"ಇದೇನು? ಇಡೀ ಸಭಾಂಗಣ ಖಾಲಿಯಾಗಿದೆಯಲ್ಲ ? ನಮ್ಮ ತ್ರಿಜ್ಯನ ಪುಸ್ತಕ ಬಿಡುಗಡೆ ಇವತ್ತು ಹೌದಾ ಅಲ್ಲವಾ?...ಓಹೋ...ಯಾರೋ ಇಬ್ಬರು ವೇದಿಕೆಯ ಮೇಲೆ ಓಡಾಡುತ್ತಿದ್ದಾರೆ...ಮೇಲೆ ಹೋಗಿ ಹತ್ತಿರದಿಂದ ನೋಡುತ್ತೇನೆ..."
.........
.........
ಬನ್ನಿ ...
ಪ್ರಸಿದ್ಧ ಕತೆಗಾರ ತ್ರಿಜ್ಯ ಅವರ * ಸ
ಹೊಸ ಕಥಾ ಸಂಕಲನ * ಹಿ
ಪರಿಧಿ * ತ
ಬಿಡುಗಡೆ - ನಂಜಪ್ಪ ಅವರಿಂದ
ಯಮುನ ವೇದಿಕೆ
ಸುಮನಸ ಅವರ ಕವನ ಸಂಕಲನ *
ದಾರಿಯ ತೋರೋ * ಸ್ವಾಗತ
ಬಿಡುಗಡೆ - ಪ್ರೊ. ಕುಂ. ಡೀ. ಅವರಿಂದ
ದಿನಾಂಕ : ೩೨. ೧೩. ೩೦೦೧.
ಸಮಯ : ಅಪರ ರಾತ್ರಿ ೨೫ ಗಂಟೆ.
........________........________........
ದೊಡ್ಡ ಬರಹದ - ಗೋಡೆ ಪಟ್ಟಿಯನ್ನು ವೇದಿಕೆಯ ಹಿಂದಿನಿಂದ ದೊಡ್ಡದಾಗಿ ಕಾಣುವಂತೆ ನಾಲ್ಕು ಜನ ಎಳೆದು ಕಟ್ಟಿದರು. ಅಂದರೆ ಕಾರ್ಯಕ್ರಮವೇನೋ ಇದೆ ಅಂತಾಯ್ತು. ಸಿದ್ಧವಾಗಿದ್ದ ಧ್ವನಿವರ್ಧಕವನ್ನು ತಟ್ಟಿ ಕುಟ್ಟಿ ಊದಿ ಪರೀಕ್ಷಿಸತೊಡಗಿದರು. "ರಾಮ ರಾಮಾ, ಅದನ್ನು ಪರೀಕ್ಷಿಸುವುದಕ್ಕೆ ಕರ್ಕಶವಾಗಿ ಹೀಗೆಲ್ಲ ಯಾಕೆ ತಟ್ಟುತ್ತಾರೋ ? ...ನನಗೇನಂತೆ ? ನೋಡಲು ಬಂದವನಿಗೆ ಅಧಿಕಪ್ರಸಂಗ ಯಾಕೆ ?
ಅರೆರೇ.... ಜನ ಇಣುಕಿ ಇಣುಕಿ ಎಲ್ಲಿಗೆ ಹೋಗುತ್ತಿದ್ದಾರೆ ? ನೋಡಿ ಬರುತ್ತೇನೆ...
ಓಹೋ....ಎಲ್ಲರಿಗೂ ಇಲ್ಲಿ ಹೊಟ್ಟೆ ಸಮಾರಾಧನೆ ನಡೆಯುತ್ತಿದೆಯಲ್ಲ ? ಬಿಸಿಬಿಸಿ ಅಂಬೊಡೆ, ಶಿರ, ಕಾಫಿ, ಚಹಾ...
ಈಗ ಒಬ್ಬೊಬ್ಬರಾಗಿ ತೇಗುತ್ತ ಒಳಗೆ ಹೋಗುತ್ತಿದ್ದಾರೆ. ಬರೆಬರೆದು ಪೀಡಿಸುವವರನ್ನು ದಾರಿಗೆ ತರುವ ಪ್ರಕಾಶಕ ಮಹಾಶಯ ಇವರೇ ಇರಬೇಕು. ದೇಶಾವರಿ ನಗುತ್ತ ಓಡಾಡುತ್ತಿದ್ದಾರೆ. ಅವರ ಜೊತೆಗಿರುವ ಆ ಹೆಂಗಸು ಪ್ರಕಾಶಕರ ಪತ್ನಿಯಿರಬೇಕು. ಅರೆರೇ...ಸಭಾಂಗಣದಲ್ಲಿ ತಿರುಗುತ್ತಿದ್ದ ಇವರಿಬ್ಬರೂ ಧಾವಂತದಿಂದ ಹೊರಗೆ ಓಡಿದರಲ್ಲ ? ಯಾರೋ ಭಾರೀ ಕುಳ ಬಂದಿರಬೇಕು. ಓಹೋ... ಒಬ್ಬರಲ್ಲ; ಒಂದು ದೊಡ್ಡ ಗುಂಪೇ ಒಳಗೆ ನುಗ್ಗಿದೆ. ಒಂದು ಕ್ಷಣದಲ್ಲಿ ಇಡೀ ಸಭಾಂಗಣವೇ ತುಂಬಿ ಹೋಯ್ತಲ್ಲ ?
ಮತ್ತೊಮ್ಮೆ ಧ್ವನಿವರ್ಧಕದ ಜೀವ ಹಿಂಡಲು ಶುರುವಾಯಿತು. ಹಲೋ ಹಲೋ...ಪಟ್ಟ್ ಪಟ್ಟ್, ಫೂ ಫೂ...
ನಮ್ಮ "ಸಹಿತ ಯಮುನ ವೇದಿಕೆ"ಯ ಹಾಮಂತ್ರಣವನ್ನು ಮನ್ನಿಸಿ ಹಾಗಮಿಸಿದವರಿಗೆಲ್ಲ ಹಾತ್ಮೀಯ ಸ್ವಾಗತ.
ಓಹ್..ಶುರುವಾಗಿದೆ. ನಾನು ಬದಿಯಲ್ಲಿದ್ದು ನೋಡುತ್ತೇನೆ.
ಇಂದು ಪುಸ್ತಕ ಬಿಡುಗಡೆಯನ್ನು ಮಾಡಲಿರುವ ಸಾಹಿತ್ಯ ರಣ ಮಾರ್ತಾಂಡ ಸಮಾನರಾದ ನಂಜಪ್ಪನವರು ವೇದಿಕೆಗೆ ಹಾಗಮಿಸಬೇಕೆಂದು ಪ್ರಾರ್ಥನೆ. (ಘನಘೋರ ಚಪ್ಪಾಳೆ) ಇನ್ನೊಬ್ಬರು - ಸಾಹಿತ್ಯ ವಾರಿಧಿಯ ತಿಮಿಂಗಿಲ ಪ್ರೊಫೆಸರ್ ಕುಂ. ಡೀ ಅವರೂ ಹಾಗಮಿಸಬೇಕು. (ಕೆಲವೇ ಚಪ್ಪಾಳೆ...)
ಹಿಂದಿನ ಕಾರ್ಯಕ್ರಮದ ಪ್ರಾಯೋಜಕರೂ ವಿಕ್ಯಾತ ಹುದ್ದಿಮೆದಾರರೂ ಆದ ನಂಜಪ್ಪನವರಿಗೆ ಹಾರ್ದಿಕ ಸ್ವಾಗತ. (ಮತ್ತೊಮ್ಮೆ ಚಪ್ಪಾಳೆ) ಎಲ್ಲ ಹತಿತಿಗಳನ್ನೂ ನಮ್ಮ ಪ್ರಕಾಶಕರಾದ ಶಿಂಗಣ್ಣ ಅವರು ವೇದಿಕೆಗೆ ಕರೆ ತರಬೇಕೆಂದು ಪ್ರಾರ್ಥನೆ. (ಬಹುಶಃ ಕೆಲವರಿಗೆ ಏನಾದರೂ ದೈಹಿಕ ಐಬು ಇರಬಹುದು..ಅಂದುಕೊಂಡೆ)
(ಅರೆ...ಎಲ್ಲರೂ ಸರಸರ ನಡೆದುಕೊಂಡು ವೇದಿಕೆ ಹತ್ತಿದರಲ್ಲ ? ನಾಕು ಹೆಜ್ಜೆ ನಡೆದು ವೇದಿಕೆ ಹತ್ತಲಿಕ್ಕೆ ಶಿಂಗಣ್ಣನವರ ಊರುಗೋಲು ಯಾಕೆ ? ಅವರಿಗೆ ಇನ್ನೊಂದು ಜೊತೆ ಯಾಕೆ ? ಬಹುಶಃ ಮತ್ತೊಂದು ಕೃತಕ ಗೌರವದ ಹೊಸ ವೈಖರಿ ಇರಬಹುದು !)
