ನನ್ನ ಬದುಕೊಂದು ಈಸ್ಟ್ ಮನ್ ಕಲರ್ ಸಿನೆಮಾ ಇದ್ದ ಹಾಗಿದೆ. ಅದನ್ನು ಕಟ್ಟಿಕೊಡಲು ಹೊರಟ ಸೂತ್ರಬಂಧದ ಬಗೆಗೆ ಮಾತ್ರ ಈಗ ನಾನು, ಗಮನಿಸಿದರೆ ಸಾಕು. ವಿಷಯ - ವಿಷಾಮೄತಗಳೆಲ್ಲವೂ ತಾವಾಗಿಯೇ ರಂಗ ಪ್ರವೇಶಿಸುತ್ತವೆ.
ಸರಸ ಕವಿ ವಿದ್ವಾಂಸ ಡಾ.ಎಸ್.ವಿ.ಪರಮೇಶ್ವರ ಭಟ್ಟರನ್ನು ೧೯೬೯-೭೦ ರ ಅವಧಿಯಲ್ಲಿ ನಾನು ನೋಡಿದಾಗ, ಬದುಕಿನ ಮುಕ್ಕಾಲು ದಾರಿಯನ್ನು ಅವರು ನಡೆದು ಮುಗಿಸಿದ್ದರು. ಕುಂದಾಪುರದಲ್ಲಿ ನಡೆದ ಸಾಹಿತ್ಯಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಎಸ್ ವಿ ಪಿ ಅವರ ಮಾತುಗಳನ್ನು ಕೇಳಲು ನಾನೂ ಓಡಿದ್ದೆ. ಒಂದು ಪುಸ್ತಕದಲ್ಲಿ ಅವರ ನುಡಿಮುತ್ತುಗಳನ್ನು ದಾಖಲಿಸಿಕೊಂಡಿದ್ದೆ .
ಅಂದು ಎಸ್ ವಿ ಪಿ ಅವರು ಹೇಳಿದ್ದ ಒಂದು ಕತೆಯು ಇತ್ತೀಚಿನ ದಿನಗಳಲ್ಲಿ ನನ್ನನ್ನು ಪದೇಪದೇ ಸ್ಪರ್ಶಿಸುತ್ತಿದೆ .
ಎಸ್ ವಿ ಪಿ ಅವರ ಕತೆಯ ಎಳೆಯನ್ನಷ್ಟೇ ಅವಲಂಬಿಸಿ ಈ ನಿರೂಪಣೆಯು ಸಾಗಿ ಬಂದಿದೆ. " ಅಂದು ರಸವತ್ತಾಗಿ ಭಾಷಣ ಮಾಡುತ್ತಿದ್ದೆನೆಂದು ಇಂದೂ ಕರೆಯುತ್ತಿದ್ದಾರೆ " ಎಂಬ ತಮ್ಮ ಭಾವನೆಯನ್ನು ಪೋಷಿಸಲು ಎಸ್ ವಿ ಪಿ ಅವರು ಈ ಕತೆಯನ್ನು, ಸ್ವಲ್ಪ ಭಿನ್ನವಾಗಿ ಹೇಳಿದ್ದರು.
