುಗಳಿಗೆ - ನಾವೇ ಲಕ್ಷ್ಮಣರೇಖೆ ಎಳೆದುಕೊಳ್ಳಬೇಕಾದ ಸಮಯ ಬಂದಿದೆ.

   ಹೀಗೆ ದುಡ್ಡಿನ ಹಿಂದೆಯೇ ಓಡುವವರಿಗೆ - ಸಹಜವಾಗಿ, ಯಾರೂ ಬೇಕಾಗುವುದಿಲ್ಲ; ಅಂತಹ ಮಂದಿಗೆ ಯಾವ ಸಂಬಂಧಗಳೂ ಮುಖ್ಯವಾಗುವುದಿಲ್ಲ. ಅವರದು ಏಕದೃಷ್ಟಿ; ಅದು - ದುಡ್ಡು; ಖರ್ಚು ಮಾಡಲು, ಪ್ರತಿಷ್ಠೆ ಬೆಳೆಸಿಕೊಳ್ಳುವ ಸಲುವಾಗಿಯೇ "ದಾನಧರ್ಮದ ವೇಷ ಹಾಕಲು" - ಸೊಕ್ಕಿದ ದುಡ್ಡು ಈಗ ಸಂಚರಿಸುತ್ತಿದೆ. ಖರ್ಚು ಮಾಡುವುದೇ - ಅಂಥವರ ಜನ್ಮಸಿದ್ಧ ಪ್ರತಿಷ್ಠೆ ! ಇಂತಹ ದುಡ್ಡುಗೋರುವ ತಿಣುಕಾಟದಿಂದಾಗಿ, ತಮ್ಮ ಸ್ವಂತ ಕುಟುಂಬಕ್ಕೆ ಗಮನವೀಯಲಾಗದ ಅನೇಕ ಕುಟುಂಬಗಳನ್ನು ನಾನು ನೋಡಿದ್ದೇನೆ. ಅಂತಹ ಮನೆಯ ಮಕ್ಕಳು ಸಮಾಜ ಕಂಟಕರಾಗಿ ವರ್ತಿಸುವುದನ್ನು ಎಲ್ಲರೂ ನೋಡಿದ್ದಾರೆ. ಮಿತಿಮೀರಿದ ಸಂಪತ್ತಿನ ಸಂಗ್ರಹಕ್ಕಾಗಿ ಹೆಣಗಾಡುವ ಅಂತಹ ಕುಟುಂಬಗಳಿಂದಾಗಿ ಸಾಮಾಜಿಕ ಸ್ವಾಸ್ಥ್ಯವೂ ಏರುಪೇರಾಗುತ್ತದೆ. ಇವತ್ತಿನ ಕುಟುಂಬಗಳನ್ನು ಅತಿಯಾಗಿ ಬಳಲಿಸುತ್ತಿರುವ ವರ್ತನೆ ಇದು. ಒಂದಷ್ಟು ಪ್ರಚಾರಕ್ಕಾಗಿ ಊರನ್ನು ಸ್ವಚ್ಛ ಮಾಡುವ ಮೊದಲು, ಅವರವರ ಕುಟುಂಬಗಳನ್ನು ಸ್ವಚ್ಛಗೊಳಿಸಿಕೊಂಡರೆ... ಅದಕ್ಕಿಂತ ದೊಡ್ಡ ದೇಶಸೇವೆ ಉಂಟೆ ? ಪ್ರತಿಯೊಂದು ಮನೆಯು ಸ್ವಚ್ಛವಾದರೆ... ಊರು ಸ್ವಚ್ಛವಾದಂತೆಯೇ ಅಲ್ಲವೆ ? ಯಾಕೆ ಯೋಚಿಸಬಾರದು ?  


  ಮನುಷ್ಯನನ್ನು ಮಕಾಡೆ ಮಲಗಿಸಿ ಅವನ ಬೆನ್ನ ಮೇಲೇ ಸವಾರಿ ಮಾಡುವವನು ದಿಕ್ಪಾಲಕ ಕುಬೇರ - ಎಂಬ ಪೌರಾಣಿಕ ಸಂಕೇತದಲ್ಲಿ ಗೂಢಾರ್ಥ ಕಾಣಬೇಕು. ಅಧೋಮುಖಿಯಾಗುವ, ನತದೃಷ್ಟನಾಗುವ ಸ್ಪಷ್ಟ ಸೂಚನೆಯದು. ಇವತ್ತು  ಸಾಮಾಜಿಕವಾಗಿ ನೋಡಿದರೆ - ದುಡ್ಡಿನಿಂದ ನ್ಯಾಯವನ್ನೂ ಖರೀದಿಸಬಹುದು; ಆಯುಷ್ಯವನ್ನೂ ಗಿಟ್ಟಿಸಿಕೊಳ್ಳಬಹುದೆಂದು ಹೇಳಲಾಗುವ ಇಂದಿನ ದಿನಮಾನದಲ್ಲಿ, .. ಹೀಗೆ ಸಾರ್ವತ್ರಿಕವಾಗಿ ಭಯ ಹುಟ್ಟಿಸುತ್ತಿರುವ ಅವರವರ ಭವಿಷ್ಯವೇ - ಬಹುಪಾಲು ಜನರನ್ನು ಹಣದ ಹಿಂದೆ ಓಡುವಂತೆ ಮಾಡುತ್ತಿದೆ ಎಂಬುದೂ ಸುಳ್ಳಲ್ಲ. "ಮುಂದೆ ಏನಾದೀತೋ ? ಯಾವುದಕ್ಕೂ ಇರಲಿ; ಎಷ್ಟಿದ್ದರೂ ಇರಲಿ..." ಎಂಬ "ಭವಿಷ್ಯದ ಭಯ" - ಇದು. ಮನೆಯಲ್ಲಿ ಸಾಯುವುದು ಸಾವಲ್ಲವೆ ? ಅಪ್ಪೊಲೊ ಆಸ್ಪತ್ರೆಯಲ್ಲಿ ಸಾಯುವುದು ಮಾತ್ರ - ಒಪ್ಪುವ ಸಾವೆ ?... ಗೊತ್ತಿಲ್ಲ. ಆದರೆ ಇಂತಹ ಐಷಾರಾಮಿ ಹಣದ ಅಮಲು ಮತ್ತು ತೆವಲು - ಈಗ ನಮ್ಮನ್ನು - ಕೌಟುಂಬಿಕವಾಗಿ ಮಾತ್ರ ಏಕಾಂಗಿಯಾಗಿಸುತ್ತಿದೆ. ಅರ್ಥವಿಲ್ಲದ ವ್ಯರ್ಥ ದುಡಿಮೆಯಲ್ಲಿಯೇ ಬದುಕುಗಳು ಕಳೆದುಹೋಗುತ್ತಿವೆ. "ಅತ್ತ ದರಿ; ಇತ್ತ ಪುಲಿ" ಎಂಬ ತ್ರಿಶಂಕು ಸ್ಥಿತಿ ಇದು ! ಎಂದಿಗೂ ನೆಮ್ಮದಿಯನ್ನು ತೋರಿಸದ - "ವಸ್ತು ವೈಭೋಗದ ಸೆಳೆತದ ಸ್ವಯಂಕೃತಾಪರಾಧಕ್ಕೆ" - ಬಹುಶಃ - ಈಗ ನಾವೀಗ ಬೆಲೆ ತೆರುತ್ತಿದ್ದೇವೆ.

  ಈ ಎಲ್ಲ ಹಿನ್ನೆಲೆಯಲ್ಲಿ - ಕುಟುಂಬದ ಹಿರಿಯರು ಅವರವರ ಮನೆಯೊಳಗೊಮ್ಮೆ ದೃಷ್ಟಿಹರಿಸಿ, ಸ್ವತಃ ಪ್ರಶ್ನಿಸಿಕೊಳ್ಳಬೇಕಾಗಿದೆ. ಇವತ್ತಿನ ಸಾಮಾಜಿಕ ಚೌಕಟ್ಟಿಗೆ ಹೊಂದುವಂತೆ - ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಗೆ ಸೂಕ್ತವಾದ - ಹೊಸ ಮಾರ್ಗೋಪಾಯಗಳನ್ನೂ ಚಿಂತಿಸಬೇಕಾಗಿದೆ. ಪ್ರತಿಯೊಂದು ಬದುಕುಗಳ ಹಾದಿಯಲ್ಲಿ ಎದುರಾಗುವ ತಪ್ಪು-ಸರಿ, ಬೇಕು-ಬೇಡಗಳ ಕುರಿತ ಪರಿಜ್ಞಾನವನ್ನು - ಬಾಲ್ಯ ಕಾಲದಲ್ಲೇ ಊಡಿ, ಅದು ಜೀರ್ಣವಾಗುವಂತೆ - ಅವರವರ ಕೌಟುಂಬಿಕ ಪರಿಸರವನ್ನು ಕಟ್ಟಿಕೊಳ್ಳಬೇಕಾಗಿದೆ. ಮನೆಯೊಳಗಿರುವ ಟೀವಿ, ಕಂಪ್ಯೂಟರುಗಳನ್ನು ನಮ್ಮ ಮಕ್ಕಳು ಹೇಗೆ ಉಪಯೋಗಿಸಿ-ಕೊಳ್ಳುತ್ತಿದ್ದಾರೆ ? ಮೊಬೈಲ್ ಗಳ ಅಟ್ಟಹಾಸಗಳು ಮಿತಿಮೀರಿವೆಯೆ ? ಯಾವುದೇ ಸದ್ದಿಲ್ಲದ, ಮನುಷ್ಯರಿಲ್ಲದ ಮೂಲೆಗಳಲ್ಲಿ ಕೂತು, ನಮ್ಮ ಮಕ್ಕಳು ಗಂಟೆಗಟ್ಟಲೆ ಮೊಬೈಲ್ ನಲ್ಲಿ ತೊಡಗಿಕೊಳ್ಳುತ್ತಿದ್ದರೆ... ಅದನ್ನು ಅಪಾಯದ ಮುನ್ಸೂಚನೆ ಎಂದು ಭಾವಿಸಬೇಕು. ತಕ್ಷಣವೇ ಚಿಕಿತ್ಸೆ ಸಿಗಬೇಕಾದ ಭಯಂಕರ ರೋಗವಿದು.. ಇವತ್ತಿನ ಮಕ್ಕಳ ಮೊದಲ ಶತ್ರುವೇ ಮೊಬೈಲ್. Prevention is better than cure ಎಂಬಂತೆ... ಸೂಕ್ತವಾಗಿ ಬಳಸಿಕೊಳ್ಳಲು ಗೊತ್ತಿಲ್ಲದ ಎಳೆಯ ವಯಸ್ಸಿನ ಮಕ್ಕಳಿಗೆ ಮೊಬೈಲ್ ಒದಗಿಸಬಾರದು. ಇನ್ನು,... ನಮ್ಮ ಮಕ್ಕಳ ಸ್ನೇಹಿತರು ಯಾರು ? ಅಂತಹ ಸ್ನೇಹಿತರ ಮನೆಯ ಸದಸ್ಯರ ಚಟುವಟಿಕೆಯ ಶೈಲಿ ಹೇಗಿದೆ? ಅವರೆಲ್ಲರ ಅಭಿರುಚಿ ಎಂಥದ್ದು ಎಂಬುದನ್ನೆಲ್ಲ ಅರ್ಥ ಮಾಡಿಕೊಂಡು - ಸ್ನೇಹದ ಆಯ್ಕೆಯ ಕುರಿತೂ ಮನೆಯ ಸದಸ್ಯರಿಗೆ ಆಗಾಗ ತಿಳಿಹೇಳುವ ಶ್ರಮ ತೆಗೆದುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆಯೆ? ಅವಕ್ಕೆಲ್ಲ ನಮಗೀಗ ಪುರಸೊತ್ತು - ವ್ಯವಧಾನವಿದೆಯೆ? ಹೋಗಲಿ. ಪ್ರತೀದಿನವೂ, ದಿನಕ್ಕೆ ಒಮ್ಮೆಯಾದರೂ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಕೂತು ಮಾತಾಡುವುದು, ಜೊತೆಯಾಗಿ ಊಟ ಮಾಡುವುದು, ತಮ್ಮ ದಿನದ ಚಟುವಟಿಕೆಯ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವುದು... ಇವೆಲ್ಲವೂ... ನಡೆಯಬೇಕು; ಇವು, ಕುಟುಂಬವನ್ನು ಒಂದಾಗಿಸುವ ಚಟುವಟಿಕೆಗಳು. 