ಎಲ್ಲರೂ ವೇದಿಕೆ ಹತ್ತಿ ಕುರ್ಚಿ ತುಂಬಿದರು.
"ಹೀಗ ಕತೆಗಾರ ತ್ರಿಜ್ಯ, ಕವಿ ಸುಮನಸ ಅವರೂ ವೇದಿಕೆಗೆ ಹಾಗಮಿಸಬೇಕು..." ಅಂತ ಘೋಷಿಸಿದ ಕೂಡಲೇ ಕೊನೆಯಲ್ಲಿ ತಮ್ಮನ್ನೂ ಕರೆದರಲ್ಲ ಅನ್ನುವ ಉದ್ವೇಗದಲ್ಲಿ ಇಬ್ಬರೂ ಲೇಖಕರು - ಧಡಬಡ ವೇದಿಕೆ ಏರಿದರು. ಸಭೆಗೆ ಕೈ ಮುಗಿದು ಅಲ್ಲಿ ಖಾಲಿಯಿದ್ದ ಎರಡು ಕುರ್ಚಿಯಲ್ಲಿ ಆಸೀನರಾದರು.
"ಹೀಗ... ಪ್ರಾರ್ಥನೆ" ಅಂತ ಹೇಳಿದ ಕೂಡಲೇ ಇಬ್ಬರು ಹುಡುಗಿಯರು ಬಂದು ವೇದಿಕೆಯಲ್ಲಿ ನಿಂತರು. ಸಭಿಕರೆಲ್ಲ ಎದ್ದು ನಿಂತರು. ನಾನು ಅಲ್ಲೇ ಬದಿಯಲ್ಲಿದ್ದೆ. ಪ್ರಾರ್ಥನೆ ಶುರುವಾಯಿತು. ಅದು ನಾನು ದಿನವೂ ಹೇಳುವ, ನನಗೆ ಗೊತ್ತಿದ್ದ ಶ್ಲೋಕವೇ ಆಗಿತ್ತು. ಗಜಾನನಂ ಭೂತಗಣಾದಿ ಸೇವಿತಂ...ಪ್ರಾರ್ಥನೆಯ ಮತ್ತು ನಿಲ್ಲುವ ಶಾಸ್ತ್ರ ಮುಗಿದ ಮೇಲೆ ಮತ್ತದೇ "ಹಾಹಾ"ಕಾರ ಶುರುವಾಯಿತು.
ನಮ್ಮ ಪ್ರಕಾಶಕರಾದ ಶಿಂಗಣ್ಣನವರಿಂದ ಹೀಗ ಸ್ವಾಗತ ನುಡಿ...ಅಂದ ಕೂಡಲೇ ಶಿಂಗಣ್ಣನವರು ಲಗುಬಗೆಯಿಂದ ಬಂದು, ಮೈಕನ್ನು ಎರಡು ಬಾರಿ ತಟ್ಟಿ, ಎದುರಿನಿಂದ ಚಿತ್ರ ತೆಗೆಯುತ್ತಿದ್ದ ಯಂತ್ರವಾಹಕರತ್ತ ನಗುವನ್ನು ಚೆಲ್ಲಿ, ಅವರನ್ನು ತೃಪ್ತಿಪಡಿಸಿ, ಒಮ್ಮೆ ಕೆಮ್ಮಿ, ಧ್ವನಿ ಪೆಟ್ಟಿಗೆಯ ಗೇರ್ ಹಾಕಿದರು. ಪ್ರಾಯೋಜಕರಾದ ನಂಜಪ್ಪ ಅವರ ಗುಣಗಾನ ಮಾಡುತ್ತ ಹೋದರು. "ಇಂತಹ ವಿಶಾಲ ಹೃದಯದ ಮಂದಿ ಇರದಿದ್ದಿದ್ದರೆ ಯಾವ ಲೇಖಕನೂ ಉಳಿಯುತ್ತಿರಲಿಲ್ಲ. ಹಾಗೆ ನೋಡಿದರೆ, ಬರೆಯುವುದೇನು ದೊಡ್ಡ ಕೆಲಸವಲ್ಲ. ಬರೆದದ್ದನ್ನು ಎಲ್ಲರಿಗೆ ತಲುಪಿಸುವುದೇ ದೊಡ್ಡ ಕೆಲಸ. ಆ ಕೆಲಸವನ್ನು ನಂಜಪ್ಪನವರು ಮಾಡುತ್ತಿದ್ದಾರೆ. ನನ್ನ ಹಿಂದಿನ ಶಕ್ತಿಯೇ ಸನ್ಮಾನ್ಯ ನಂಜಪ್ಪನವರು." (ಚಟಪಟ ಚಪ್ಪಾಳೆ) ಚಪ್ಪಾಳೆಯ ಸ್ಫೂರ್ತಿಯಿಂದ - "ಲೇಖನಿ ಹಿಡಿಯುವ ಮಂದಿ ನಮ್ಮ ನಂಜಪ್ಪನಂಥವರಿಗೆ ಯಾವಾಗಲೂ ಋಣಿಯಾಗಿರಬೇಕು..." ಎಂದೂ ಹೇಳಿಬಿಟ್ಟರು. (ಮಜಬೂತಾದ ಚಪ್ಪಾಳೆ ಸದ್ದು; ಶಿಂಗಣ್ಣನವರು ಕೈಮುಗಿದು ನಂಜಪ್ಪನವರತ್ತ ತಿರುಗಿ ತಲೆಬಾಗಿದರು.) ನಮ್ಮ ಪ್ರಕಾಶನ ಸಂಸ್ಥೆಯ ಹಿಂದಿನ ಶಕ್ತಿಯೇ ನಂಜಪ್ಪ ಅವರು...ಸಾರ್, ತಮಗೆ ಸ್ವಾಗತ...(ಕುಂಠಿತವಾಗುತ್ತಿದ್ದ ಚಪ್ಪಾಳೆ ಸದ್ದು ಮತ್ತೆ ಮೊಳಗಿತು) ಇನ್ನು, ಪ್ರೊ. ಕುಂ. ಡೀ ಅವರಿಗೂ, ತ್ರಿಜ್ಯ, ಸುಮನಸ ಅವರಿಗೂ ಸ್ವಾಗತ....ಅಂತ ಒಂದೇ ವಾಕ್ಯದಲ್ಲಿ ಹೇಳಿ ಮುಗಿಸಿಬಿಟ್ಟರು." (ಚಪ್ಪಾಳೆ ಸದ್ದಿಲ್ಲ. ನಾನು ಹೊಡೆದೆ. ಆದರೆ ನನಗೇ ಕೇಳಿಸಲಿಲ್ಲ.)