ತಾತ್ಪರ್ಯ ಏನಪ್ಪಾ ಅಂದರೆ ಎಂತಹ ಪ್ರತಿಭಾವಂತನೇ ಆಗಿದ್ದರೂ ಎಳೆಯ ವಯಸ್ಸಿನಲ್ಲಿ ಆಡುವ ಆಟಗಳಲ್ಲಿ ಶಕ್ತಿ ಚೈತನ್ಯದ ಕಲೆಗಾರಿಕೆಯ ಅನಾವರಣವೂ ಆಗುತ್ತಲೇ ಇರುತ್ತದೆ. ಅರ್ಧ ಹಾದಿ ನಡೆದ ಮೇಲೆ ಹಳೆಯ ಅಮ್ಮನೂ ರುಚಿಯಾದ ಅಡಿಗೆ ಮಾಡಿ ಬಡಿಸುವಂತೆ...ಏನೋ ಒಂದು ಆನಿಕೆಯಲ್ಲಿ, ಅಭ್ಯಾಸಬಲದಿಂದ ಅದೇ ಕೆಲಸವನ್ನು ನಿರ್ವಹಿಸಿದರೂ...ಹಿಂದಿನ "ವೇಗ"ವನ್ನು ತರಲು ಆಗುವುದಿಲ್ಲ. ಸಾರ್ವಜನಿಕ ಕಲಾ ಪ್ರದರ್ಶನಗಳೆಲ್ಲವೂ ವೇಗ ಮತ್ತು ಪ್ರತ್ಯುತ್ಪನ್ನಮತಿಯನ್ನು ಅತಿಯಾಗಿ ಅಪೇಕ್ಷಿಸುತ್ತವೆ. ಆದರೆ ಎಳಸು ಮತ್ತು ಬಲಿತ ಎರಡೂ ಅವಸ್ಥೆಗಳಿಗೂ ಅದರದರದ್ದೇ ಆದ ವೈಶಿಷ್ಟ್ಯಗಳಿವೆ. ಅನುಭವದ ಎಳಸುತನವು ನೇಪಥ್ಯಕ್ಕೆ ಸರಿದು ಪ್ರಬುಧ್ಧತೆಯು ಪರಿಪಾಕಗೊಳ್ಳುವ ಪ್ರತಿಯೊಬ್ಬರ ಮಧ್ಯಂತರದ ಮುಂದಿನ ಭಾಗವು ಅವರವರ ಅನುಭವವನ್ನು ಹಂಚಿಕೊಳ್ಳುತ್ತ ಸುಖಿಸುವ ಕಾಲ. ಮಕ್ಕಳ ಕಿವಿಗೂ ಅಂತಹ ಅನುಭವಗಳು ಬೀಳುತ್ತಿದ್ದರೆ ಮಕ್ಕಳಿಗೂ ಅನಾಯಾಸವಾಗಿ ಜೀವನಪಾಠವು ಲಭಿಸಿದಂತೆ ಆದೀತು. ದೇಹಧರ್ಮವನ್ನು ಗೌರವಿಸುತ್ತ, ವಿಧೇಯತೆಯಿಂದ, ಸ್ವಂತ ಪರಿಧಿಯ ವ್ಯಾಪ್ತಿಯಲ್ಲಿಯೇ ಕ್ರಿಯಾಶೀಲರಾಗುವವರಿಗೆ ಮಧ್ಯಂತರದ ನಂತರವೂ ಈ ಬದುಕಿನಲ್ಲಿ ಅಪಾರ ಸಾಧ್ಯತೆಗಳಿವೆ.
ಹೀಗೆಲ್ಲ ಹೇಳಿದೆ ಅಂತ "ಹ್ವಾಯ್...ನಾನು ನಿಶ್ಶಕ್ತಳಾಗಿದ್ದೇನೆ"...ಎಂದೆಲ್ಲ ಅಂದುಕೊಳ್ಳಬೇಡಿ. ಸದ್ಯಕ್ಕೆ ಅಂತಹ ಸಮಸ್ಯೆಯಿಲ್ಲ. ನನಗೆ ಗೊತ್ತಿದೆ. ಸದಾ ಬಳಕೆಯಾಗುತ್ತಿರುವ ಯಂತ್ರವನ್ನು ಎಷ್ಟು ಮತ್ತು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಪ್ರಜ್ಞೆಯನ್ನು ಜಾಗ್ರತವಾಗಿರಿಸಿಕೊಂಡು, ಪ್ರಾಯೋಗಿಕವಾಗಿಯೂ ರೂಢಿಸಿಕೊಳ್ಳುತ್ತಲೇ ಇದ್ದೇನೆ. ಒಂದು ಕಂಪ್ಯೂಟರಿನ ಹಾರ್ಡ್ ಡಿಸ್ಕಿನಲ್ಲಿ ಅದರ ಸಾಮರ್ಥ್ಯವನ್ನೂ ಮೀರಿದ ಭಾರವನ್ನು ತುರುಕಿಸಿದರೆ (ಬೇಕು - ಬೇಡದ JUNK) ಅದರ ವೇಗವು ಕುಗ್ಗಿ, ಓಡಲು ಹಠ ಮಾಡುವುದೂ / HANG ಆಗುವುದೂ ಇದೆ. ಅಂದರೆ ತ್ರಿಶಂಕು ಸ್ವರ್ಗ. ಆಗ ಅಂಗಡಿಯನ್ನು ಒಮ್ಮೆ ಪೂರ್ತಿ ಮುಚ್ಚಿ (SHUT DOWN), ಪುನರ್ನವೀಕರಣ (REBOOT) ಮಾಡಬೇಕಾಗುತ್ತದೆ...ಅಲ್ಲವೇ ?