  ತನ್ಮಧ್ಯೆ.. ಇಂದಿನ ಮನೆಗಳಲ್ಲಿ, ಅನುಭವಸ್ಥ ಹಿರಿಯರು ಅನ್ನಿಸಿಕೊಂಡವರಿಗೆ ಮನೆಗಳಲ್ಲಿ ಏನಾದರೂ ಕಿಮ್ಮತ್ತಿದೆಯೆ ? ವಿನಯವೆಂಬುದನ್ನೇ ಇವತ್ತಿನ ಹೊಸ "ಇಂಗ್ಲಿಷ್ ಪೀಳಿಗೆಗಳು" ಕಲಿಯುತ್ತಿಲ್ಲ ಎಂದಾದರೆ....... ಅದಕ್ಕೆ ಪರಿಹಾರೋಪಾಯ ಏನು ? 

  ಉದ್ಧಟ ಮಕ್ಕಳನ್ನು ಯಾವ ಹಿರಿಯರೂ ಕ್ಷಮಿಸಬೇಕಾಗಿಲ್ಲ. ಮಕ್ಕಳು ಎಂಬ ಮಮಕಾರದ ಭಾವನೆಗಳಿಗೆ ಅಥವ ಹೊರಗಿನ ಸಮಾಜದ ಮಾತುಗಳಿಗೆ ಬೆದರಿ ಯಾವ ಹಿರಿಯರೂ ತಮ್ಮ ತಮ್ಮ "ಕೌಟುಂಬಿಕ ಅನಾಹುತಗಳನ್ನು" ಸಹಿಸಿಕೊಳ್ಳಬಾರದು. ವೃದ್ಧಾಪ್ಯದಲ್ಲಿಯೂ ... ತಮ್ಮ ತಮ್ಮ ಮನಃಶಾಂತಿಗಾಗಿ, ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಯಾವ ಹಿರಿಯರೂ ಹಿಂಜರಿಯಬಾರದು; ತಮ್ಮ ಜವಾಬ್ದಾರಿಗಳನ್ನು ನಿರ್ವಂಚನೆಯಿಂದ ನಿರ್ವಹಿಸುವುದರ ಜೊತೆಗೆ, ತಾವು  ಆರೋಗ್ಯವಂತರಾಗಿರುವವರೆಗೂ - ತಾವಾಗಿಯೇ ತಮ್ಮ ಅಧಿಕಾರ ಮತ್ತು ಕೌಟುಂಬಿಕ ಸ್ಥಾನವನ್ನು ಯಾವ ಹಿರಿಯರೂ  ಹಸ್ತಾಂತರಿಸಬಾರದು; ತಮ್ಮ ಸ್ವಂತ ಸಂಪಾದನೆಯನ್ನು - ಯಾರಿಗೂ - ಮಗನಿಗಾಗಲೀ ಮಗಳಿಗಾಗಲೀ  ವರ್ಗಾಯಿಸಬಾರದು. ಇವತ್ತಿನ ಸಮಾಜದಲ್ಲಿ ಪ್ರತಿಯೊಬ್ಬ ಹಿರಿಯ ನಾಗರಿಕರೂ ಕೈಗೊಳ್ಳಲೇಬೇಕಾದ ಎಚ್ಚರವಿದು.

  ಭಾವನೆಗಳನ್ನು ಅರ್ಥೈಸಿಕೊಳ್ಳಲಾಗದ ಯಾವುದೇ ಕುಟುಂಬದ ಸದಸ್ಯರನ್ನು ನಿರ್ಭಾವದಿಂದ ನಿವಾರಿಸಿಕೊಂಡು, ಮುಕ್ತರಾಗುವುದೂ ತಪ್ಪಾಗದು. ಕಲ್ಲ ಪುತ್ಥಳಿಯ ಬಿಗಿದಪ್ಪಿ ಚುಂಬಿಸಿದರೆ... ಚುಂಬಿಸಿದವರ ಹಲ್ಲು ಹೋದೀತಷ್ಟೆ; ಪ್ರತಿಕ್ರಿಯೆಗಳಿಲ್ಲದಿರುವ ಎಡೆಗಳಲ್ಲಿ ಮೋಹ ಮಮಕಾರಗಳು ಘಾತುಕವೆನಿಸಿಯಾವು. ಆದ್ದರಿಂದ ಯಾವುದೇ ಕುಟುಂಬದ ಹಿರಿಯರಾದವರು - ಪ್ರತಿಸ್ಪಂದನೆಯಿಲ್ಲದ ಸ್ಥಳಗಳಲ್ಲಿ ಕೂತು, ವ್ಯರ್ಥ ಭಾವನೆಗಳಲ್ಲಿ ಬೇಯದೆ - ಸ್ವಂತ ಆತ್ಮವಿಶ್ವಾಸವನ್ನು ಆಶ್ರಯಿಸುವುದು ಒಳ್ಳೆಯದು. ಬದುಕಿನ ೬೦-೭೦ ವರ್ಷಗಳನ್ನು ಯಶಸ್ವಿಯಾಗಿ ಸಾಗಿಸಿದವರಿಗೆ, ಕೊನೆಯ ಹತ್ತಿಪ್ಪತ್ತು ವರ್ಷಗಳನ್ನು - ಹೇಗೋ ಕಳೆದುಬಿಡಬಹುದು; ಅದೇನೂ ಕಷ್ಟವಲ್ಲ. ಆದರೆ, ಆತ್ಮಸ್ಥೈರ್ಯ ಕುಸಿದುಹೋಗದಂತಹ ಜಾಗ್ರತ ಪ್ರಜ್ಞೆಯನ್ನು ಉಳಿಸಿಕೊಳ್ಳಬೇಕು; ಅಂದರೆ - ಹಟಮಾರಿತನ ಅಲ್ಲ. "ಕುಟುಂಬದ ಬೇಲಿಯನ್ನು ಭದ್ರಪಡಿಸಿಕೊಳ್ಳುವ" ಕ್ರಿಯೆ ಅದು. ವೃದ್ಧಾಪ್ಯದ ಹಂತದಲ್ಲಿ, ಸದಾ ಆತ್ಮಸ್ಥೈರ್ಯ ಕುಸಿಯದ ಎಚ್ಚರದಲ್ಲಿದ್ದು, ಹೊಂದಾಣಿಕೆಯ ಮನೋಭಾವದ ಜೊತೆಜೊತೆಗೆ - ತಮ್ಮ ಕುಟುಂಬದ ಆರೋಗ್ಯಕ್ಕಾಗಿ - ಬಾಹ್ಯ ಮತ್ತು ಆಂತರಂಗಿಕ ಸರ್ವೇಕ್ಷಣೆಗಳನ್ನು ನಡೆಸುತ್ತಲೇ ಇರಬೇಕು.

   ಮನೆ ಅಂದ ಮೇಲೆ ಕೆಲವು ವಿಷಯಗಳನ್ನು ಆಗಾಗ ಗಮನಿಸುತ್ತಲೇ ಇರಬೇಕಾಗುತ್ತದೆ. ಒಮ್ಮೊಮ್ಮೆ, ಮನೆ ವಾರ್ತೆಯಲ್ಲಿ ಯಾರಿಗಾದರೂ ಅಧಿಕ ಹೊರೆ ಬಿದ್ದಾಗ ಕುಟುಂಬದ ಇತರ ಸಹ ಸದಸ್ಯರು ಕೈ ಜೋಡಿಸುವ ಅನಿವಾರ್ಯತೆಯನ್ನು ಮನದಟ್ಟುಮಾಡಿಸಿ, ಅದನ್ನು ಆಚರಣೆಗೆ ತರಲು ಮನೆಯ ಹಿರಿಯರು ಸಮರ್ಥರಾಗಿದ್ದೇವೆಯೆ ?? ಹಿರಿಯರಾದವರು - ತಮ್ಮ ಕುಟುಂಬದ ಸದಸ್ಯರೆದುರಲ್ಲಿ ತಮ್ಮ ಮನೆಯ ಹಿರಿಯರನ್ನು - ತಾವು ಸ್ವತಃ ಗೌರವಿಸಿ ತನ್ಮೂಲಕ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದ್ದೇವೆಯೆ? ಅಜ್ಜಿ ಅತ್ತೆ ಮುಂತಾದ ಹಿರಿಯ ಸ್ತ್ರೀಯರ ಅನುಭವದ ಬುತ್ತಿಯುಣ್ಣುತ್ತ "ನಿತ್ಯ ನಿರಾತಂಕದ ದಾರಿ" ಸವೆಸುತ್ತ - ಭವಿಷ್ಯದ ಕುಟುಂಬವನ್ನು ನಾವು ಸದೃಢವಾಗಿ ಕಟ್ಟುತ್ತಿದ್ದೇವೆಯೆ? ಸದೃಢ ಕುಟುಂಬದ ಅಪೇಕ್ಷೆಯುಳ್ಳ ಹೊಣೆಯರಿತ ಹಿರಿಯರು ಕೇಳಿಕೊಳ್ಳಬೇಕಾದ ಪ್ರಶ್ನೆಗಳಿವು. 