ಸಭೆಯಲ್ಲಿದ್ದ ಒಬ್ಬ ಗೊಣಗುತ್ತಿದ್ದ. "ಎಂಥ ವಿಚಿತ್ರ ಗತಿ ಬಂತು ನೋಡಿದ್ರಾ ರಾಮಯ್ಯ ? ಬರೆಯುವವನಿಗಿಂತ ದುಡ್ಡು ಬಿಸಾಡುವವನೇ ದೊಡ್ಡವನಾಗಿ ಬಿಟ್ಟ್ನಲ್ಲ ? ಇವತ್ತು ಪುಸ್ತಕ ಬಿಡುಗಡೆ ಆಗುತ್ತದೆ - ಸಾಹಿತಿಗಳ ಮಾತು ಕೇಳುವ ಅಂತ ನಾವು ಬಂದರೆ ಇಲ್ಲಿ ನಡೆಯುತ್ತಿರುವ ಹೈಕಭಾವ ನೋಡಿ...ಬಂದ ಕೂಡಲೇ ಅಂಬೊಡೆ, ಕಾಫಿ ಕೊಟ್ಟು ನಮ್ಮನ್ನೆಲ್ಲ ಶಿಂಗಳೀಕ ಮಾಡಿದರಲ್ಲ ? ಕಳ್ಳ ದಾರೀಲಿ ದುಡ್ಡು ಮಾಡಿ ಅದೇ ದುಡ್ಡು ಬಿಸಾಡಿ ಈಗ ಹೊಗಳಿಸಿಕೊಳ್ಳುತ್ತ ಅಲ್ಲಿ ಕೂತವನ ಪೊಗರು ನೋಡಿ...ಚಪ್ಪಾಳೆ ತಟ್ಟುವುದಕ್ಕೆ ಜನರನ್ನೂ ತಾನೇ ಕರಕೊಂಡು ಬಂದಿದ್ದಾನೆ...ಕಳ್ಳ ನಂಜಪ್ಪನಿಗೆ ಸುಳ್ಳು ಶಿಂಗಣ್ಣ ಸಾಕ್ಷಿ ಅಂತ ಹೊಸ ಗಾದೆ ಹುಟ್ಟಬಹುದು. ನಮ್ಮ ಎಡ ಬದಿಯಲ್ಲಿ ಕೂತ ಮುವ್ವತ್ತು ನಲುವತ್ತು ಜನರೂ - ಆ ನಂಜಪ್ಪನ ಬೆಂಬಲಿಗರು; ಸಾಕಿದ ಭಟರು. ನಂಜಪ್ಪನ ಸನ್ನೆಗೆ ತಕ್ಕ ಹಾಗೆ ಕುಣಿಯುವುದೇ ಅವರ ಕೆಲಸ. ಈ ಪ್ರಕಾಶಕ ಶಿಂಗಣ್ಣನಿಗೂ ಹೊಟ್ಟೆಪಾಡು. ನಮ್ಮ ಶಿಂಗಣ್ಣ ಇದ್ದಾನಲ್ಲಾ..ಅವನು ನಂಜಪ್ಪನ ಮುಖವಾಡ ಮಾತ್ರ. ನಂಜಪ್ಪನ ಕಳ್ಳ ದುಡ್ಡು ಇಲ್ಲಿ ಸ್ವಲ್ಪ ಬಿಳಿಯಾಗುವ ಹಾಗಿದೆ...ಎಲ್ಲರೂ ದುಡ್ಡಿನ ಗುಲಾಮರು ಅಣ್ಣಾ...ಇವರ ನಡುವಿನಲ್ಲಿ ನಮ್ಮ ಶಾರದಮ್ಮ ಮಾತ್ರ ಚಟ್ಣಿ..." (ನನಗೆ ಪುಸಕ್ಕಂತ ನಗು ಬಂತು...ಪುಣ್ಯ; ಯಾರೂ ಗಮನಿಸಲಿಲ್ಲ)
..................ಅಷ್ಟರಲ್ಲಿ,
"ಹೀಗ... ಪುಸ್ತಕಗಳ ಬಿಡುಗಡೆ..." ಅಂತ ಘೋಷಣೆಯಾಯ್ತು.
ತಕ್ಷಣ, ವೇದಿಕೆಯಲ್ಲಿದ್ದವರೆಲ್ಲರೂ ಎದ್ದು ನಿಂತರು. ಬಣ್ಣದ ಕಾಗದದಲ್ಲಿ ಕಟ್ಟಿದ್ದ ಎರಡು ಪುಸ್ತಕಗಳ ಗಂಟನ್ನು ನಂಜಪ್ಪ ಮತ್ತು ಕುಂ. ಡೀ - ಏಕಕಾಲದಲ್ಲಿ ಬಿಚ್ಚಿದರು. (ಚಪ್ಪಾಳೆ) ವೇದಿಕೆಯಲ್ಲಿದ್ದವರ ಕೈಯಲ್ಲೆಲ್ಲ ಎರಡೆರಡು ಪುಸ್ತಕವನ್ನು ಕೊಟ್ಟರು. (ರಂಗಪೂಜೆಯ ನಂತರ ಪ್ರಸಾದ ಹಂಚುವುದು ನೆನಪಾಯಿತು)
"ಹೀಗ...ಪ್ರೊಫೆಸರ್ ಕುಂಡೀ ಅವರಿಂದ ಸುಮನಸ ಅವರು ಬರೆದ ಕವನಗಳ ಸಂಕಲನ - "ದಾರಿಯ ತೋರೋ" ಕುರಿತು ಹೆರಡು ಮಾತು..."
ಪ್ರೊಫೆಸರ್ ಕುಂಡೀ ಎದ್ದರು. ಕುತ್ತಿಗೆಯನ್ನು ಹೆಗಲಿನಿಂದ ಬೇರ್ಪಡಿಸಿಕೊಳ್ಳಲು ಹೆಣಗುವಂತೆ ಎರಡು ಸಾರಿ ತಮ್ಮ ಕುತ್ತಿಗೆಯನ್ನು ಬಲಕ್ಕೂ ಎಡಕ್ಕೂ ಒಗೆದು, ತಮ್ಮ ಮಾತನ್ನು ಶುರು ಮಾಡಿದರು. ಸಂಕಲನದಲ್ಲಿದ್ದ ಒಂದೊಂದು ಕವನವನ್ನೂ ಉದ್ಧರಿಸುತ್ತ ನಿರರ್ಗಳವಾಗಿ ಮಾತಾಡುತ್ತ ಹೋದರು. ಕೊನೆಗೆ "ಬೆಕ್ಕು" ಎಂಬ ಕವನದ ಒಳಗೆ ಕೈಕಾಲು ಆಡಿಸತೊಡಗಿದರು. ಬೆಕ್ಕಿನ ಹತ್ತಿರಕ್ಕೆ ಬಂದು ನಿಂತರು. ಎತ್ತಿ ತೋರಿಸಿದರು. "ಸುಮನಸ ಅವರ ಬೆಕ್ಕು - ಎಂಬ ಈ ಕವನದಲ್ಲಿ ಕವಿ ಸುಮನಸ ಅವರು ಬೆಕ್ಕಿನ ಆಂತರ್ಯವನ್ನು ಅನುಭವಿಸಿ ಬರೆದಿರುವ ಭಾವ ಮತ್ತು ಶೈಲಿಯು ಅದ್ಭುತವಾಗಿದೆ. ಬೆಕ್ಕಿನ ಒಳ ತುಮುಲಗಳನ್ನು ಕವಿ ಮನಸ್ಸು ಎಳೆ ಎಳೆಯಾಗಿ ಹಿಡಿದಿಟ್ಟಿದೆ. ಬೆಕ್ಕಿನ ಧ್ಯಾನಸ್ಥ ಸ್ಥಿತಿಯ ಹೊಸ ಪ್ರತಿಮಾ ಮಜಲು ಕವನದಲ್ಲಿ ಢಾಳಾಗಿ ಅನಾವರಣಗೊಂಡಿದೆ..ಕಳ್ಳ ಮನಸ್ಸಿನ ಪ್ರತೀಕವಾಗಿಯೂ ಬೆಕ್ಕು ಇಲ್ಲಿ - ತನ್ನನ್ನು ಬಿಚ್ಚಿಕೊಂಡಿದೆ. ಈ ಕವನ ಓದಿದ ಮೇಲೆ ಬೆಕ್ಕು ಎಂಬ ವಸ್ತುವು ನನ್ನನ್ನು ಚಿಂತನೆಗೆ ಒಡ್ಡಿದೆ. ನಾವು ಯಾಕೆ ಹರಿಹರ ಕುಮಾರವ್ಯಾಸನ ಬಗೆಗೇ ಸಂಶೋಧನಾ ಪ್ರಬಂಧವನ್ನು ಬರೆಯಬೇಕು ? ಯಾಕೆ ಬೆಕ್ಕು, ಕಾಗೆಯ ಬಗ್ಗೆ ಬರೆಯಬಾರದು ? ವಿಜ್ಞಾನಿಗಳಿಗೂ ಭೇದಿಸಲಾಗದ ಶೋಷಿತ - ಹಿಂದುಳಿದ ಪ್ರಾಣಿ ಪಕ್ಷಿಗಳೂ ಅಧ್ಯಯನದ ವಿಷಯವಾಗಬೇಕು. ಅದಕ್ಕಾಗಿ, ನನ್ನ ಮುಂದಿನ ಪ್ರಬಂಧದಲ್ಲಿ ಬೆಕ್ಕಿನ ಭಾವ ಜಗತ್ತಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತೇನೆ. ಬೆಕ್ಕಿನತ್ತ ನನ್ನನ್ನು ಆಕರ್ಷಿಸಿದ, ನನ್ನನ್ನು ಪ್ರೇರೇಪಿಸಿದ ಶ್ರೇಯವು ಸುಮನಸ ಅವರಿಗೆ ಸಲ್ಲುತ್ತದೆ...ನಾನು, ...ನನ್ನಿಂದ, ...ನನಗಾಗಿ....ಬ್ಲಾ..ಬ್ಲಾ...ಬ್ಲಾ..."