ಅದು ಯಂತ್ರದ ವಿಚಾರ. ಮನುಷ್ಯನ ಸಂದರ್ಭದಲ್ಲಿಯೂ ಈ ದೄಷ್ಟಾಂತವು ಹೊಂದುತ್ತದೆ. ಬದುಕಿನ " ಬೇಕು - ಬೇಡಗಳೆಲ್ಲವೂ ಗಂಟುಗಂಟಾಗಿ, ಕೆಲವೊಮ್ಮೆ ಕಗ್ಗಂಟಾಗಿ, ಮಿದುಳೆಂಬ ಹಾರ್ಡ್ ಡಿಸ್ಕಿನಲ್ಲಿ ಎರ್ರಾಬಿರ್ರಿಯಾಗಿ ರಾಶಿಬೀಳುವುದಿದೆ. ಆಗ ಕ್ರಿಯಾಶಕ್ತಿಯ (performance) ವೇಗದಲ್ಲಿಯೂ ವ್ಯತ್ಯಯವಾಗಿ ಅಯೋಮಯವೆನಿಸುವುದೂ - ಸಹಜ. ಆಗ Refresh ಆಗಬೇಕು; ಅನಪೇಕ್ಷಿತ ನಿರುಪಯೋಗೀ "ಮಿದುಳುಕಸ"ವನ್ನು ಅಳಿಸಿ (DELETE) ಹಾಕಬೇಕು . ಅಷ್ಟೇ. ನನ್ನ " ಅಂತರಂಗ ಬಹಿರಂಗ "ದ ಮೂಲಕ, ನನ್ನೊಳಗಿನ ಕೆಲವು "ರಸಕಸಿ" ಮತ್ತು "ಕಸರಸಿ"ಗಳನ್ನು ನಿಮ್ಮ ಹೆಗಲಿನ ಆಧಾರಕ್ಕೆ ಜೋತುಬಿದ್ದು ಹೊರಗೆಳೆದು ಹಾಕಿ, ಹಸಿಹಸಿ ನಾರಾಯಣಿಯಾಗಲು ಹೊರಟಿದ್ದೇನೆ.
"ಶರೀರಮಾಧ್ಯಂ ಖಲುಧರ್ಮ ಸಾಧನಂ" ಎಂಬ ಆರ್ಯೋಕ್ತಿಯಂತೆ ದೇಹವೆಂಬ ದೇವವೀಣೆಯನ್ನು ಶ್ರುತಿಬಧ್ಧಗೊಳಿಸುತ್ತಿದ್ದೇನೆ. ಹಂಚಿಕೊಂಡು ಬದುಕುವ ಸ್ವತಂತ್ರ, ಸಹಜ ಧರ್ಮದತ್ತ ಹೊರಳಿದ್ದೇನೆ . ಇನ್ನು...ನೀ ನನಗೆ, ನಾ ನಿನಗೆ...ಜೀವನ ನಗುತಲಿದೆ.
ಹೊಸ ವರುಷ ೨೦೧೫ - ಎಲ್ಲರಿಗೂ ಒಳಿತನ್ನೇ ತರಲಿ. "ಹಿಟ್ಟಿನ ಹೋಳಿಗೆ"ಯನ್ನು, ಸುಖವೆನಿಸುವಷ್ಟು ಎಲ್ಲರೂ ಚಪ್ಪರಿಸುವಂತಾಗಲಿ. ಊರಿನ ಕಿಟ್ಟಣ್ಣನಿಗೂ ಹೋಳಿಗೆ ಬಡಿಸುತ್ತ ಕಾಯಕವನ್ನು ಗೌರವಿಸುವ. ಸರ್ವಸ್ಸುಖಮವಾಪ್ನೋತು...ಸರ್ವಸ್ಸರ್ವತ್ರನಂದತು.