   ನೆನಪಿರಲಿ. ಮಾತು ಕೇಳದೆ ಮಲೆತು ನಡೆಯುವ ಕುಟುಂಬದ ಯಾವುದೇ ಸದಸ್ಯರ ಕುರಿತು, ಆಗಿಂದಾಗ ಬಿಗಿನಿಲುವು ತಾಳಲಾಗದ ಹಿರಿಯ ವರ್ಗಕ್ಕೆ - ಅಪಾರ ಯಾತನೆ ಎಂಬುದು ತಪ್ಪಿದ್ದಲ್ಲ. ಪ್ರತಿಸ್ಪಂದನೆ ಇಲ್ಲದ ವ್ಯಕ್ತಿಗಳ ಕಡೆಗೆ ಮಮಕಾರ ತೋರುವುದು - ದುಃಖಕ್ಕೆ ಆಹ್ವಾನ ಕೊಟ್ಟಂತೆ. ಅಂತಹ ಸಂದರ್ಭಗಳಲ್ಲಿ ಹೃದಯದ ಮಾತನ್ನು ಬದಿಗೆ ಸರಿಸಿ, ಬುದ್ಧಿಯನ್ನು ಜಾಗ್ರತಗೊಳಿಸಬೇಕಾಗುತ್ತದೆ. ಕೌಟುಂಬಿಕ ಪ್ರೀತಿ, ಕರ್ತವ್ಯಪಾಲನೆಗಳೆಲ್ಲವೂ ಸರಿ; ಆದರೆ, ಕುಟುಂಬದ ನೀತಿ ನಿಯಮಗಳನ್ನು ಮೀರುವ ವರ್ತನೆಗಳನ್ನು - ತಮ್ಮನ್ನೂ ಸೇರಿಸಿಕೊಂಡು ಯಾರಿಂದಲೇ ನಡೆಯಲಿ, ಅಂತಹ ಉಡಾಫೆಗಳನ್ನು ಯಾವತ್ತೂ  ಕ್ಷಮಿಸದೆ, ಆಗಿಂದಾಗ ದಂಡನೆಗೆ ಒಳಪಡಿಸುವುದು - ಕೌಟುಂಬಿಕ ನೆಲೆಗಟ್ಟನ್ನು ಭದ್ರಪಡಿಸಿಕೊಳ್ಳಬಹುದಾದ ಉತ್ತಮ ಮಾರ್ಗ. ಬಿತ್ತಿದಂತೆ ಬೆಳೆ.. ಎಂಬ ಅನುಭವೋಕ್ತಿಯನ್ನು ಯಾರೂ  ಮರೆಯಬಾರದು. ನಾವು ಬಿತ್ತುವ ಬೀಜಗಳು ಆರೋಗ್ಯವಂತವಾಗಿರಬೇಕಲ್ಲವೆ ?

  ಇವತ್ತಿನ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಯಾವುದೇ ನಾಗರಿಕ ಸಮಾಜಕ್ಕೆ ಶೋಭೆ ತರುವ ಸಂಗತಿಯಲ್ಲ. ಇದೂ ಕೂಡ - ನಾವು materialistic ಬದುಕನ್ನು ಒಪ್ಪಿ ಅನುಸರಿಸುತ್ತಿರುವುದರ ಪ್ರತ್ಯಕ್ಷ ಪ್ರಭಾವ. ಆದರೆ, ದಾರಿ ಮತ್ತು ದಿಕ್ಕು ತಪ್ಪಿದ ಸ್ವಂತ ಕುಟುಂಬದೊಳಗೆ ನರಳುತ್ತ ಇರುವುದಕ್ಕಿಂತ, ಯಾವುದೇ ಹಿರಿಯರು ವೃದ್ಧಾಶ್ರಮ ಸೇರಿಕೊಳ್ಳುವ ನಿರ್ಧಾರ ಕೈಗೊಂಡರೆ... ಅದು - ತಪ್ಪಲ್ಲ. ಆದರೆ, ನಾವು ಎಲ್ಲಿಗೆ ಹೋದರೂ... ಕೌಟುಂಬಿಕ ಮೋಹ ಮಾಯೆಯ ಸೆಳೆತಗಳು ತಪ್ಪುತ್ತದೆಂದಲ್ಲ; ಅಲ್ಲವೆ ? ದೈನಂದಿನ ಒತ್ತಡಗಳು ಸ್ವಲ್ಪ ಕಡಿಮೆಯಾಗುವುದಿದ್ದರೆ... ವೃದ್ಧಾಶ್ರಮವು ತಕ್ಕಮಟ್ಟಿನ ನೆಮ್ಮದಿಯನ್ನು ಕೊಡಲೂಬಹುದು. ಆದರೆ ಅಂತಹ ಅಂತಿಮ ನಿರ್ಧಾರಕ್ಕೆ ಬರುವ ಮುಂಚೆ - ಸ್ವಂತ ಮನಸ್ಸನ್ನು ದೃಢಪಡಿಸಿಕೊಳ್ಳುವ ಪೂರ್ವ ಸಿದ್ಧತೆಯು ಅತ್ಯಂತ ಅಗತ್ಯ ಮತ್ತು ಅನಿವಾರ್ಯವೂ ಕೂಡ. ಜತೆಜತೆಗೆ, ಪೂರ್ವಾರ್ಜಿತ ಹವ್ಯಾಸಗಳೇನಾದರೂ ಇದ್ದರೆ... ಅದರತ್ತ ಗಮನ ಕೇಂದ್ರೀಕರಿಸುವುದೂ - ಉತ್ತಮ.

   ಕ್ಷಿಪ್ರಗತಿಯ ಹೊಂದಾಣಿಕೆಯು ಕೌಟುಂಬಿಕ ಅಗತ್ಯ. ಲಿಯೋ ಟಾಲ್ಸ್ಟಾಯ್ ಹೇಳಿದಂತೆ - "ತಿರಸ್ಕರಿಸಲಾಗದ ಒಂದು ಸುಖವಿದೆ.  ಅದು - ಇನ್ನೊಬ್ಬರಿಗಾಗಿ ಬದುಕು ಸವೆಸುವುದು." ಅಂದೇ ವೇದವ್ಯಾಸರು ಹೇಳಿದ - "ಪರೋಪಕಾರಾರ್ಥಮಿದಂ ಶರೀರಂ" ಎಂಬ ಮಾತನ್ನು ಎಷ್ಟೋ ಸಾವಿರ ವರ್ಷಗಳ ನಂತರ ಟಾಲ್ ಸ್ಟಾಯ್ ಹೇಳಿದ್ದಲ್ಲವೆ ? ಯೋಚಿಸಿ. 


  ಹೀಗೆ... ಇನ್ನೊಬ್ಬರಿಗಾಗಿ ಬದುಕುವ ನೀತಿಯೇ ಭಾರತೀಯ ಕೌಟುಂಬಿಕ ಭದ್ರತೆಯ ಮುಖ್ಯ ಅಂಶವಾಗಿತ್ತು. ಆದ್ದರಿಂದಲೇ, ವಿಶ್ವದ ಯಾವ ಮೂಲೆಯಲ್ಲೂ ಕಾಣಿಸದ ಸುಭದ್ರ ಕುಟುಂಬ ವ್ಯವಸ್ಥೆಯು ಭಾರತದಲ್ಲಿ ಉಳಿದುಕೊಂಡಿತ್ತು; ಈಗಲೂ ನಾಶವಾಗಿಲ್ಲ; ಉಳಿದುಕೊಂಡಿದೆ.
  
  ಕುಟುಂಬ ಸ್ವಾಸ್ಥ್ಯದ ಸೂತ್ರವಿದು. ಇನ್ನೊಬ್ಬರಿಗಾಗಿಯೇ ಪ್ರತಿಯೊಬ್ಬರೂ ಬದುಕುವುದು. "ಕುಟುಂಬ ಪ್ರೀತಿ" ಬೆಳೆಯುವುದೇ ಇಂತಹ ಭಾವನೆಗಳಿಂದ. ಆದರೆ, .. ಬದಲಾಗುತ್ತಿರುವ ಇವತ್ತಿನ ದಿನಮಾನದಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯನಿಂದಲೂ ಅಪೇಕ್ಷಿಸಲಾಗದ ಆದರ್ಶ ಇದು. ಆದ್ದರಿಂದ ವಾಸ್ತವದ ಕಡೆಗೂ ನಾವು ದೃಷ್ಟಿ ಹರಿಸಬೇಕಾಗುತ್ತದೆ. "ಕೇವಲ ತ್ಯಾಗದ ಭಾವನೆಗಳಿಂದಲೇ ಬದುಕನ್ನು, ಕುಟುಂಬವನ್ನು ಕಟ್ಟಿಕೊಳ್ಳಲಾಗುವುದಿಲ್ಲ" ಎಂಬ ಪರಿಸ್ಥಿತಿಗಳು ಈಗ ಎದುರಾಗುತ್ತಿವೆ. ಕುಟುಂಬವನ್ನು ತೂಗಿಸಲು ಪ್ರತಿಯೊಂದು ಕೌಟುಂಬಿಕ ಘಟನೆ, ಭಾವನೆಗಳ ಸಮತೋಲನ ಮತ್ತು ನಿತ್ಯದಿನಚರಿಯ ಹೊಂದಿಕೆಯು ಬಹಳಮುಖ್ಯ - ಎಂಬುದು - ಈಗ ಹೆಚ್ಚು ಹೆಚ್ಚು ಅನುಭವಕ್ಕೆ ಬರುತ್ತಿದೆ. 
  ಹಕ್ಕು ಮತ್ತು ಕರ್ತವ್ಯಗಳ ಸಹಜೀವನವೇ - ಕುಟುಂಬ - ಅಲ್ಲವೆ ?    