(ಮಿಯಾಂವ್ ..ಅಲ್ಲೆಲ್ಲೋ ಬೆಕ್ಕು ಕೂಗಿದಂತಿತ್ತು. ಬಹುಶಃ ಆಗ ತಿಂಡಿ ತೀರ್ಥ ನಡೆದ ಜಾಗದಲ್ಲಿ ಬಿಕ್ಕಿದ್ದುದನ್ನು ತಿನ್ನಲು ಬಂದಿರಬೇಕು...)
ಜನ ಮಾತಾಡಿಕೊಂಡರು. "ಒಂದು ಬೆಕ್ಕಿನ ಬಗ್ಗೆ ಈ ಕುಂಡೀ ಎಷ್ಟು ಹೊತ್ತು ಮಂಡೆ ಕೊರೆಯಬಹುದು, ದೊಂಡೆ ಹರಿದುಕೊಳ್ಳಬಹುದು ಮಾರಾಯ್ರೇ...ಇನ್ನು ಬೆಕ್ಕಿನ ವಿಸರ್ಜನಾ ವೈಖರಿಯನ್ನೂ ಬಣ್ಣಿಸಬಹುದು...ಮಾತಾಡಬೇಡಿ; ಇದೇ ಮನರಂಜನೆ; ಕೇಳಿ; ಕೇಳಿ..ಅಂತಃಪುರದಲ್ಲಿ ರಾಣಿಯ ಮಂಚದ ಕೆಳಗೆ ಚಿಲಿಪಿಲಿ ಇಲಿಯನ್ನು ಕಂಡು ಹಿಡಿದು ಅದನ್ನು ತಿಂದು ತೇಗಿದ ಬೆಕ್ಕು ಇದೇ ಕುಂಡೀ ಅವರೇ ಇರಬೇಕು; ಪೂರ್ವ ವಾಸನೆ ! ಅಂತಃಪುರ ನುಗ್ಗಿದ ಬೆಕ್ಕಿಗೆ ಎಲ್ಲದಕ್ಕಿಂತ ಇಲಿಯೇ ಹೆಚ್ಚು ಖುಶಿ ಕೊಟ್ಟಂತೆ ಈ ಕುಂಡೀ ಗೆ ಇಡೀ ಕವನ ಸಂಕಲನದಲ್ಲಿ ಬೆಕ್ಕು ಹೆಚ್ಚು ಖುಶಿ ಕೊಟ್ಟಿದೆ; ಜಾತಿ ಬಾಂಧವ್ಯ ! ಅವರ ಮುಂದಿನ ಸಂಶೋಧನೆಗೆ ಬೆಕ್ಕೇ ವಸ್ತುವಾದರೂ ಆಗಬಹುದು. ಸಾಕ್ಷೀ ಪ್ರಜ್ಞೆಯಿಂದ ತುಂಬಿ ತುಳುಕುವ ಅಕ್ಷರದ ಬೇಗಡೆ ಆಸ್ಥಾನದಲ್ಲಿ ಈ ಕುಂಡೀ ಗೆ ಡಾಕ್ಟರೇಟ್ ಕೂಡ ಸಿಗಬಹುದು..." ಇಬ್ಬರೂ ಪುಸಕ್ಕೆಂದು ನಕ್ಕರು. (ನನಗೂ ಹಾಗೆ ನಗಬೇಕು ಅನ್ನಿಸಿದರೂ ನಗಲಾಗಲಿಲ್ಲ; ಧ್ವನಿ ಹುಗಿದು ಹೋಗಿತ್ತು.)
ರವಿ ಕಾಣದ್ದನ್ನು ಕವಿ ಕಾಣುತ್ತಾನಂತೆ. ಆದರೆ ಈ ಪ್ರೊಫೆಸರ್ರು ಕವಿ ಕಾಣದ್ದನ್ನೂ ಕಂಡ ಹಾಗಿತ್ತು. ಅಂತೂ ಪ್ರೊಫೆಸರರ ಪ್ರಜ್ಞೆಗೆ ದಕ್ಕಿದಂತೆ - ಬಹುಶಃ ಕವನ ಬರೆದ ಕವಿ ಸುಮನಸರಿಗೂ ಆಶ್ಚರ್ಯವಾಗುವಂತಹ ಪಡಪೋಶಿಯನ್ನೆಲ್ಲ ಒಂದು ಗಂಟೆಯ ಹೊತ್ತು ಬಡಬಡಿಸಿ ಮುಗಿಸಿ, ಕುಂ.ಡೀ ಅವರ ಅಂಡು ವಿಶ್ರಮಿಸಿತು. ಹೋಗಿ ಕೂತರು.
ಆಗಲೇ ಕೆಲವು ಸಭಿಕರು ಮಿಯಾಂವ್ ಅನ್ನುತ್ತ ಎದ್ದು ಹೋಗಿದ್ದರು.
"ಹೀಗ...- ದಾರಿಯ ತೋರೋ - ಸಂಕಲನದ ಕವಿಯಾದ ಸುಮನಸ ಅವರಿಂದ ಹೆರಡು ಮಾತು..." ಮತ್ತೊಂದು ಆಹ್ವಾನ.
"ಓಹೋ...ಕವಿ ಏನನ್ನುತ್ತಾರೆ...ಕೇಳುವ" ಅಂತ ಅಲುಗಿದೆ.