"ಹಿಟ್ಟಿನ ಹೋಳಿಗೆ ಬಡಿಸುವ ಒಬ್ಬ ಪರಿಣಿತನಿದ್ದ. ಕೆಲವರಿಗೆ ಕಿಟ್ಟಪ್ಪ; ಕೆಲವರಿಗೆ ಕಿಟ್ಟಣ್ಣ . ಎಲ್ಲೇ ಮದುವೆಮುಂಜಿ ನಡೆದರೂ ಹೋಳಿಗೆ ಬಡಿಸಲು ಈತನನ್ನೇ ಕರೆಯುತ್ತಿದ್ದರು. ಮೄದುವಾದ ಹೋಳಿಗೆಗೆ ಮುಕ್ಕಾಗದಂತೆ, ಎಡೆಗಳಿಗೆ ಇಡಿಯಾಗಿ ಬಡಿಸುತ್ತಿದ್ದ ಆ ವ್ಯಕ್ತಿಯ ಕೈಚಳಕವು ಭೋಜನಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತಿದ್ದವು. ಪಾಪ....ದಿನವೂ ದಾಕ್ಷಿಣ್ಯಕ್ಕೆ ಬಿದ್ದು ೨-೩ ಸಮಾರಂಭಗಳಿಗೆ ಈತನೂ ಹಾಜರಾಗುತ್ತಿದ್ದ. ರಾತ್ರಿಯವರೆಗೂ ದುಡಿದು, ತನ್ನ ಮನೆಗೆ ಹಿಂದಿರುಗಿ, ಚಾಪೆ ಕಾಣುವಾಗ ಸೋತು ಸುಣ್ಣವಾಗುತ್ತಿದ್ದ. ಬೆಳಗಾದರೆ ಮತ್ತೆ ಇದೇ ಚಕ್ರ ಸುತ್ತುತ್ತಿತ್ತು. ವರ್ಷದಲ್ಲಿ ಎಲ್ಲೋ ಒಮ್ಮೊಮ್ಮೆ "ಹೋಳಿಗೆ ಭಾಗ್ಯ" ಉಣ್ಣುತ್ತಿದ್ದವರಿಗೆ ಈ ಕಾರಕೂನನನ್ನು ಕಂಡು ಹೊಟ್ಟೆ ಗಿಮಚುತ್ತಿತ್ತು . "ಎಂಥ ಭಾಗ್ಯವಂತ ! ಹೋಳಿಗೆ ಹಿಡಿದವನು ತಿನ್ನದೆ ಇರುವುದುಂಟೇ ? ದಿನವೂ ಹೋಳಿಗೆ ತಿನ್ನುವ ಭಾಗ್ಯ ಯಾರಿಗುಂಟು.." ಎಂದೆಲ್ಲ ಪೋಕು ಮಾತನಾಡುತ್ತ ಉಂಡು ತೇಗುತ್ತ ಆ ಕಷ್ಟಜೀವಿಯ "ಭಾಗ್ಯ"ದ ಬಗೆಗೂ ಕರುಬಿ ಕೆರೆದುಕೊಳ್ಳುತ್ತಿದ್ದರು. ಆತನಿಗೋ...ಹೋಳಿಗೆ ತಿನ್ನುವ ಮಾತಿರಲಿ, ಹೋಳಿಗೆಯ ಪರಿಮಳ ಉಂಡುಂಡೇ ಹೊಟ್ಟೆ ತುಂಬಿರುತ್ತಿತ್ತು (ಅಡಿಗೆಯ ಭಟ್ಟರಿಗೆ ವಿಶೇಷದ ಊಟವೆಂದರೇ ವಾಕರಿಕೆ). ಬೇಸಿಗೆಯ ಕಾಲದಲ್ಲೇ ಹೆಚ್ಚಾಗಿ ನಡೆಯುವ ಭೂರಿಭೋಜನಗಳಲ್ಲಿ ಓಡಾಡಿ ಬೆವರು ಸುರಿಸುತ್ತಿದ್ದ ಆ "ಹೋಳಿಗೆ ವ್ಯಕ್ತಿ"ಗೆ ಒಂದು ಸ್ನಾನ, ಗಂಜಿ - ಉಪ್ಪಿನಕಾಯಿಯ ಬಿಸಿಬಿಸಿ ಊಟ, ಒಂದು ನಿದ್ದೆ ಕೊಡುತ್ತಿದ್ದ ಸುಖವನ್ನು... ರಾಶಿ ಬಿದ್ದ ಹೋಳಿಗೆಯು ಕೊಡುವುದಾದರೂ ಹೇಗೆ ? ಕುರುಡರು ಆನೆಯನ್ನು ಮುಟ್ಟಿ ತಮಗೆ ತೋಚಿದಂತೆ ಬಣ್ಣಿಸಿ ಹೇಳುತ್ತಿದ್ದ ಕತೆಯಂತೆ....ಆ ಹೋಳಿಗೆ "ಪಾತ್ರ"ಕ್ಕೆ ಜನರ ಅಂಬೋಣಗಳೆಲ್ಲ ಲಗಾವಾಗುತ್ತಿರಲಿಲ್ಲ. ಹೀಗಿರುವಾಗ....ಇಂತಹ ಕರ್ಮಯೋಗಿಗೆ ವಯಸ್ಸಾಗುತ್ತಾ ಬಂತು. ಎಡಗೈಯಲ್ಲಿ ಭುಜದೆತ್ತರಕ್ಕೆ ಎತ್ತಿ ಹಿಡಿಯುತ್ತಿದ್ದ ಹೋಳಿಗೆಯ ತಟ್ಟೆಯು ಕಂಪಿಸತೊಡಗಿತ್ತು. ಹೋಳಿಗೆ ಬಡಿಸುವ ಬಲಗೈಯಿಂದ ಎಲೆಗೆ ಬೀಳುತ್ತಿದ್ದ ಹೋಳಿಗೆಯು ಅಲ್ಲಲ್ಲಿ ಹರಿದು ಹೋಗುತ್ತಿತ್ತು. ಜನರು ಆಡಿಕೊಂಡರು..."ಇವನಿಗೆಂಥ ಧಾಡಿ ಮಾರಾಯ್ರೆ..? ಹೂರಣವನ್ನೆಲ್ಲ ಚೆಲ್ಲಿ ಬರೇ ಹೊರಗಿನ ಸಿಪ್ಪೆಯನ್ನಷ್ಟೇ ಇಕ್ಕುತ್ತಿದ್ದಾನಲ್ಲ ? ಎಷ್ಟು ಚುರುಕಾಗಿ ಚೆಂದದ ಹೋಳಿಗೆ ಬಡಿಸುತ್ತಿದ್ದವ...ಈಗ ಏನೂ ಸುಖವಿಲ್ಲ " ಎಂದರು. ಜನಾಭಿಪ್ರಾಯವು ಬೆಳೆಯುತ್ತ ಬಂದು ಆ ಹೋಳಿಗೆಯ ಹಮ್ಮೀರನನ್ನು ಕರೆಸುವುದನ್ನೇ ಬಿಟ್ಟುಬಿಟ್ಟರು. ಬಡವನನ್ನು ಭಡವನಾಗಿಸಲು ಒಂದೇ ಗೆರೆ ಸಾಕು!! ಕೆಲಸ ಮಾಡಿಸದೆ, ಪ್ರೀತಿಯಿಂದ ಯಾರಾದರೂ ಬಡಿಸಿದ, ಒಂದು ಮುಷ್ಟಿ ಉಣ್ಣಲು ಆತನಿಗೆ ಸಂದರ್ಭವೇ ಸಿಗಲಿಲ್ಲ. ಮುಂದೆ ತನ್ನ ಕುಟುಂಬ ಮತ್ತು ಬಡತನದೊಂದಿಗೆ ಹೋಳಿಗೆಯ ಕನಸು ಕಾಣುತ್ತ ಇಂತಿಪ್ಪ ಕಿಟ್ಟಣ್ಣನು ಸುಖವಾಗಿ ಶೇಷಾಯುಷ್ಯವನ್ನು ಕಳೆದನು..." ಎಂಬಲ್ಲಿಗೆ ಈ ಕತೆ ಮುಗಿಯಿತು.