   "ಇವತ್ತಿನ ಸಾಮಾಜಿಕ ಅಗತ್ಯಗಳನ್ನು ಹೊಂದಿಸಲು ಗಂಡು ಮತ್ತು ಹೆಣ್ಣು ಇಬ್ಬರಿಗೂ ಉದ್ಯೋಗವೆಂಬುದು ಅನಿವಾರ್ಯ" ಎಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ದಿನಚರಿಯನ್ನು - ಅದಕ್ಕೆ ತಕ್ಕಂತೆ ಹೊಸದಾಗಿಯೇ ಬರೆಯಬೇಕಾಗುತ್ತದೆ. ವೇಗಕ್ಕೆ ಮಣೆಹಾಕುವ ದಿನಗಳಿವು. ತಿಳಿದು, ಕಲಿತು, ಕಲಿತುದನ್ನು ಅವಸರದಲ್ಲಿ ಬದುಕಿಗೆ ಅಳವಡಿಸಿಕೊಳ್ಳುವ ಹೊಂದಾಣಿಕೆಯಲ್ಲೂ - ವೇಗವು ಬೇಕೇ ಬೇಕು. ಒಬ್ಬ ವ್ಯಕ್ತಿಗೆ ಬದುಕನ್ನು ಅರ್ಥಮಾಡಿಕೊಳ್ಳುವುದಕ್ಕೇ ಅರ್ಧ ಜೀವಮಾನ ತಗಲಿಬಿಟ್ಟರೆ, ಅವರು ಬದುಕುವುದು ಯಾವಾಗ ? ಅಲ್ಲವೆ ?

  ಒಲೆಯ ಮೇಲೆ - ಕುದಿಯಲು ಸಾರನ್ನಿಟ್ಟು, ಕೊನೆಯಲ್ಲಿ ಕೊತ್ತುಂಬರಿ ಸೊಪ್ಪಿನ ನೆನಪಾಗುವಂತೆ - ನಮ್ಮ ಬದುಕು ಅವ್ಯವಸ್ಥಿತ ಆಗಬಾರದು. ಸಾರಥಿಯಿಲ್ಲದ ಬಂಡಿಯಂತೆ ನಮ್ಮ ಬದುಕುಗಳನ್ನು ಕಟ್ಟಿಕೊಂಡರೆ... ಅದು ಬರೇ ಅಧ್ವಾನವಲ್ಲದೆ ಇನ್ನೇನೂ ಆಗದು. ಜಾಗ್ರತ ಮನಸ್ಸೇ ನಮ್ಮ ಸಾರಥಿ. ನಮ್ಮ ಪ್ರತೀ ಹೆಜ್ಜೆ, ಮಾತು, ವರ್ತನೆಗಳಿಗೂ.. ತತ್ಸಂಬಂಧಿತ ಎಚ್ಚರ, ಪೂರ್ವ ಸಿದ್ಧತೆ ಇರಲೇಬೇಕು. ಸಮಯದ ಸೂಕ್ತ ನಿರ್ವಹಣೆ, ನಾವು ಅಂದುಕೊಂಡ ಕೆಲಸಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಾಗುತ್ತದೆ... ಇವೆಲ್ಲವೂ ಯಶಸ್ವೀ ಕುಟುಂಬದ ಸೂತ್ರಗಳು. 

  ಆದ್ದರಿಂದ, ನಾವು ದೂರ ನಿಂತ ಪ್ರೇಕ್ಷಕರಾಗದೆ -  ಕುಟುಂಬದ ಪ್ರತೀ ಸದಸ್ಯರೂ ತಮ್ಮ ಮನೆಯ ನಿತ್ಯ ನಾಟಕದ ಸಕ್ರಿಯ ಪಾತ್ರಧಾರಿಗಳಾದರೆ, ಆಗ ಕುಟುಂಬಗಳಲ್ಲಿ ಜೀವ ಸಂಚಾರವಾಗಿ - ಸಹಜ ವೇಗವೂ ಸಿಗುತ್ತದೆ. ಕೆಲಸ ಹಗುರಾಗುತ್ತದೆ. 

  ಇಂತಹ ಸಾಧನೆಗೆ - ಮುಖ್ಯವಾಗಿ ಇಚ್ಛಾಶಕ್ತಿ ಬೇಕು. ಶಿಸ್ತು ಬೇಕು.
  ಇನ್ನು, ಯಾವುದೇ ಸಾಧನೆಗೆ ಪ್ರೀತಿಯ ಜೊತೆಗೆ ದೇಹ ಮತ್ತು ಮನಸ್ಸಿನ ಸಮಸ್ಥಿತಿಯೂ ಅಗತ್ಯ.

  ಮಿತಸಂತಾನ ಮತ್ತು ಸಮಯದ ಸಮರ್ಪಕ ನಿರ್ವಹಣೆಯು ಇಂದಿನ ತಾಂತ್ರಿಕ ಅಗತ್ಯವಾದರೆ, ಎಲ್ಲರೂ ಕೂಡಿ ಮನೆಯ ಎಲ್ಲ ಕೆಲಸಗಳನ್ನೂ ತೂಗಿಸುವುದು ಪ್ರಾಯೋಗಿಕ ಅಗತ್ಯ. ಮಾತ್ರವಲ್ಲದೆ - ದುಡಿಯುವ ಯಂತ್ರವಾಗಿರುವ ಸ್ವಂತ ದೇಹದ ಭಾಷೆಗೂ ಕಿವಿಗೊಡಬೇಕಾಗುತ್ತದೆ. ಸ್ವಂತಕ್ಕೆಂದೇ ಪ್ರತೀದಿನದ ಅರ್ಧ ಗಂಟೆಯನ್ನಾದರೂ ಮೀಸಲಾಗಿಟ್ಟರೆ - ಯೋಗ, ಪ್ರಾಣಾಯಾಮ, ಪ್ರಾರ್ಥನೆ, ಭಜನೆ....ಮುಂತಾದ ಏಕಾಂತದ ಕ್ರಿಯೆಗಳನ್ನು ಆ ಹೊತ್ತಿನಲ್ಲಿ ನಡೆಸಬಲ್ಲೆವಾದರೆ, ಆಯಾ ದೈನಂದಿನ ಒತ್ತಡವನ್ನು ಸಡಿಲಿಸಿ, ಮನಸ್ಸು ಮತ್ತು ದೇಹವನ್ನು ಹಗುರಗೊಳಿಸಿಕೊಳ್ಳಲು ಸುಲಭವಾಗಬಹುದು. 

  ಆಧುನಿಕರ Week end ಕಲ್ಪನೆಯು - ಅಂದಂದಿನ ಒತ್ತಡಗಳನ್ನು ಕಳೆದುಕೊಳ್ಳುವ ಇದೇ ಉದ್ದೇಶ ಹೊಂದಿದ್ದರೂ ಕೂಡ ಅದನ್ನು ಬಳಸಿಕೊಳ್ಳುವ ಮನಸ್ಸುಗಳ ಗೊಂದಲಗಳಿಂದಾಗಿ, ಆ ಪ್ರಯತ್ನಗಳು ಸಫಲವಾಗುತ್ತಿಲ್ಲ; ಪೂರ್ಣ ಪರಿಣಾಮವೂ ಸಿಗುತ್ತಿಲ್ಲ. ಇವತ್ತು ಚಾಲ್ತಿಯಲ್ಲಿರುವ Week End ಗದ್ದಲಗಳು ನಿಜವಾಗಿಯೂ ಒತ್ತಡಗಳನ್ನು ನಿಭಾಯಿಸಲು ಸಹಕರಿಸುತ್ತಿದೆಯೆ ? ಅಥವ ಆಯಾಸ ಹೆಚ್ಚಿಸುತ್ತಿದೆಯೆ ? ಎಂಬುದನ್ನು ವೀಕೆಂಡ್ ಪ್ರಿಯರೇ ಹೇಳಬೇಕಷ್ಟೆ ! 

  ವಿಶ್ರಾಂತಿಯ ಸುಖ ಏನಿದ್ದರೂ - ಅದು ನಾವು ಇದ್ದಲ್ಲೇ ಸಿಗಬೇಕು; ಅಥವ ಪ್ರಶಾಂತ ಪರಿಸರದ ಏಕಾಂತದಲ್ಲಿ ಸಿಗಬೇಕು. ಹೊರಗೆಲ್ಲೋ - ಗದ್ದಲದಲ್ಲಿ ಸಿಗುವ ವಸ್ತು ಅದಲ್ಲ. ಅಲ್ಲವೆ ? ನಾವು ಎಲ್ಲಿಗೆ ಓಡಿದರೂ.. ಬದುಕನ್ನು ಕೊಡವಿಕೊಳ್ಳಲು ಆದೀತೆ ?  ಮನಸ್ಸಿನಲ್ಲಿ ತುಂಬಿಕೊಂಡ ಸಿಹಿ ಕಹಿ ನೆನಪುಗಳನ್ನು ಪರಿಸರ ಹೊಸದಾದ ಮಾತ್ರಕ್ಕೇ - ಕೊಡವಲಾದೀತೆ ? ಕಷ್ಟ. 

  ಆದ್ದರಿಂದಲೇ ಯೋಚಿಸಬೇಕಾಗುತ್ತದೆ. ಈ ಬಗೆಯ ಜಿಪ್ಸಿ ಸಂಚಾರಗಳಿಂದ ತಾವು ಗಳಿಸಿದ್ದೇನು, ಎಷ್ಟು ? ಎಂಬ ಲೆಕ್ಕಾಚಾರವನ್ನು ನಡೆಸಬೇಕು. ಈಗ ಕಾಣುತ್ತಿರುವುದು ಕೇವಲ - ಅಸಂಬದ್ಧವಾಗಿ ಗಳಿಸಿದ ಬಿಕನಾಸಿ ದುಡ್ಡು ಹೊಂದಿದ ಒಂದು ವರ್ಗ, ಇನ್ನೊಂದು - ಯಾರೊಂದಿಗೋ ಸ್ಪರ್ಧೆಗೆ ಬಿದ್ದಂತೆ ಸಾಲ ಮಾಡಿಯಾದರೂ ತುಪ್ಪ ತಿನ್ನುವ ಭ್ರಮೆಯಿಂದ "ದುಡು ದುಡು ಓಡುತ್ತ" ದುಡ್ಡು ಉಡಾಯಿಸುವ ಇನ್ನೊಂದು ವರ್ಗ - ಇವೆರಡರ ನಡುವೆ ಮ್ಯಾರಥಾನ್ ಸ್ಪರ್ಧೆಗಳು ನಡೆದಂತೆಯೂ ಕಾಣುತ್ತದೆ. ಒಟ್ಟಾರೆ... ಏನು ? ಗದ್ದಲ; ಅಷ್ಟೆ. ಪ್ರತಿಷ್ಠೆಯ ಪ್ರದರ್ಶನ; ಪರಿಣಾಮ ಸೊನ್ನೆ - ಅನ್ನಿಸುವುದಿಲ್ಲವೆ ? ಇದೊಂದು ಹೊಸ ಬಗೆಯ ಫ಼್ಯಾಶನ್ನೆ ? ಅಪೇಕ್ಷಿತ ಪರಿಣಾಮ ನೀಡಲಾಗದ Week End ಎಂಬ - ವಾರಾಂತ್ಯದ - ಆಯಾಸ ಹೆಚ್ಚಿಸುವ ತಿರುಗಾಟಗಳಿಂದ ಲಾಭವಾದರೂ ಏನು ? "ಹೊಡಿಗುಲ್ಲು; ನಿದ್ದೆಗೇಡು" ಎಂಬಂತಾಗಿದೆಯೆ ? ಯೋಚಿಸಬಹುದು. 

  ಕುಟುಂಬದ ಸದಸ್ಯರ ಮನಸ್ಸುಗಳು ಸ್ವಚ್ಛ, ಪ್ರಫುಲ್ಲವಾಗಿದ್ದರೆ... ಕುಟುಂಬವೂ ಆರೋಗ್ಯದಿಂದಿರುತ್ತದೆ. ಆದ್ದರಿಂದ ಮನಸ್ಸಿನ ನೈರ್ಮಲ್ಯದತ್ತ ಗಮನಿಸಲೇಬೇಕಾಗುತ್ತದೆ. ಪ್ರತಿದಿನವೂ ಸ್ವಲ್ಪ ಹೊತ್ತು "ಏಕಾಂತದಲ್ಲಿ ತಮ್ಮ ಮನಸ್ಸನ್ನು ತಾವೇ ತೊಳೆದುಕೊಳ್ಳುವ" - ಅಂದರೆ, ನಮ್ಮೊಳಗಿನ ಗದ್ದಲವನ್ನು ಕಡಿಮೆಗೊಳಿಸಿಕೊಳ್ಳುವ ಕ್ರಿಯೆ ನಡೆಯಬೇಕಾಗುತ್ತದೆ. ಅಂದಂದಿನ ಭಾರವನ್ನು ಅಂದಂದೇ ಇಳಿಸಿಕೊಳ್ಳುವ, ತನ್ಮೂಲಕ ಪ್ರತಿದಿನವೂ ಹೊಸ ಬೆಳಗನ್ನು ಮೂಡಿಸಿಕೊಳ್ಳುವಂತಾದಾಗ ಮಾತ್ರವೇ - ಮತ್ತೊಮ್ಮೆ ಹೊಸ ಭಾರ ಹೊರುವ - ಹೊಸ ಉತ್ಸಾಹ ಮತ್ತು ಶಕ್ತಿ ಸಂಚಲನದ ಅನುಭವವಾಗಬಹುದು. ಹೀಗೆ ಸ್ವಚ್ಛವಾದಾಗ - ನಮ್ಮ ಸುತ್ತಲೂ ಕಾಣುವ ಕುಟುಂಬವೆಂಬ ಪರಿಸರವು ಮತ್ತೊಮ್ಮೆ ಪ್ರಿಯವಾಗುತ್ತದೆ. ಕುಟುಂಬವು “ಬೇಕು, ಬೇಕು”- ಅನ್ನಿಸುತ್ತದೆ; ಉತ್ಸಾಹ ಮೂಡುತ್ತದೆ. ಇಂತಹ ಎಲ್ಲ ಸಾಧನೆಗಳಿಗೂ - ನಮ್ಮೊಳಗೇ ಹೊಸ ಮನೋವೇದಿಕೆಯೊಂದನ್ನು ಕಟ್ಟಿ ನಿಲ್ಲಿಸಬೇಕಾದುದು ಅನಿವಾರ್ಯವಾಗಿದೆ. ಮನ ಏವ ಮನುಷ್ಯಾಣಾಂ... ಮನಸ್ಸಿನಿಂದಲೇ ಮನುಷ್ಯ...ಅಲ್ಲವೆ ? ನಮ್ಮ ಬಂಧನಕ್ಕೂ ಬಿಡುಗಡೆಗೂ - ನಮ್ಮ ನಮ್ಮ ಮನಸ್ಸೇ ಕಾರಣವಲ್ಲವೆ ? ಆದ್ದರಿಂದ, ಮನಸ್ಸುಗಳನ್ನು ಪಳಗಿಸಿಕೊಂಡು ಬದುಕಿನ ಸಾರ್ಥಕತೆ ಕಂಡುಕೊಳ್ಳಲು - ಮನುಷ್ಯಸಂಕುಲಕ್ಕೆ ಒದಗಿರುವ ಅತ್ಯುತ್ತಮ ವೇದಿಕೆಯೇ - ಕುಟುಂಬ - ಎಂಬುದರಲ್ಲಿ ಸಂದೇಹ ಬೇಡ. 

  ಈ ಕೌಟುಂಬಿಕ ವೇದಿಕೆಯ ಆಧಾರ ಸ್ತಂಭವೇ ಕ್ಷಿಪ್ರಗತಿಯ ಹೊಂದಾಣಿಕೆ. ಹೊಂದಾಣಿಕೆಯ ingredients ಏನೆಂದರೆ - ಹೊಸ ದಿನಕ್ಕೊಂದು ಹೊಸ ಮಂತ್ರ; ಸಹನೆ - ಸಂಯಮದ ಹೊಸ ಕಾರ್ಯ- ತಂತ್ರ; ಇದು - ಏನನ್ನೂ - "ಕಡಿಯದೆ ಕಟ್ಟುವ" ನವಿರಾದ ಸೂತ್ರ. ಇದೇ - ಕುಟುಂಬ ಯಾತ್ರೆಯ ಒಳಗುಟ್ಟು. ವೇಗಕ್ಕೆ ನಡು ಬಗ್ಗಿಸಿದ ಆಧುನಿಕ ಬದುಕಿನಲ್ಲಿ - ಹೀಗೆ... ಕಗ್ಗಂಟಾಗದಂತಹ ಜತನದ ನಿರ್ವಹಣೆಯಿಂದಲೇ ಯಾವುದೇ ಕುಟುಂಬ ಯಾತ್ರೆಯು ಸುಸೂತ್ರವಾದೀತು ಎನ್ನಿಸುತ್ತದೆ.

  ಇನ್ನು, ಮನೆಯ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇಲ್ಲಿ ಹೇಳಲು ನಾನು ಹೊರಡುವುದಿಲ್ಲ. ಏಕೆಂದರೆ, ಈ ವಸ್ತುವು ಈಗ - ಬಹಳ ವಿಸ್ತಾರವಾದ ಸರಕಾಗಿ ಬಿಟ್ಟಿದೆ. ಆದರೆ ಸೂಕ್ಷ್ಮವಾಗಿ, ಹೆತ್ತವರ ಮತ್ತು ಕುಟುಂಬದ ಸಮನ್ವಯತೆಯ ಬಗ್ಗೆ ಹೇಳಬಹುದು.

  ಮುಖ್ಯವಾಗಿ, ಮನೆಯ ಮಕ್ಕಳನ್ನು ಪೀಡಿಸಬೇಡಿ. ಮಕ್ಕಳ ಬುದ್ಧಿ, ಹೃದಯಗಳು ಸ್ವಚ್ಛವಾಗಿರುವಂತೆ ಗಮನಿಸುತ್ತಿದ್ದರೆ - ಬಹುಶಃ ಸಾಕಾಗುತ್ತದೆ. ಹೆತ್ತವರು ಸ್ವಯಂ ನಿಯಂತ್ರಣ ಹೇರಿಕೊಂಡು, ತಮ್ಮ ಅಪೂರ್ಣ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ನಮ್ಮ ಮಕ್ಕಳು "ಕೆಟ್ಟ ಸ್ಪರ್ಧೆಗೆ ಇಳಿಯದಂತೆ" ನೋಡಿಕೊಳ್ಳುವುದು ಬಹಳ ಮುಖ್ಯ ಅಲ್ಲವೆ ?

  ಏಕೆಂದರೆ, ಪ್ರತಿಯೊಂದು ವ್ಯಕ್ತಿತ್ವಕ್ಕೂ ಅದರದ್ದೇ ಆದ ಇತಿಮಿತಿ ಇರುತ್ತದೆ. ಹೀಗಿರುವಾಗ ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಪೈಪೋಟಿಗೆ ಅವರನ್ನು ತಳ್ಳಿದರೆ - ಮಕ್ಕಳು ಮುದುಡಿಹೋಗಬಹುದೇ ವಿನಃ ಏಳಿಗೆಯಂತೂ ಆಗಲಾರದು.

  ಅಕಸ್ಮಾತ್ ಸ್ಪರ್ಧೆ ನಡೆಸುವುದೇ ಆದರೆ... ಮಕ್ಕಳು ತಮ್ಮೊಂದಿಗೇ ಸ್ಪರ್ಧೆ ನಡೆಸುವಂತಾಗಲಿ. ಅವರವರ ಸಾಮರ್ಥ್ಯವನ್ನು ನಿಧಾನವಾಗಿ ಎತ್ತರಿಸಿಕೊಳ್ಳಲು ಹಿರಿಯರು ಪ್ರೋತ್ಸಾಹಿಸಬಹುದು. ಆದರೆ, ಇನ್ನೊಂದು ಮಗುವಿನ ಹೋಲಿಕೆಯೊಂದಿಗೆ ಸ್ಪರ್ಧೆ ನಡೆಯಬಾರದು. ಅಂತಹ ಸ್ಪರ್ಧೆಗಳಿಂದ - ಮತ್ಸರ, ದ್ವೇಷ... ಮುಂತಾದ ನೇತ್ಯಾತ್ಮಕ ಪರಿಣಾಮ ಉಂಟಾಗಬಹುದು. ಹಾಗಾಗಬಾರದು.

  ನಮ್ಮ ಮಕ್ಕಳ ಬಲ ಅಥವ ಶಕ್ತಿ ಎಲ್ಲಿದೆ ? ವಿಜ್ಞಾನ, ಕಲೆ, ಆಡಳಿತ, ವೈದ್ಯಕೀಯ... ಹೀಗೆ ಯಾವ ಕ್ಷೇತ್ರದಲ್ಲಿ ಮಗುವಿನ ಆಸಕ್ತಿಯಿದೆ ಎಂಬುದನ್ನು ಗಮನಿಸಿ, ಗುರುತಿಸಿ, ಆಯಾ ಕ್ಷೇತ್ರದಲ್ಲಿಯೇ ಮಕ್ಕಳನ್ನು ಅರಳಲು ಬಿಡುವುದು ಸೂಕ್ತವಲ್ಲವೆ ?

  ಸಾರಾಂಶ ಏನೆಂದರೆ...
  ಕೌಟುಂಬಿಕ ಶಿಸ್ತು, ಸಮಯ ನಿರ್ವಹಣೆಯ ಕೌಶಲ್ಯ, ಪ್ರತೀ ಹೆಜ್ಜೆಯಲ್ಲೂ ಎಚ್ಚರ, ಪರಸ್ಪರ ಕಾಳಜಿ... ಇವೆಲ್ಲವೂ ಯಾವುದೇ ಕುಟುಂಬ ನಿರ್ವಹಣೆಗೆ ಅಗತ್ಯವಾದ ಮೂಲವಸ್ತುಗಳು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ತಾನು ಆರೋಗ್ಯವಂತನಾಗಿರುವ ವರೆಗೂ ಆಲಸ್ಯಕ್ಕೆ ಬಲಿಯಾಗಬಾರದು. ಪ್ರತೀ ಕುಟುಂಬದ ಹೆಜ್ಜೆಗಳು - ಸ್ವಚ್ಛ ಬೆಳಕಿನಲ್ಲಿ ನಡೆದಂತಿರಬೇಕು; ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ ಭಾಸವಾಗುವ - ಮುಚ್ಚುಮರೆ - ಸರ್ವಥಾ ಇರಲೇಬಾರದು.

  ಇವತ್ತಿನ "ವೇಗದ ಆಧುನಿಕ ಬದುಕಿನಲ್ಲಿ" - ಕೌಟುಂಬಿಕ ನೆಮ್ಮದಿಯನ್ನು ಕಂಡುಕೊಳ್ಳಲು ಆಯಾ ಕೌಟುಂಬಿಕ ವ್ಯವಸ್ಥೆಗಳಿಗೆ ತಕ್ಕಂತೆ, ಮನೆಯ ಸದಸ್ಯರು ಪ್ರತೀದಿನವೂ ತಮ್ಮನ್ನು ತಾವು - ಆಯಾ ಕುಟುಂಬದ ಬದುಕಿನ ವೇಗಕ್ಕೆ ತಕ್ಕಂತೆ Re-set ಮಾಡಿಕೊಳ್ಳುತ್ತಲೇ ಇರಬೇಕಾಗಿದೆ. 
ಆದ್ದರಿಂದ... ವ್ಯರ್ಥ ಮಾತಿನ ಬುರುಡೆ ಬಿಡುತ್ತ, ವೇದಿಕೆಗಳಲ್ಲಿ ವಿಶ್ವ ಕುಟುಂಬಿಗಳಾಗುವ ಘೋಷಣೆ ಹೊರಡಿಸುತ್ತ, ಅವಾಸ್ತವ ಆದರ್ಶಗಳಿಂದ ಭ್ರಮೆ ಹುಟ್ಟಿಸುವುದನ್ನು ಸದ್ಯಕ್ಕೆ ಪಕ್ಕಕ್ಕಿಟ್ಟುಕೊಂಡು, ಅವರವರು ಕಟ್ಟಿಕೊಂಡು ಏಗುತ್ತ ಬದುಕುತ್ತಿರುವ ಅವರವರ ಕುಟುಂಬವನ್ನು ಅರ್ಥೈಸಿಕೊಳ್ಳುತ್ತ, ಬುದ್ಧಿಪೂರ್ವಕವಾಗಿ, ಮನಸಾರ ಅವರವರ ಕುಟುಂಬವನ್ನು ಆರಾಧಿಸುತ್ತ... ನಿಷ್ಠೆ ಮತ್ತು ಪೂಜ್ಯಭಾವದಿಂದ ಪೋಷಿಸುತ್ತ... ಕೌಟುಂಬಿಕ ನೆಮ್ಮದಿಯನ್ನು ಇತರ ಸದಸ್ಯರಿಗೆ ಕೊಟ್ಟು - ತಾವೂ ಉಳಿಸಿಕೊಂಡರೆ - ಅದೇ ಸುಂದರ ಬದುಕು.

  ಈ ಭೂಮಿಯಲ್ಲಿ ಕೇವಲ - ಕೆಲವು ವರ್ಷ ಮಾತ್ರ ಬದುಕುವುದಕ್ಕೆ - ಅಷ್ಟೇ ಸಾಕಾದೀತು ಅನ್ನಿಸುವುದಿಲ್ಲವೆ ?

  "ಪರೋಪಕಾರಾರ್ಥಮಿದಂ ಶರೀರಂ" ಎಂಬುದು ಎಲ್ಲ ಕುಟುಂಬಗಳ ಧ್ಯೇಯವಾಕ್ಯವಾಗಿರಲಿ ಎಂದು ಆಶಿಸೋಣ.
    
                                                 ---------------------------------------- 

‍ ‌

Friday, April 24, 2009

ಪುಸ್ತಕ ಬಿಡುಗಡೆಯ ಮಾತು...


ದಿನಾಂಕ 27 ರಂದು ಚಾಂದ್ರ ಯುಗಾದಿಯ ದಿನ ಸಂಜೆ 5 ಘಂಟೆಗೆ ಕುಂದಾಪುರದ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನನ್ನ ಚೊಚ್ಚಲ ಕೃತಿಗಳಾದ "ಒಂದಾನೊಂದು ಕಾಲದಲ್ಲಿ" ಮತ್ತು "ಬೆಳಕು ನೀಡುವ ಕಥೆಗಳು" ಎಂಬ ಪುಸ್ತಕಗಳು ಬಿಡುಗಡೆ ಸಂಪ್ರದಾಯದ ಬೆಳಕು ಕಂಡವು


 ಖ್ಯಾತ ಸಾಹಿತಿ ಶ್ರೀಮತಿ ವೈದೇಹಿವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, "ಹಲವು ವ್ಯಕ್ತಿತ್ವದ ಆಕರ್ಷಕ ಸಂಗಮವಾದ ನಾರಾಯಣಿ ದಾಮೋದರ್ ಅವರ ಇನ್ನೊಂದು ಪ್ರತಿಭೆಯು ಹೀಗೆ ಪುಸ್ತಕಗಳಾಗಿ ಮೂಡಿ ಬಂದಿರುವುದು ಒಬ್ಬ ಲೇಖಕಿಯಾಗಿ ಮತ್ತು ಆಕೆಯ ಚಿಕ್ಕಮ್ಮನಾಗಿ ನನಗೆ ತುಂಬಾ ಹೆಮ್ಮೆಯೆನಿಸಿದೆ. ಇದು ಮಕ್ಕಳಿಗೆ ಮಾತ್ರವಲ್ಲ ನಾವೆಲ್ಲರೂ ಓದಬೇಕಾದ ಪುಸ್ತಕಗಳು " ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅಂಬಾತನಯ ಮುದ್ರಾಡಿಯವರು ಮಾತನಾಡುತ್ತಾ " ಎರಡೂ ಪುಸ್ತಕಗಳ ಭಾಷೆಯು ಅತೀ ಸುಂದರವಾಗಿದೆ. ಇಲ್ಲಿರುವುದು ಕಥನ ಕಾವ್ಯ " ಎಂದರು. ಉದಯೋನ್ಮುಖ ಲೇಖಕ ಶ್ರೀ ನವಿಲೂರು ಪ್ರಕಾಶ್ ಅವರು ಉತ್ಸಾಹದಿಂದ ಕಾರ್ಯಕ್ರಮವನ್ನು ನಿರೂಪಿಸಿ ಸೂತ್ರಧಾರಿಯಾದರು. ನನ್ನ ಬಾಲ್ಯದ ಶಾಲಾ ಗುರುಗಳು, ಬಂಧುಗಳು, ಆತ್ಮೀಯರು, ಸಾಹಿತ್ಯಾಸಕ್ತರು, ಆಹ್ವಾನ ತಲುಪಿ ಬಂದವರು, ಕೇವಲ ಸುದ್ದಿ ಕೇಳಿಯೇ ಬಂದವರು ...ಎಲ್ಲರೂ ಅಭಿಮಾನದಿಂದ ಸೇರಿ ಸಮಾರಂಭವು ಕಳೆಗಟ್ಟುವಂತೆ ಮಾಡಿದರು. ಜೊತೆಲ್ಲಿದ್ದ ಹರಸಿ ಕೊಂಡಾಡಿದರು. ಅಭಿಮಾನದ ಮಹಾಪೂರದಲ್ಲಿ ತೇಲುವಂತೆ ಮಾಡಿದ ನನ್ನೂರಿನ ಬಂಧುಗಳನ್ನು ನಾನು ಹೇಗೆ ಸ್ಮರಿಸಿಕೊಂಡರೂ ಅದು ಕಡಿಮೆಯೇ ಿಡುಗೆಗೊಂಡ ಪುಸ್ತಕಗಳನ್ನು ಅಂದಕೊಂಡುಹೋದ ಅವರೆಲ್ಲರೂ - ಓದಿ, ಅನಂತರ ವ್ಯಕ್ತಪಡಿಸುವ ಅನ್ನಿಸಿಕೆಯನ್ನು ನಾನು ಕಾತರದಿಂದ ಕಾಯುತ್ತಿದ್ದೇನೆ. 