"ನನಗೆ ಎರಡು ನಿಮಿಷ ಮಾತನಾಡಲು ಹೇಳಿದ್ದಾರೆ. ಪ್ರಕಾಶಕರಾದ ಶಿಂಗಣ್ಣನವರಿಗೆ ನಾನು ಆಭಾರಿ. ಎಲ್ಲರೂ ಪುಸ್ತಕವನ್ನು ಕೊಂಡು ಓದಿ. ಸಾಧ್ಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ. ಸಾಮಾನ್ಯ ಓದುಗರ ಆಸಕ್ತಿ ಮತ್ತು ಅಭಿಪ್ರಾಯ ನಮಗೆ ಬಹಳ ಮುಖ್ಯ...ಹೌದು. ಕವಿ ಸಾಹಿತಿಗಳಿಗೆ ಆಶ್ರಯದಾತರು ಬಹಳ ಮುಖ್ಯ. ಆಶ್ರಯವಿಲ್ಲದೆ ಲೇಖನಿ ಅರಳದು. ಆದರೆ, ಆಶ್ರಯ ಅಂದರೆ - ಬರೇ ದುಡ್ಡಿನ ಆಶ್ರಯ ಅಲ್ಲ. ನಮ್ಮ ಬರಹವನ್ನು ಓದುವ, ಓದಿ ದ್ವಿಮುಖೀ ಸಂವಹನ ನಡೆಸುವ ಕ್ರಿಯೆಯು ಬರಹಗಾರನನ್ನು ನಿಜವಾಗಿಯೂ ಜೀವಂತವಾಗಿರಿಸುವ ಆಶ್ರಯ. ವಿಚಾರ, ವಿಮರ್ಶೆ ಎರಡೂ - ಶಾಬ್ದಿಕ ತಳಮಳಗಳ ಸಿಕ್ಕಿಗೆ ಸಿಲುಕಬಾರದು. ಶ್ರೀಮಾನ್ ಕುಂಡೀ ಅವರು ಈಗಾಗಲೇ ಬೆಕ್ಕು ಕವನದ ಅಂತಃ ದರ್ಶನ ಮಾಡಿಸಲು ಯತ್ನಿಸಿದ್ದಾರೆ. ಆದರೆ ನನ್ನ ದೃಷ್ಟಿಯಲ್ಲಿ - ಬೆಕ್ಕು ಕವನಕ್ಕಿಂತ ಈ ಸಂಕಲನದಲ್ಲಿರುವ "ಬಕ್ಷೀಸು" ಎಂಬ ಕವನದ ಹರಹು ಇನ್ನೂ ಉನ್ನತವಾಗಿದೆ. ಇದು ಕವಿಯ ಅನ್ನಿಸಿಕೆ...ನೀವು ಓದಿದಾಗ ನಿಮಗೆ ಮತ್ತೊಂದು ಕವನ ಇಷ್ಟವೆನಿಸಲೂ ಬಹುದು...ಕವಿ ಅಂದರೆ..." ಅನ್ನುವಾಗಲೇ ವೇದಿಕೆಯಲ್ಲಿ ಕೂತಿದ್ದ ಕುಂ.ಡೀ ಚಡಪಡಿಸುತ್ತ ಪ್ರಕಾಶಕರಿಗೆ ಏನೋ ಹೇಳಿದರು. ವೇದಿಕೆಯ ಅಸ್ತವ್ಯಸ್ತವನ್ನು ನೋಡಿದ ಕವಿಯು ತನ್ನ ಮಾತಿಗೆ ಅಲ್ಪ ವಿರಾಮ ಕೊಟ್ಟು ಒಂದು ಗುಟುಕು ನೀರು ಕುಡಿದರು. ಅಷ್ಟರಲ್ಲಿ ಕುಂಡೀ ಗೆ ಕಿವಿಗೊಟ್ಟ ಆ ಪ್ರಕಾಶಕರು ಓಡಿ ಬಂದು ಕವಿಯ ಕಿವಿಯಲ್ಲಿ ಏನೋ ಉಸುರಿದರು. ಸುಮನಸ ಅವರು "ಸರಿ ಸಾರ್ . ಮುಗಿಸ್ತೇನೆ.." ಅಂದದ್ದು ಆ ಜೀವಂತ ಮೈಕಿನಿಂದ ಎಲ್ಲರಿಗೂ ಕೇಳಿಸ್ತು. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ...ಅನ್ನುತ್ತ ಆ ವಿಧೇಯ ಕವಿಗಳು ಪೆಚ್ಚಾಗಿ ಕುರ್ಚಿ ಸೇರಿದರು.
(ಜನ ಮಾತಾಡಿಕೊಂಡರು..."ಸುಮನಸ ಅವರು ಕವಿ ಅಂದರೆ...ಅಂತ ಏನೋ ಹೇಳಲು ಹೊರಟಿದ್ದರು... ಏನಂತ ಹೇಳುತ್ತಿದ್ದರೋ ಏನೋ...ಅವರ ಕುತ್ತಿಗೆ ಹಿಚುಕಿದರಲ್ಲ ? ಕವಿ ಸಮ್ಮೇಲನದಲ್ಲಿ ನರಳುವ ಅನೇಕ ಕವಿಗಳನ್ನು ಕಂಡು ಕಂಡು ನನಗೆ ಸಾಕಾಗಿ ಹೋಗಿದೆ. ಇವರೆಲ್ಲ ಮೇಡ್ ಇನ್ ಹೆವನ್..ಅನ್ನಿಸಿದ್ದೂ ಇದೆ. ಅವರು ಕವನ ಓದುವ ರಾಗ ಏನು...ಅವರ ಗಾಂಭೀರ್ಯವೇನು...ಉದ್ದಕ್ಕೆ ಬರೆಯುವ ಗದ್ಯವನ್ನೆಲ್ಲ ತುಂಡರಿಸಿ ಬರೆದಾಗ ಉಂಟಾಗುವ ಭಾವ ರಹಿತ ಅಕ್ಷರ ರಾಶಿಯನ್ನು ಹೊತ್ತ ಕವನಗಳನ್ನೆಲ್ಲ ಕಂಡು ಕೇಳಿ "ಎನ್ನ ಕುರುಡನ ಮಾಡಯ್ಯ - ಕಿವುಡನ ಮಾಡಯ್ಯ.." ಅನ್ನುವಂತಾಗಿದೆ. ಹೀಗೆ ಪುಕ್ಕಟೆ ಕವಿಗಳಾಗಿ ತಲೆ ತಿನ್ನುವವರು ಒಬ್ಬಿಬ್ಬರಲ್ಲ. ಈ ಸುಮನಸ ಅವರು ಇದ್ದುದರಲ್ಲಿ ಚೆನ್ನಾಗಿ ಬರೆಯುತ್ತಾರೆ...ಆದರೆ ಇವರೆಲ್ಲ ಸೇರಿ, ಈಗ, ...ಅವರ ಬೆಕ್ಕಿನ ತಿಥಿ ಮಾಡಿದಂತೆ ಅವರಿಗೆ ಮಾತಾಡಲೂ ಬಿಡದೆ ಎಳೆದು ಕೂಡಿಸಿಯೂ ಆಗಿದೆ. ಇನ್ನು ತ್ರಿಜ್ಯರಿಗಾದರೂ ಬಾಯಿ ತೆರೆಯಲು ಬಿಡುತ್ತಾರ ನೋಡುವ.." )
"ಹೀಗ...ಪರಿಧಿಯ ಕತೆಗಾರ ತ್ರಿಜ್ಯರಿಂದ ಎರಡೇ ಎರಡು ಮಾತು..."(ಓಹ್..ತ್ರಿಜ್ಯರಿಗೆ ಬೇಗ ಮುಗಿಸುವ ಸೂಚನೆ ಈಗಲೇ ಸಿಕ್ಕಿದೆ..)
