"ನಾನು" ಒಳ್ಳೆಯದಿದ್ದರೆ ಜಗತ್ತೇ ಒಳ್ಳೆಯದು, ದೃಷ್ಟಿಯಂತೆ ಸೃಷ್ಟಿ, ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು - ಮುಂತಾದ ಮಾತುಗಳೆಲ್ಲವೂ ಮಾತು ಬಲ್ಲವರ ಬತ್ತಳಿಕೆಯಿಂದ - ಆಗಾಗ ಸಮಯೋಚಿತ ಮತ್ತು ಒಮ್ಮೊಮ್ಮೆ ಅನುಚಿತವಾಗಿಯೂ ಚಿಮ್ಮುವುದಿದೆ. ಇಂತಹ ಮಾತು ಬರಹಗಳನ್ನೆಲ್ಲ ಇಂದಿನ ಬುದ್ಧಿವಂತರು - ಪ್ರಾಯೋಗಿಕ ಎನ್ನುವ ಗೋಜಿಗೆ ಹೋಗದೆ, "ಸಕಾರಾತ್ಮಕ" ಎಂಬ ಆದರ್ಶದ ವರ್ಗಕ್ಕೆ ಸೇರಿಸಿ ಕೈಬಾಯಿ ತೊಳೆದುಕೊಳ್ಳುವುದಿದೆ. ಸಹಸ್ರಾರು ವರ್ಷಗಳಿಂದಲೂ ಹೊರಳಾಡುತ್ತ ಬಂದಿರುವ ಇಂತಹ ಹಲವು ಉದ್ಧರಣೆಗಳ ಬಹುಪಾಲು - ಅವರವರ ಖರ್ಚಿಗೆ ತಕ್ಕಂತೆ ಬಳಸಲ್ಪಡುತ್ತ ಇಂದಿಗೂ ನಿತ್ಯನೂತನವೆಂಬಂತೆ ಚಾಲ್ತಿಯಲ್ಲಂತೂ ಇವೆ; ತನ್ಮೂಲಕ ನಮ್ಮ ಮಾತು ಬರಹಗಳು ಮಾತ್ರವೇ ಪುಷ್ಟಿಗೊಳ್ಳುತ್ತ ಬಂದಿವೆ. ಆದರೆ - ಬದುಕು ?
ವಿದ್ವತ್ತಿನ ತಾಕತ್ತಿನ ಪ್ರದರ್ಶನಕ್ಕೆ ಇದು ಸಮಯವಲ್ಲ; ಅಂತಃಕರಣದ ಸಾತ್ವಿಕ ದನಿಗೆ ಕಿವಿಗೊಡುವ ಸಂದರ್ಭವು ನಮ್ಮ ಮುಂದಿದೆ. ಮನಸ್ಸಾಕ್ಷಿಯನ್ನು ಅಲುಗಿಸಿ ಕೇಳಿದರೆ ನಮ್ಮ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರವೇ ಸಿಗುತ್ತದೆ ಎನ್ನುವ ಅನುಭವಿಗಳು ಈಗಲೂ ಇದ್ದಾರೆ. ಆದರೆ "ಬುದ್ಧಿವಂತ ಸುಳ್ಳರ ಬುದ್ಬುದ ಮನಸ್ಸು" ಎಂಬ ಕಳ್ಳ ಮಾರ್ಜಾಲವನ್ನು ಕಟ್ಟಿ, ಆ ಬುದ್ಬುದದ ಒಳಗಿನ ಸಾಕ್ಷಿ ಎಂಬ ಅಮೂರ್ತದ ವರೆಗೆ ಕ್ರಮಿಸಿ ಕುತ್ತಿಗೆ ಪಟ್ಟಿ ಹಿಡಿದು ಗಲಗಲಿಸುವ ತುರ್ತು ಯಾರಿಗಿದೆ ? "ಮಿಥ್ಯ ತೋರಿಕೆ " ಯ ಪದವಿಕೋರ ಜಾದೂಗಾರರು ತೋರಿಸುವ "ಸಕಾರ" ಎಂಬ ಕಣ್ಕಟ್ಟಿನ ಮಂತ್ರವೇ - ಈ ಬದುಕಿನ ಚಾಲನಶಕ್ತಿಯೆ ? "ಸಾಕ್ಷಿ ಪ್ರಜ್ಞಾವಂತರು" ಎಂಬ ಕೋಳಿಪಡೆಗಳು ಪಟಪಟ ಪಠಿಸುವ ಅದೇ ಅಥರ್ವಣ - ಕೊಕ್ಕೊಕ್ಕೋ ಮಂತ್ರದಿಂದಲೇ ಯಾವುದಾದರೂ ಬದುಕನ್ನು ಕಟ್ಟಲು ಸಾಧ್ಯವೆ ? ಈ ಭೂಮಿಯ ಇತಿಹಾಸವನ್ನು ನೋಡಿದರೆ - ಪುರಾಣ ಕಾವ್ಯಗಳನ್ನು ಹೊರತಾಗಿ - "ಸಕಾರಾತ್ಮಕ ಅಪರಂಜಿ ಚಿನ್ನ"ದಂತಹ ಯಾವುದಾದರೂ ಬದುಕು - ಪಾತ್ರಗಳು ನಿಜಬದುಕಿನಲ್ಲಿ ಕಾಣಲು ಸಿಗಬಹುದೆ ? ಹಾಗಾದರೆ - "ಒಳ್ಳೆಯದಾಗಿರುವುದು" ಅನ್ನುವ ನಿತ್ಯ ಪಲ್ಲವಿಯ ಆವರ್ತಗಳಿಂದ ಇದುವರೆಗೆ ಆಗಿರುವ ಸಾಧನೆಯಾದರೂ ಏನು ? ಯಾವುದೇ ರಾಗಗಳಿಗೆ ಹೇಗೆ ವಾದಿಯೂ ಬೇಕು; ಸಂವಾದಿಯೂ ಅವಶ್ಯವೋ - ಹಾಗೇ ಬದುಕಿನ ಸಂಗೀತದಲ್ಲಿ ಸಕಾರ, ನಕಾರ, ವಿಕಾರ, ಮಮಕಾರಗಳೆಲ್ಲವೂ ಇರುತ್ತದೆ; ಹದವರಿತು ಇರಲೂಬೇಕು. ಆದರೆ ಯಾವುದೂ ಹದತಪ್ಪಿದ ರೋಗವಾಗಬಾರದು. ಮನುಷ್ಯನೆಂಬ ಪ್ರಾಣಿಯು ಯಾವತ್ತೂ ಅಪರಂಜಿಯಲ್ಲ; ಸಹಜವಾಗಿಯೇ ಒಳಿತು ಕೆಡುಕುಗಳ ಮಿಶ್ರಣ. ನಿರಪಾಯಕಾರಿಯಾದ ಮತ್ತು ಉಪಕಾರಿಯಾದ ಯಾವ ಅಂಶವನ್ನು ನಮ್ಮ ಬದುಕಿನ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು ಅನ್ನುವುದು ಅವರವರ ಹಿನ್ನೆಲೆ, ಸಂಸ್ಕಾರ, ಪರಿಸರ, ಶಿಕ್ಷಣ, ಸ್ವಪ್ರಯತ್ನಗಳನ್ನು ಹೊಂದಿಕೊಂಡಿದೆ. "ನಿಯಂತ್ರಣದಿಂದಲೇ ಜಾಗ್ರತಿ; ಸ್ವಚ್ಛಂದದಿಂದಲ್ಲ" ಎಂಬ ಮೂಲ ಶಿಕ್ಷಣದಿಂದ ಮಾತ್ರ ಇದು ಸಾಧ್ಯ..