ಎಪ್ರಿಲ್ ೧೨ನೇ ತಾರೀಕು ಭಾನುವಾರ, ಬೆಂಗಳೂರಿನ ಬಸವನಗುಡಿಯ Indian Institute of World culture ಸಭಾ ಭವನದಲ್ಲಿ - ಪ್ರಕಾಶಕರಾದ ಅಂಕಿತ ಪುಸ್ತಕ ದವ ಆಶ್ರಯದಲ್ಲಿ ಪುಸ್ತಕಗಳ ಬಿಡುಗಡೆಯ ಸಮಾರಂಭ ನಡೆಯಿತು. ಅದೇ ದಿ ಶ್ರೀ  ಜಿ. ಎನ್. ರಂಗನಾಥ ರಾಯರ "ಕಾಫ್ಕಾ ಕಥೆಗಳು", ಗಿರಿಮನೆ ಶ್ಯಾಮರಾಯರ "ಮಕ್ಕಳನ್ನು ಬೆಳೆಸುವುದು ಹೇಗೆ"- ಎಂಬ ಪುಸ್ತಕಗಳೂ ಬಿಡುಗಡೆಗೊಂಡವು. ಖ್ಯಾತ ವಿಮರ್ಶಕರಾದ ಪ್ರೊ ಸಿ. ಎನ್. ರಾಮಚಂದ್ರನ್ ಹಾಗೂ ವೈದ್ಯಕೀಯ ಬರಹಗಾರರಾದ ಡಾ. ನಾ. ಸೋಮೇಶ್ವರ ಅವರು ಎಲ್ಲ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಕುಂದಾಪುರದ ಬಿಡುಗಡೆಯ ಸಮಾರಂಭವು ಮನೆಯ ಮಗುವನ್ನು ಮುದ್ದಾಡಿದಂತಹ ಪ್ರೀತ್ಯಭಿಮಾನದ ಭಾವವನ್ನು ಮೂಡಿಸಿದ್ದರೆ, ಬೆಂಗಳೂರಿನ ಸಮಾರಂಭವು ವಿಶಿಷ್ಟ ವಾಸ್ತವದ ಭಿನ್ನ ಅನುಭವವನ್ನ ನೀಡಿತ್ತ.
 
ಸಾಹಿತ್ಯ ವಲಯದೊಳಕ್ಕೆ ಅಧಿಕೃತವಾಗಿ ಒಂದೇ ಹೆಜ್ಜೆ ಇರಿಸಿರುವ ನನಗೆ ಅಲ್ಲಿನ ಪರ - ಅಪರಗಳ ಸ್ಥೂಲ ದರ್ಶನವೂ ಆಯಿತು. ಒಂದಿಷ್ಟು ಅಯೋಮಯ. ಕೊಳದ ಮೀನನ್ನು ಎತ್ತಿ ಸಮುದ್ರದಲ್ಲಿ ಬಿಟ್ಟಂತೆ.


ಪ್ರಕಾಶಕರಾದ ಅಂಕಿತದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ತುಂಬ ಶಿಸ್ತಿನಿಂದ ಕಾರ್ಯಕ್ರಮ ನಿರ್ವಹಿಸಿದರು. ಕಂಬತ್ತಳ್ಳಿಯವರ ಪತ್ನಿ ಶ್ರೀಮತಿ ಪ್ರಭಾ ಅವರು ವೇದಿಕೆಯ ಶೃಂಗಾರದಿಂದ ತೊಡಗಿ, ತೆರೆಯ ಹಿಂದಿನ ಎಲ್ಲ ಸಿದ್ಧತೆಗಳಿಗೂ ಹೆಗಲು ಕೊಟ್ಟಿದ್ದರು. ಅಂಕಿತ ಪುಸ್ತಕದ ಎಲ್ಲ ಸದಸ್ಯರೂ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಭಾಗವಹಿಸಿದ್ದು - ಪ್ರಕಾಶ್ ಕಂಬತ್ತಳ್ಳಿಯವರ ಸಂಘಟನಾ ಶಕ್ತಿಗೆ ದ್ಯೋತಕದಂತಿತ್ತು. ನನ್ನ ಪುಸ್ತಕಗಳಿಗೆ ಸುಂದರವಾದ ಚಿತ್ರನ್ನ ಬರೆದ ಶ್ರಚಿತ್ರ ಸೋಮ ಅವರನ್ನು ಮುಖತಃ ಕಂಡು ಮಾತಾಡಿ, ಮೆಚ್ಚುಗೆ ಸೂಚಿಸುವ ಅವಕಾಶವೂ ಸಿಕ್ಕಿತು. ವೇದ, ಉಪನಿಷತ್ತು, ಇತಿಹಾಸ, ಪುರಾಣಗಳಿಂದ ಆಯ್ದ ಕಥಾ ಸಂಕಲನವಾದ "ಒಂದಾನೊಂದು ಕಾಲದಲ್ಲಿ" ಮತ್ತು "ಬೆಳಕು ನೀಡುವ ಕಥೆಗಳು"- ಎಂಬನ್ನುಸ್ತನ್ನ ಬಿಡುಗಡೆ ಮಾಡಿ ಮಾತನಾಡುತ್ತ ಡಾ. ನಾ. ಸೋಮೇಶ್ವರ ಅವರು  "ಮಕ್ಕಳಿಗೆ ಸಾಹಿತ್ಯದ ಯಾವುದೇ ಹಿನ್ನೆಲೆ ಇಲ್ಲದೆ ಹೋದರೆ ಕಥೆಗಳು ಅರ್ಥವಾಗುವುದು ಕಷ್ಟ" ಎಂದು ತಮ್ಮಿಪ್ರಾಯನ್ನು ವ್ಯಕ್ತಿಸಿದ; ಹಿರಿಯರು ಜೊತೆಯಲ್ಲಿ ಕೂತು ಮಕ್ಕಳಿಗೆ ಹೇಳಬಹುದಾದ ಕಥೆಗಳಿವು - ಎಂದೂ ಸೇರಿಸಿದರು. ಅದು ವಾಸ್ತವವೂ ಹೌದು; ನನ್ನ ಉದ್ದೇಶವೂ ಅದೇ ಆಗಿತ್ತು. ಆದರೆ...ಈ ವಾಸ್ತನ್ನು ಒಪ್ಪುವಾಗೂ ನನ್ನೊಳೆ ತಾಕಾಟಿತ್ತು. ನಮ್ಮ  ೇದ, ಪುರಾಣ, ಭಾರತ, ರಾಮಾಯಣದ ಏನೇನೂ ಕಲ್ಪನೆಯಿರದ ವಿದೇಶೀಯರೂ ಕುತೂಹಲದಿಂದ ಭಾರತಕ್ಕೆ ಬಂದು, ನೋಡಿ, ಕೇಳಿ, ಅಭ್ಯಿಸಿ ತಿಳಿಯುವ ಪ್ರಯತ್ನ ಮಾಡುತ್ತಿರುವ ದಿನಗಳಲ್ಲಿ, ಹನ್ನೆರಡು ವರ್ಷ ದಾಟಿದ ಾರೀಯೆನ್ನುವ ಮಕ್ಕಳಿಗೂ ನಮ್ಮದೇ ನೆಲದ ನಮ್ಮ ಕಥೆಗಳು ಕಬ್ಬಿಣದ ಕಡಲೆಯಾಗುತ್ತದೆಯೆಂದರೆ ಇದಕ್ಕಿಂತ ದುರಂತ ಬೇಕೇ? ಕನ್ನಾಡಿನಕ್ಕಿ - ಕನ್ನು ಕಬ್ಬಿಣೆಯಾಗುತ್ತಿದ್ದೆ ಅದಕ್ಕೆ ಕಾರ ಏನು ? ಎಂದು ನನಗೆ ಅನಿಸಿದ್ದೂ ಹೌದು. ಅದೆಲ್ಲಿಯದೋ Harry potter, Cindrella, ಕಾಫ್ಕಾಗಳು ನಮ್ಮ ಮಕ್ಕಳನ್ನು - ುಣಿಯುವಷ್ಟಆಕರ್ಷಿಸುವುದಾದರೆ, ನಮ್ಮ ಸ್ವಂತ ಕಥೆಗಳು ಏಕೆ ರುಚಿಸುವುದಿಲ್ಲ? ೆಟ್ಟಿದೆಲಏಕೆ ಪರಕೀಯವಾಗುತ್ತಿದೆ ? ಇದ ಅಭಿರುಚಿ ಹೀನತೆಯೇ ? ಅಭಿಮಾನ ಶೂನ್ಯತೆಯೇ ? ಇಂದಿನ ಒಡು ಕುಟುಂಬಿರಿಯೋಗಾಡಿತಿಣಾಮೆ ? ಹಿತ್ತಲ ಗಿಡ ಮದ್ದಲ್ಲ ಎಂಬ ತಿರಸ್ಕಾರವೇ ? ಗುಲಾಮತನದ ಪ್ರತೀಕವೇ ? ೊಡ್ಡಸ್ತಿಕೆಯೋರಿಕೆಯೆ ? ಇಂದಿನ ಶಿಕ್ಷಣ ಕ್ರಮದ ಫಲವೇ ?  ನಮ್ಮಕ್ಕಿಗೆ ಸಾಹಿತ್ಯ ಪ್ರೀತಿಯು ಬತ್ತಿಹೋಗುವಂತೆ ಮಾಡಿದ್ದೆ ಅಕ್ಕೆ ಯಾರು ಹೊಣೆ ?

ಇಷ್ಟೆಲ್ಲ ಪ್ರಶ್ನೆಗಳನ್ನು ಹೊತ್ತು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದೇನೆ. ುಸ್ತುರಿತು 
ಿದ ಎಲ್ಲ ಅಭಿಪ್ರಾಯಕ್ಕಾಗಿ ನಾನು ಕಾಯುತ್ತಿದ್ದೇನ. 