ತ್ರಿಜ್ಯರು ಎದ್ದರು. "ನಾನು ಎರಡಲ್ಲ; ನಾಲ್ಕು ಮಾತು ಆಡಲಿದ್ದೇನೆ." ಅನ್ನುತ್ತ ಮೂಗು ತಿಕ್ಕಿದರು. "ನನ್ನ ಪ್ರೀತಿಯ ಓದುಗರೇ, ನಿಜವಾದ ಕತೆಗಾರರು, ಕವಿಕೋರರು ಯಾವತ್ತೂ ಪರಿಧಿಯಲ್ಲೇ ಇರಬಯಸುತ್ತಾರೆ; ಆದರೆ ಅದೂ ಸಾಲದೆಂಬಂತೆ - ಅವರನ್ನು ಅತ್ತತ್ತ ಪರಿಧಿಯಿಂದ ಆಚೆ ತಳ್ಳುವ ಕ್ರೀಡೆಯು ಆಗಾಗ ನಡೆಯುತ್ತಲೇ ಇರುತ್ತದೆ. ಬಗೆಬಗೆಯ ದರೋಡೆಯಲ್ಲಿಯೇ ರುಚಿ ಕಾಣುವ ಈ ಸಾಮಾಜಿಕ ಪರಿಸರದಲ್ಲಿ ಲೇಖನಿಯೇ ಕೇಂದ್ರ ಬಿಂದುವಾದ - ಕೃತಿ ಬಿಡುಗಡೆಯಂತಹ ಇಂತಹ ಸಂದರ್ಭದಲ್ಲೂ - ಲೇಖನಿಯನ್ನು ಕುಂಡೆಯ ಅಡಿ ಹಾಕುವ, ಹಾಕಿಸುವ - ಅರ್ಥವಾಗದ ಪದ ಬಂಧ ಚೆಲ್ಲುವ ಕೋಡಿನ ಬೆಕ್ಕುಗಳು ಹೊಸ ಹೊಸ ವೇಷದಲ್ಲಿ ಒಕ್ಕರಿಸುವುದಿದೆ. ಮೊದಲು ನವರಾತ್ರಿಯಲ್ಲಿ ಮಾತ್ರ ನಮ್ಮ ನಡುವೆ ವೇಷಗಳು ಅಡ್ಡಾಡುತ್ತಿದ್ದವು. ಈಗ ಹಾಗಿಲ್ಲ. ನಮ್ಮ ನಡುವೆ ಪ್ರತಿನಿತ್ಯವೂ ನವ-ನವೀನ ರಾತ್ರಿಗಳು ಹೊರಳುತ್ತಿವೆ. ರಾತ್ರಿ ಹಗಲಿನ ಭೇದವೇ ಕಾಣದಂತಾಗಿದೆ. ಈಗ, ಪುಸ್ತಕ ಬಿಡುಗಡೆಗೆಂದರೆ ಯಾವುದೇ ಸಭಾಂಗಣವು ಹಗಲಿನಲ್ಲಿ ಸಿಕ್ಕದಂತಾಗಿದೆ. ಅರ್ಧರಾತ್ರಿಯ ಅರ್ಧ ಬಾಡಿಗೆ ವ್ಯವಸ್ಥೆಗೆ ಸಾಹಿತಿಗಳು ಒಗ್ಗಿಕೊಳ್ಳಬೇಕಾಗಿದೆ. ಒಂದಕ್ಕೆ ಹತ್ತು ಪಟ್ಟು ಬಾಡಿಗೆ ಕೊಟ್ಟು ಹಗಲಿನಲ್ಲಿ ಬಿಡುಗಡೆ ನಡೆಸಲು ಪ್ರಕಾಶಕರೂ ಹಿಂಜರಿಯುತ್ತಾರೆ. ರಾತ್ರಿ ನಿದ್ದೆಗೆಟ್ಟು ಬರೆಯುವ ಮಂದಿಗೆ ಯಾವುದೇ ಅನಾನುಕೂಲ ಆಗುವುದಿಲ್ಲ ಎಂಬ ವಿಚಾರವಿದ್ದರೂ ಇರಬಹುದು. ಆದರೆ ನಿಜವಾದ ಸಾಹಿತ್ಯಾಸಕ್ತರು ನಿದ್ದೆ ಬಿಟ್ಟು ಭಾಗವಹಿಸುತ್ತಾರಾ ? ಎಂಬುದು ಪ್ರಶ್ನೆ. ರಾತ್ರಿ ನಿದ್ದೆ ಬರದವರು ಮಾತ್ರ ಸಾಹಿತ್ಯಿಕ ಸಮಾರಂಭಕ್ಕೆ ಬಂದರೆ ಸಾಕೆ ? ಎಂಬುದೂ ಪ್ರಶ್ನೆ. ಕೆಲವು ಸಾಹಿತ್ಯಾಸಕ್ತರು ಇಂದಿನ ಸಭೆಯಲ್ಲೂ ಇದ್ದಾರೆ. ನಮ್ಮ ಮಾತು, ವರ್ತನೆಯಿಂದ ಅವರನ್ನಾದರೂ ನಾವು ಉಳಿಸಿಕೊಳ್ಳಬೇಕಲ್ಲವೆ ? ಯಾವುದೇ ಸುಮನಸರನ್ನು - ಅಂದರೆ ಹೃದಯವಂತರನ್ನು - ಪರಿಧಿಗೆ ಒತ್ತರಿಸುವ ಹರಾಮಿ ಕಾಂಚಾಣದ ತಧಿಗಿಣತವನ್ನು ಸಹೃದಯವಂತರು ಎಂದೂ ಒಪ್ಪುವುದಿಲ್ಲ. ಯಾವುದೇ ಪರಿಧಿಯನ್ನು ಯಾರಾದರೂ ಮಿತಿಮೀರಿ ಒತ್ತಿದರೆ - ಕ್ರಮೇಣ ಅದೇ ಒತ್ತಡ ಚಿಮ್ಮುವ ಕೇಂದ್ರ ಬಿಂದುವಾಗಿ ಬಿಡುತ್ತದೆ. ಅದು ಸಹಜ...ಅದೇ ಪ್ರಕೃತಿ ನಿಯಮ...ನನ್ನ ಕತೆ - "ಪರಿಧಿ"ಯಲ್ಲಿ..." ಅನ್ನುವಾಗಲೇ ವ್ಯಾಸರಿಗೂ ಕಿವಿಯಲ್ಲೇ ಗಾಯತ್ರಿ ಪಠಿಸಿದರು... "ಸಾಕು..."..
"ಪ್ರಿಯ ಓದುಗ ಬಂಧುಗಳೇ, ಸಾಕಂತೆ...ನನ್ನ ಮಾತು ಸಾಕಂತೆ. ಸಾಕು ಅನ್ನುವವನೇ ಸಾಹುಕಾರ ಅನ್ನುವ ಮಾತಿದೆ. ನಮ್ಮ ಪ್ರಕಾಶಕರು, ಅವರ ಪ್ರಾಯೋಜಕರು ಇವರಿಬ್ಬರೂ ನಿಜವಾಗಿಯೂ ಸಾಹುಕಾರರೇ. ಸನ್ಮಾನ್ಯ ಶಿಂಗಣ್ಣನವರಿಗೆ ಬಡ ಸಾಹಿತಿಗಳ ಒಣ ಮಾತಿನಲ್ಲಿ ನಂಬಿಕೆಯಿಲ್ಲ... ನಮ್ಮ ಪ್ರಕಾಶಕರು - "ನೀವು ಬರೆಯಿರಿ; ಬರೆದು ಸುಮ್ಮನಿರಿ..." ಅನ್ನುವ ದೃಷ್ಟಿಕೋನದವರು. ಅವರು ಈಗ ಸನ್ಮಾನ್ಯ ನಂಜಪ್ಪನವರ - ಪ್ರಾಯೋಜಿತ ಹಸಿ ಮಾತುಗಳನ್ನು ಕೇಳುವ ಹುರುಪಿನಲ್ಲಿದ್ದಾರೆ.. ಒಳ್ಳೆಯದೇ. ಆದರೆ ನಮಗೆ ಮಾತ್ರ ನಿಮ್ಮ - ಅಂದರೆ - ಓದುಗರ ಬಾಂಧವ್ಯ ಯಾವತ್ತೂ ಬೇಕು...ಕೇಳುವಂತಹ ಮಾತುಗಳು ಮಾತ್ರ ಎಲ್ಲ ಕಡೆಗಳಿಂದಲೂ ಕೇಳಿಸಲಿ. ಬಾಡಿಗೆ ಮಾತುಗಳು, ಕಾಡಿಗೆ ಮಾತುಗಳು ಕೇಳಿಸದಿರಲಿ...ಎಂಬುದೇ ನನ್ನ "ಪರಿಧಿ" ಕಥಾ ಸಂಕಲನದಲ್ಲಿರುವ ಅದೇ ಹೆಸರಿನ "ಪರಿಧಿ" ಎಂಬ ಕತೆಯ ಆಶಯ. ನಮಸ್ಕಾರ.." (ಕೆಲವೇ ಚಪ್ಪಾಳೆ)
"ಹೀಗ...ನಮ್ಮ ಪ್ರಮುಖ ಹತಿತಿ ಶ್ರೀ ನಂಜಪ್ಪ ಹವರಿಂದ ಭಾಷಣ..."(ಎಡಗಡೆಯಿಂದ ಕಿವಿ ಗಡಚಿಕ್ಕುವಂತೆ ಚಪ್ಪಾಳೆ...ಓಹೋ...ಆ ಜನರನ್ನು ನಿಜವಾಗಿಯೂ ಚಪ್ಪಾಳೆ ಹೊಡೆಯುವುದಕ್ಕೆಂದೇ ಕರೆ ತಂದಿರಬೇಕು.. ಅಂದುಕೊಂಡೆ)
ನಂಜಪ್ಪನವರು ಗಜ ಗಾಂಭೀರ್ಯದಿಂದ ಮೈಕಿನ ಎದುರು ನಿಂತರು. ಅವರ ಕುತ್ತಿಗೆಯ ಆಭರಣವು ಫೊಟೋ ಕ್ಲಿಕ್ಕಿಸುವಾಗ ಮಿಣಕ್ ಮಿಣಕ್ ಅನ್ನುತ್ತಿತ್ತು. ಕೈಯ ಹತ್ತು ಬೆರಳಲ್ಲಿ ಹತ್ತಕ್ಕಿಂತ ಹೆಚ್ಚು ಉಂಗುರಗಳು ಒತ್ತಿ ಕೂತಿದ್ದವು. "ನಮಸ್ಕಾರ." ಎಂದು ಎರಡೂ ಕೈಯನ್ನೆತ್ತಿ ಸಭೆಗೆ ವಂದಿಸುತ್ತ ತಮ್ಮ ಬೆರಳುಗಳನ್ನು ಎತ್ತಿ ತೋರಿಸಿದರು. "ಇವತ್ತು ಒಂದು ಪದ್ಯದ ಪುಸ್ತಕ (ಏನದರ ಹೆಸರು ? ಅಂತ ಬಗ್ಗಿ ಕೇಳಿದರು...) ಹಾಂ...ಅದೇ ದರೆಯ ತೋರು..ಮತ್ತೊಂದು ಪುಸ್ತಕ...(ಅನ್ನುವಾಗಲೇ ಕುಂಡೀ ಅವರು ಅವರ ಕಿವಿಕಂಡಿಯಲ್ಲಿ ಹೆಸರು ಉಸುರಿದರು..) ಹಾಂ...ಪಾರದಿ..ಎರಡೂ ಬಿಡುಗಡೆಯಾಗಿವೆ. ನೋಡೀ, ಬರೆಯುವುದು ಬಹಳ ಒಳ್ಳೆಯದು. ಬರೆದರೆ ಕೈಯ ಬೆರಳಿಗೂ ವ್ಯಾಯಾಮ ಆಗುತ್ತದೆ. ಏನನ್ನಾದರೂ ಓದುತ್ತಿರುವ ಚಟ ಇದ್ದವರಿಗೂ ಉಪಕಾರ ಮಾಡಿದಂತೆ ಆಗುತ್ತದೆ. ಬಹಳ ಒಳ್ಳೆಯದು. ಲೇಖಕರೇ, ದಿನಕ್ಕೊಂದು ಪುಸ್ತಕ ಬರೆಯಿರಿ. ನಿಮಗೆ ಒಳ್ಳೆಯದಾಗಲಿ..(ಎಡಬದಿಯಿಂದ ಕಿವಿ ಗಡಚಿಕ್ಕುವ ಚಪ್ಪಾಳೆ.) ಇನ್ನು ನಮ್ಮ ಶಿಂಗಣ್ಣ ಅವರಂತೂ ಇದೇ ಬಿಸನೆಸ್ ಮಾಡುವವರು. ಸಣ್ಣ ಮೀನು ಹಾಕಿ ದೊಡ್ಡ ಮೀನು ತೆಗೆಯುವ ಜಾಣರು. ನಮ್ಮವರೇ. ಒಳ್ಳೆಯ ಜನ. ಲೇಖಕರನ್ನು ಮೇಲೆತ್ತುವ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ. ಅವರ ಕೈಗೆ ಸಿಕ್ಕಿದ ಲೇಖಕರ ಬಗ್ಗೆ ಮತ್ತೆ ಚಿಂತೆ ಮಾಡುವುದೇ ಬೇಡ...(ಮತ್ತೊಮ್ಮೆ ಚಪ್ಪಾಳೆ..) ಈ ಪುಸ್ತಕಗಳಿಂದ ಶಿಂಗಣ್ಣ ಅವರು ಒಳ್ಳೆಯ ಕಮಾಯಿ ಮಾಡಲಿ ಅಂತ ನೀವೆಲ್ಲ ಆಶೀರ್ವಾದ ಮಾಡಬೇಕು. ಪ್ರಕಾಶಕರು ಬದುಕಿದರೆ ಮಾತ್ರ ಲೇಖಕರು ಬದುಕಬಹುದು. ಗೊತ್ತಾಯ್ತಾ ? ಇನ್ನು ...ಕುಂಡೀ ಅವರು ಹೇಳಿದ ಬೆಕ್ಕಿನ ಕತೆ ತುಂಬ ಜಿಡುಕಾಗಿತ್ತು. ನನ್ನ ಪಕ್ಕದಲ್ಲೇ ಕೂತಿದ್ದ ಅವರಲ್ಲಿ ಆ ಕತೆಯನ್ನು ಸರಳವಾಗಿ ಹೇಳುವಂತೆ ಕೇಳಿದಾಗ, ಅವರು ಬಿಡಿಸಿ ಬಿಡಿಸಿ ಹೇಳಿದರು. ಆಗ ನನಗೆ ಖುಶಿ ಆಯ್ತು. ನಮ್ಮ ಮನೆಯಲ್ಲೂ ನಾಲ್ಕು ಬೆಕ್ಕುಗಳಿವೆ. ಬೆಕ್ಕು ಅಂದರೆ ನನಗೆ ಬಹಳ ಪ್ರೀತಿ. ಬೆಕ್ಕಿನ ಬಗ್ಗೆ ಪದ್ಯ ಬರೆದ ಅವರಿಗೆ...(ಕಿವಿಯಲ್ಲಿ - ಸುಮನಸ..) ಅದೇ.. ಅವರಿಗೆ - ತುಂಬ Thanks..
ಇನ್ನು...ನನಗೆ ಕತೆ ಓದುತ್ತ ಕೂರಲಿಕ್ಕೆ ಪುರಸೊತ್ತಿಲ್ಲ. ಬರೆಯುವವರು ಬರೆಯಲಿ; ಓದುವವರು ಓದಲಿ...ಬಹಳ ಒಳ್ಳೆಯದು. ಕತೆ ಬರೆಯುವ ತೀಜಾ ಅವರಿಗೂ (ತ್ರಿಜ್ಯ..ತ್ರಿಜ್ಯ..) ಹಾಂ..ಅದೇ ಅದೇ..ಅವರಿಗೆ ದೊಡ್ಡ ನಮಸ್ಕಾರ. (ಅಷ್ಟರಲ್ಲಿ ಸಭೆಯ ಬಲ ಬದಿ ಪೂರ್ತಿ ಖಾಲಿಯಾಗಿತ್ತು. ನಂಜಪ್ಪನವರ ಬಳಗ ಮಾತ್ರ ಉಳಿದಿತ್ತು.) ಎಲ್ಲರಿಗೂ ನಮಸ್ಕಾರ..(ದೀರ್ಘ ಚಪ್ಪಾಳೆ..)
ಸನ್ಮಾನ್ಯ ನಂಜಪ್ಪನವರು ಮತ್ತೊಮ್ಮೆ ತಮ್ಮ ಬೆರಳುಗಳನ್ನು ಪ್ರದರ್ಶಿಸಿ ಆಸೀನರಾದರು.
"ಹೀಗ...ವಂದನಾರ್ಪಣೆ..." ಅನ್ನುವಾಗಲೇ ವೇದಿಕೆಯ "ಹತಿತಿ"ಗಳು ಕೆಳಗಿಳಿಯತೊಡಗಿದ್ದರು. ಮೈಕಿನೆದುರು ಓಡಿ ಬಂದ ಪ್ರಕಾಶಕ ಶಿಂಗಣ್ಣನವರು "ಇವತ್ತು ಬಿಡುಗಡೆಯಾದ ಪುಸ್ತಕಗಳು ಸಭಾಂಗಣದ ಹೊರಗೆ ಮಾರಾಟಕ್ಕಿವೆ. ದಯವಿಟ್ಟು ಎಲ್ಲರೂ ಪುಸ್ತಕವನ್ನು ಕೊಂಡು ನಮ್ಮ ಬರೆಹಗಾರರನ್ನು ಪ್ರೋತ್ಸಾಹಿಸಬೇಕು..." ಅಂತ ಒಂದೇ ಉಸಿರಿಗೆ ಹೇಳಿ ನಂಜಪ್ಪನವರ ಹಿಂದೆ ಓಡಿದರು. ನಂಜಪ್ಪನವರು ಅದಾಗಲೇ ಹೊರ ಬಾಗಿಲತ್ತ ನಡೆಯತೊಡಗಿದ್ದರು.