ನಮ್ಮ ಮಕ್ಕಳು ಈಜು ಕೊಳದಲ್ಲಿ ಮಾತ್ರ ಈಜಿದರೆ ಸಾಲದು. ವಿಶಾಲವಾದ ವಾರಿಧಿಯಲ್ಲೂ ಈಜಿ ಜಯಿಸಿ ಬರುವಂತಾಗಬೇಕು. ಇದು ನನ್ನ ಆಸೆ. ಕಥೆಯೊಂದನ್ನು ಓದಿ, ಕೇಳಿದ ನಂತರ ಮಕ್ಕಳ ಮನಸ್ಸಿನಲ್ಲಿ ಒಂದಷ್ಟು ಪ್ರಶ್ನೆಗಳು ಹುಟ್ಟಬೇಕು. ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ಸ್ವಪ್ರಯತ್ನದಿಂದಲೇ ಅವ ಜ್ಞಾನಾರ್ಜನೆ ನಡೆಯಬೇಕು. ಹಂತದಲ್ಲಿ ಸಾಗಿ ಅವ ಇನ್ನಷ್ಟು ಪುಸ್ತಕಗನ್ನ ಓದಬೇಕು. ಅಂತಹ ಹುಡುಕಾಟಕ್ಕೆ - "ಓದುವ ಆಟ" ಕ್ಕಇಂತ ಪುಸ್ತಕಗಳು ಪ್ರೇರಣೆ ನೀಡುವಂತಾದರೆ ಅದು ಸಾರ್ಥಕ್ಯವೆಂದು ನಾನು ಅಂದುಕೊಂಡಿದ್ದೇನೆ.

ನಿಮಗೆ ಪುಸ್ತಕಗಳು ಬೇಕಾದರೆ ವಿಳಾಸಕ್ಕೆ ಬರೆಯಿರಿ : ನಾರಾಯಣಿ ದಾಮೋದರ್
4-80\2, ಮಹಾತ್ಮ ನಗರ ಬಡಾವಣೆ, ಬೊಂದೆಲ್, ಮಂಗಳೂರು-575015

ಅಥವ

ಅಂಕಿತ ಪುಸ್ತಕ, 53, ಶ್ಯಾಮ್ ಸಿಂಗ್ ಕೊಂಪ್ಲೆಕ್ಸ್,
ಗಾಂಧೀ ಬಜಾರ್ ಮುಖ್ಯ ರಸ್ತೆ, ಬಸವನಗುಡಿ,
ಬೆಂಗಳೂರು - 560004

Ph:080 2661 7100
     080 2661 7755

ನೀವೂ ಓದಿ, ನಿಮ್ಮ ಸ್ನೇಹಿತರಿಗೂ ಹೇಳಿ.  
ಹಾಗೇ....ಮರೆಯದೆ - ಪುಸ್ತಕಗಳ ಕುರಿತ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.

(ಅಂದು ಬಿಡುಗೆಯಂತ - ಪುಸ್ತಕಗಳನ್ನು ಕುರಿತು ಮಾತನಾಡಿದ್ದ ಶ್ರೀ ನಾ. ಸೋಮೇಶ್ವರ ಅವರಿಗೆ ಅದೇ ವಾರಲ್ಲಿ ನಾನು ಬರೆದ ಪತ್ರ.)


ಶ್ರೀ ನಾ ಸೋಮೇಶ್ವರ ಅವರಿಗೆ -ಹಾರ್ದಿಕ ನಮಸ್ಕಾರ .
ನಿಮ್ಮ ಬ್ಲಾಗಿನಲ್ಲಿ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಹೊಂದಿದ "ಯಕ್ಷ ಪ್ರಶ್ನೆ" ೀರ್ಿಕೆಯನ್ನ- ನೋಡಿದೆ. ಅದರಲ್ಲಿ ನನ್ನ ಪುಸ್ತಕಗಳ ಬಗೆಗೆ (ಬೆಳಕು ನೀಡುವ ಕಥೆಗಳು ಮತ್ತು ಒಂದಾನೊಂದು ಕಾಲದಲ್ಲಿ) - ನಿಮ್ಮ ವಿಸ್ತ್ರತವಾದ ಅಭಿಪ್ರಾಯಗಳನ್ನೂ ಓದಿದೆ. "ಮಕ್ಕಳ ಗಂಟಲಲ್ಲಿ ಈ ಪುಸ್ತಕವು ಇಳಿಯುವುದು ಕಷ್ಟ" ಎಂದು ಪುಸ್ತಕ ಬಿಡುಗಡೆಯ ದಿನ ನೀವು ಹೇಳಿದ ಮಾತುಗಳೇ - ನಿಮ್ಮ ಬ್ಲಾಗಿನಲ್ಲಿ ಅಕ್ಷರ ರೂಪದಲ್ಲಿ ಇದ್ದವು - ಅನ್ನಿಸಿತು. ನಿಮ್ಮ ಅಮೂಲ್ಯ ಸಮಯವನ್ನು ಹೀಗೆ ನನಗಾಗಿ (ನನ್ನ ಪುಸ್ತಕಗಳಿಗಾಗಿ ) ವ್ಯಯಿಸಿದ್ದಕ್ಕೆ ಧನ್ಯವಾದಗಳು.
  
ಅಂದು ಏಪ್ರಿಲ್ 12 ರಂದು ಬೆಂಗಳೂರಿನಿಂದ ಮಂಗಳೂರಿಗೆ ಹಿಂತಿರುಗಿದ ಮೇಲೆ ನನ್ನ ಬ್ಲಾಗ್ನಲ್ಲಿ (krishnachaitanyaa.blogspot.com ) ಪುಸ್ತಕ ಬಿಡುಗಡೆಯ ದಿನದ ನನ್ನ ಅನುಭವ ಹಾಗೂ ಅನ್ನಿಸಿಕೆಯನ್ನ ದಾಖಲಿಸಿದ್ದೇನೆ. ಪುರಸೊತ್ತಾದರೆ ನೋಡಿ.

ಕನ್ನಡ - ನಮ್ಮ ಸ್ವಂತದ್ದು . ಭಾರತ ದೇಶವೂ ಸ್ವಂತದ್ದು. ಇಲ್ಲಿನ ಸಂಸ್ಕೃತಿ, ಇತಿಹಾಸ, ಪುರಾಣವೂ ನಮ್ಮ ಸ್ವಂತದ್ದೇ.
ಆದ್ದರಿಂದಲೇ - ಇವೆಲ್ಲವೂ ನಮಗೆ ಪರಿಚಿತ ಆಗಿರಲೇಬೇಕು. ಈಗೀಗ ಉದ್ದಿತಾಗಿ ಅಪಿಚಿತಾಗಿಸಿಕೊಳ್ಳುವ ಾವೀನ್ಯ ಲ್ಲಿ ಪರಿಚಿತರನ್ನೂ ಪರಿಚಯಿಸಬೇಕಾಗಿ ಬರುತ್ತಿದೆ ಎಂದರೆ - ಅದು ದುರಂತವಲ್ಲವೇ ?

ಸಾಮಾನ್ಯವಾಗಿ, ಯಾವುದೇ ಮಕ್ಕಳು ಪರಿಚಿತರನ್ನು ನೋಡಿದರೆ ಅಳುವುದಿಲ್ಲ. ಆದರೆ ಅಪರಿಚಿತರಿಂದ ದೂರ ಓಡುವುದು ಸಾಮಾನ್ಯ. ಆದರೆ ಈಗ, ನಾವು ಹಿರಿಯರು - ಮಕ್ಕಳನ್ನು ಎರ್ರಾಬಿರ್ರಿಯಾಗಿ ಬೆಳೆಸಿ, ಸ್ವಂತತ್ತು ಪಿಯಂತ ಒಟ್ಟಾರೆ ಗೊಂದಲಕ್ಕೆ ಅವನ್ನದೂಡಿದ್ದೇವೆ ಅಂತ ಅನ್ನಿಸುವುದಿಲ್ಲವೇ ? ಈಗ ನಮ್ಮ ವಿಳಾಸ ನಮಗೊತ್ತಿಲ್ಲದಂತ ಸ್ಥಿತಿ ಬಂಂತಿದೆ. ಆದ್ದಿಂದಪರಿಚಿತರನ್ನೂ ಪರಿಚಯಿಸಬೇಕಾದ ಸಂಕಟವೂ ಎದುರಾಗಿದೆ.

ಬಿಡಿ. ನನ್ನುಮುಲನ್ನು ಹಿರಿಯಾದಿಮ್ಮೊಂದಿಗೆ ಮುಕ್ತಾಗಿ ಂಚಿಕೊಂಡಿದ್ದೇನ;ಷ್ಟೆ. ಮನೆಯ ಹಿರಿಯರುಮ್ಮ ಮಕ್ಕಳನ್ನು ಜೊತೆಯಲ್ಲಿ ಕೂಡಿಸಿಕೊಂಡು ಇಂತಹ ಕಥೆಗಳನ್ನು ಹೇಳುತ್ತಿದ್ದರೆ ...ಅಪರಿಚಿತ ಪಾತ್ರ - ಪ್ರಸಂಗಗಳು ಪರಿಚಿತವಾಗಲು ಎಷ್ಟು ಕಾಲ ಬೇಕು ? ... ಅಲ್ಲವೇ ?

ನಾನು ಆಶಾವಾದಿ . ನೀವೂ ಹಾಗೇ - ಅಂದುಕೊಂಡಿದ್ದೇನೆ. ಿಮ್ಮ ಥಟ್ಟಂತ ಹೇಳಿ - ಕಾರ್ಯಕ್ರಮದ ನಿರಂತರ ನೋಡುಗಳು ನಾನು. ಇನ್ನು ಮುಂದೆ - ನಿಮ್ಮ ಬ್ಲಾಗಿನ "ಯಕ್ಷ ಪ್ರಶ್ನೆ" ಗಳ ಅನುಯಾಯಿ. ಒಬ್ಬ ವೈದ್ಯರಾಗಿದ್ದುಕೊಂಡು ಕನ್ನಡಕ್ಕಾಗಿ ನೀವು ಮಾಡುತ್ತಿರುವ ಕೆಲಸವು ಸಣ್ಣದೇನಲ್ಲ. .

ವಿಶ್ವಾಸವಿರಲಿ .
ನಾರಾಯಣೀ ದಾಮೋದರ್