ಅನಂತರ ನಿರೂಪಕನ "---ಧನ್ಯವಾದ---ಹಾಬಾರಿ---ಕೃತಗ್ನತೆ---" ಇತ್ಯಾದಿಗಳೆಲ್ಲ ಮುಗಿದ ಮೇಲೆ, "ಹತ್ಯಂತ ಹುತ್ಸುಕತೆಯಿಂದ ಬಂದು ಬಾಗವಹಿಸಿದ ಹೆಲ್ಲರಿಗೂ ನಮಸ್ಕಾರ..." ಅಂತ ಹೇಳಿ ತಲೆ ಎತ್ತಿ ನೋಡಿದ ಆ ನಿರೂಪಕನ ಎದುರಿನಲ್ಲಿ ಕತೆಗಾರ ತ್ರಿಜ್ಯ ಮತ್ತು ಕವಿ ಸುಮನಸ ಮಾತ್ರ ನಿಂತಿದ್ದರು. ಸಭಾಂಗಣ ಖಾಲಿಯಾಗಿತ್ತು. ಹಕಾರದ ಶಿಕಾರಿಗಿಳಿದಿದ್ದ ಪಾಪದ ನಿರೂಪಕ ಪೆಚ್ಚಾಗಿದ್ದ. ವೇದಿಕೆಯಿಂದ ಇಳಿದು ತಮ್ಮತ್ತ ಬಂದ ಆ ನಿರೂಪಕ "ನೋಡಿ ಸಾರ್, ದನ್ಯವಾದ ಮುಗಿಯುವ ಮೊದಲೇ ಎಲ್ಲ ಹೊರಟೇ ಹೋದರಲ್ಲ ?" ಅಂದ. ಕವಿ ಮನಸ್ಸು ತುಳುಕಿತು. "ಅದು ಹಾಗೇ ತಮ್ಮಾ; ವಂದನಾರ್ಪಣೆ ಅಂದರೆ ಅದೊಂದು ಶಾಸ್ತ್ರ ಪೂರೈಸುವುದು - ಅಷ್ಟೆ. ಶ್ರಾದ್ಧದ ದಿನ ಬೆಕ್ಕನ್ನು ಎಲ್ಲಿಂದಾದರೂ ತಂದಾದರೂ ಕೋಣೆಯಲ್ಲಿ ಕೂಡಿ ಹಾಕುವ ಶಾಸ್ತ್ರದಂತೆ, ಸಭೆಗೊಂದು ಮುಕ್ತಾಯದ ಶಾಸ್ತ್ರ ಪೂರೈಸಲಿಕ್ಕೆ ಅಂತಲೇ ವಂದನಾರ್ಪಣೆ ಇಟ್ಟುಕೊಳ್ಳುವ ಪದ್ಧತಿ ಬೆಳೆದಿದೆ...ಓಗಲಿ ಬಿಡು...ನಾವಿಬ್ಬರೂ ಇಲ್ಲಿದ್ದೇವಲ್ಲ ?" ಅಂದಾಗ, ತ್ರಿಜ್ಯರು ತಿರುತಿರುಗಿ ನಕ್ಕರು.
ನಾನೂ ನಕ್ಕೆ. (ನಕ್ಕಂತೆ ಅಂದುಕೊಂಡೆ ?)
ಅರೆರೆ, ನನ್ನನ್ನು ಯಾಕೆ ಯಾರೂ ಗಮನಿಸಲಿಲ್ಲ ? ಇಷ್ಟು ಹೊತ್ತು ನನ್ನತ್ತ ತಿರುಗಿಯೂ - ಯಾರೆಂದರೆ ಯಾರೂ ನೋಡಲಿಲ್ಲವಲ್ಲ ? ನನ್ನನ್ನು ತಿಂಡಿ ಕೊಟ್ಟು ಉಪಚರಿಸಲೂ ಇಲ್ಲ...ಆದರೆ ವಿಚಿತ್ರ ! ನನಗೆ ತಿನ್ನಬೇಕೆಂದು ಅನ್ನಿಸಲೂ ಇಲ್ಲ...ವೇದಿಕೆಯ ಮೇಲೆಲ್ಲ ನಾನು ಓಡಾಡಿದರೂ ನನ್ನನ್ನು ಯಾರೂ "ನೀನು ಯಾರು ಏನು ಎತ್ತ" ಅಂತಲೂ ಕೇಳಲಿಲ್ಲವಲ್ಲ ?...
ಸುಮ್ಮನೆ ಸರಿದಾಡುವ ಎಂಥ ಜನರಪ್ಪ ? ನನಗಾದರೆ ಬೇರೆ ಕಸುಬಿಲ್ಲ. ಆದರೆ ಇವರೆಲ್ಲ ಹೀಗೆ ಹಗಲೂ ರಾತ್ರಿ ಪರಪರ ಮಾಡುವುದಾದರೂ ಯಾಕೆ ? ಸಾಯಲಿ ಬಿಡಿ. ಕೊನೆಗೆ ಅವರಿಗೂ ಗೊತ್ತಾಗುತ್ತದೆ. "ಸರಿಸರಿ ಇದ್ದರೆ ಪರಿಪರಿ ನೆಂಟರು" ಅಂದದ್ದು ಸುಮ್ಮನೆ ಅಲ್ಲ. ಈ ವ್ಯಕ್ತ ವೇಷದ ಜನರ ಒಡನಾಟ - ನನಗೆ ಬೇಡವೇ ಬೇಡ.....
........ಅವತ್ತು - ಮೊನ್ನೆಮೊನ್ನೆ ಕಣ್ಣು ಮುಚ್ಚಿ ಮಲಗಿದ್ದ ನನಗೆ ಇದೇ ಶಿಂಗಣ್ಣ ಬಂದು ಹಾರ ಹಾಕಿ ಕೈಮುಗಿದಿದ್ದ. ಏನೋ... ನಾನು ಸತ್ತೇ ಹೋದೆ - ಅನ್ನುವಂತೆ ತಲೆ ತಗ್ಗಿಸಿ ಕಣ್ಣೊರೆಸಿಕೊಳ್ಳುವ ನಾಟಕವನ್ನೂ ಆಡಿದ್ದ. ಇವತ್ತು ಎದುರೆದುರೇ ಸುಳಿದಾಡಿದರೂ ತಲೆ ಎತ್ತಿ ನೋಡಲಿಲ್ಲವಲ್ಲ ? ಗೆಳೆಯ ಶಿಂಗಣ್ಣ ಮಂಕಣ್ಣ ಆಗಿ ಹೋದನೆ ? ಏನೋ ಕೊಂಡಿ ತಪ್ಪಿದೆ... ಅಥವ.... ಅವನು ಇಲ್ಲವೆ ?
ಅಥವ ನಾನು ಇಲ್ಲವೆ ? ......
ಅರೆ...ನಾನು....ಇಲ್ಲವೆ ? ನಾನು ...ಎಲ್ಲಿದ್ದೇನೆ ?
ನಾನು ವ್ಯಕ್ತವೆ ? ಕಳಚಿಕೊಂಡ ಮುಕ್ತವೆ ?
ತ್ರಿಜ್ಯ...ಪರಿಧಿ...ವ್ಯಾಸ...ಕೈವಾರ....ಬಹು ಕೋಣ !
ಬರೇ ಗಾಳಿ. ಮಂಜಿನೋಕುಳಿ.
ತ್ರಿಶಂಕು ಅಲೆದಾಟ; ಅವ್ಯಕ್ತ ತೊನೆದಾಟ.

No comments:
Post a Comment