ಇವತ್ತು ಸಕಾರಾತ್ಮಕ ಜಾಗ್ರತಿ ಮೂಡಿಸುವ ಶೈಕ್ಷಣಿಕ ಸನ್ನಿವೇಶ ಇದೆಯೆ ? ಇಂದಿನ ಅಕ್ಷರ ವ್ಯಾಪಾರದ ಸಂತೆಯಲ್ಲಿ ತಥಾಕಥಿತ "ಒಳ್ಳೆಯದು" ಎಂಬುದನ್ನು - ಹೇಗೆ ಹುಡುಕಲಿ ? ಆಯಾ ಪತ್ರಿಕೆಗಳ ವಿಚಾರಧಾರೆಗೆ ಹೊಂದುವಂತೆ ಬರೆಯುವ, ಆಯಾ ಸಂದರ್ಭಕ್ಕೆ ತಕ್ಕಂತೆ ಮಾತನಾಡುವ, ಆಯಾ ಗುಂಪಿನ - ಜಾತಿಯ ಕೋವಿದರು ಅನ್ನಿಸಿಕೊಂಡು ಒಟ್ಟಿನಲ್ಲಿ ಒಳ್ಳೆಯದಾಗುವ ಉಮೇದಿನಲ್ಲಿ ಸಂದರ್ಭಕ್ಕೆ ತಕ್ಕಂತೆ ಜೈಕಾರ - ಧಿಕ್ಕಾರ ಕೂಗುವ - "ಒಳ್ಳೆಯವರು" ಎಂಬ ಹಣೆಪಟ್ಟಿ ಹೊತ್ತಿರುವವರ ಮಧ್ಯದಲ್ಲಿ "ಉತ್ತಮರ ಸಂಗವನು ಎನಗಿತ್ತು ಸಲಹೋ" ಎಂಬ ವಿನಂತಿಯೇ ಅಪ್ರಸ್ತುತವಾಗುತ್ತದೆ. ಇಂದಿನ "ಒಳ್ಳೆಯ ಮುಳ್ಳು ಮಳ್ಳು"ಗಳಿಂದ ಪಾರಾಗುವ ಕುಸ್ತಿಯಲ್ಲಿಯೇ ಕೆಲವು ಬದುಕುಗಳು ಮುಗಿದುಹೋಗುವುದೂ ಇದೆ. ಸದ್ದಿನ ಗದ್ದಲದಲ್ಲಿ ಮೆದ್ದು ಮೇಯುತ್ತ "ಒಳ್ಳೆಯತನದ PATENT" ಗಿಟ್ಟಿಸಿಕೊಂಡು ಸರಿದಾಡುತ್ತಿರುವ ಇಂದಿನ "ಒಳ್ಳೇ ಹಾಂವುಗಳು" - ಪ್ರಕೃತಿಸಿದ್ಧ ಒಳ್ಳೆಯತನದ ಮಧುರ ಮುಖವಾಣಿಗಳು ಎಂಬಂತೆ ವರ್ತಿಸುತ್ತಿರುವುದು ಮತ್ತು ಗುಪ್ತ ಕಾರಣಗಳಿಂದ ಅಂತಹ "ಸುಳ್ಳು ಒಳ್ಳೆ"ಗಳ ಮೆರವಣಿಗೆ ನಡೆಸುತ್ತಿರುವುದು ಇಂದಿನ ನಿತ್ಯದ ವ್ಯಾಪಾರವಾಗಿದೆ. ಹೀಗೆ ತಮಗೆ ತಾವೇ "ಉತ್ತಮ ಸ್ವಯಂಭೂಗಳು" ಎಂದುಕೊಳ್ಳುವವರಿಗೆ ಮತ್ತು "ಒಳ್ಳೆಯ ರೋಗ" ಹಿಡಿದ ಅಕ್ಷರವಂತರಿಗೆ ಕಾಲವೊಂದನ್ನು ಬಿಟ್ಟು ಇತರೆಡೆಗಳಲ್ಲಿ ಅನುಮತಿ ಮುದ್ರೆ, ಪ್ರಶಸ್ತಿಪತ್ರವೂ ದೊರಕುತ್ತಿದೆ. "ಒಳ್ಳೆ ಗರ" ಬಡಿಯುವುದೆಂದರೆ ಹೀಗೇ. ಒಳ್ಳೆಯತನ, ಒಳ್ಳೆಯ ಬದುಕು ಎಂಬುದಕ್ಕೆ ಪುರಾಣ ಕಾವ್ಯಗಳಲ್ಲಿ ಉತ್ತರ ರೂಪದ ಅನೇಕ ದೃಷ್ಟಾಂತಗಳು ಸಿಕ್ಕಿದರೂ ವರ್ತಮಾನದ ಓಟವು ಅವನ್ನೆಲ್ಲ ಒಳ್ಳೆಯದೆಂದು ಯಥಾವತ್ ಒಪ್ಪುವ ಹಂತದಲ್ಲಿಲ್ಲ. ಆದರೆ ನಡು ಬಗ್ಗಿ, ತನು ಕುಗ್ಗಿ ಕೊನೆಯುಸಿರೆಳೆಯುವ ಹಂತದಲ್ಲಿ ಕೆಲವರಿಗೆ "ಒಳ್ಳೆ" ಜ್ಞಾನೋದಯವಾದ ಘಟನೆಗಳು "ಜನಪ್ರಿಯ ಸಾಕ್ಷೀ ಪ್ರಜ್ಞೆ" ಗಳನ್ನು ಅಣಕಿಸುವಂತೆ ಆಗಾಗ ಘಟಿಸುತ್ತಲೇ ಇರುತ್ತವೆ. ಆದರೆ ಮುಖವೇ ಮುಖವಾಡ ಆಗಿಹೋದ ಹಂತದಲ್ಲಿ - ಅಂತಹ ಮುಖಗಳಿಂದ ಮುಖವಾಡವನ್ನು ಕಳಚಲು "ಶಯ್ಯಾಗ್ರಸ್ತ ಪ್ರಜ್ಞೆ"ಯು ಕೂಡ ಹಿಂಜರಿಯುತ್ತದೆ. ಆದರೆ ಮಾತಿನ ಪಟಾಕಿ ಹಾರಿಸುತ್ತ ನಿಂತು - ಹೆಣ ನೋಡುವ ಯಃಕಶ್ಚಿತ್ ಹಳವಂಡಗಳ ಎಂದಿನ ನಾಟಕವು ನಡೆಯುತ್ತಿರುತ್ತದೆ. ಹೊಗಳಿಕೆಗಾಗಿ ಜನ ಮೆಚ್ಚುವಂತೆ ನಡೆಯುವಂತಹ ಯಾವುದೇ Time Pass ಒಳ್ಳೆಯತನದ ನಿಕ್ಷೇಪದಿಂದ ಯಾವುದೇ ಬದುಕಿಗೆ ಪುಷ್ಟಿ ದೊರೆತ ದೃಷ್ಟಾಂತವುಂಟೆ ?
"ಸತ್ತರೂ ಬುದ್ಧಿ ಬರಲಾರದು" ಎನ್ನುವ ಮಾತು ಬದುಕಿನಿಂದಲೇ ಹುಟ್ಟಿದ ಅನುಭವೋಕ್ತಿ. ಗುಣಪಡಿಸಲಾಗದ ರೋಗ ಎಂಬ ಅರ್ಥದಲ್ಲಿ ಈ ನುಡಿಗಟ್ಟಿನ ಉಪಯೋಗವಾಗುತ್ತದೆ. ಒಳ್ಳೆಯದು - ಆಗುವುದು, ಒಳ್ಳೆಯದು - ಅನ್ನಿಸಿಕೊಳ್ಳುವುದು, ಒಳ್ಳೆಯದು ಎಂದು ತೋರಿಸಿಕೊಳ್ಳುವುದು ಎಂಬ ಮೂರು ವಿಧಗಳಿವೆ. ಅದರಲ್ಲಿ ಮೊದಲನೇ "ಒಳ್ಳೆಯದಾಗುವ" ವರ್ಗಕ್ಕೆ ಬಹುಶಃ ಈಗ ವಿದ್ಯಾರ್ಥಿಗಳಿಲ್ಲ; ಶಿಕ್ಷಕರೂ ಇಲ್ಲ. ಆದರಿಂದ ಆ ಶಾಲೆಯನ್ನು ಮುಚ್ಚಲಾಗಿದೆ. ಇನ್ನುಳಿದ "ಒಳ್ಳೆಯದು ಅನ್ನಿಸಿಕೊಳ್ಳುವುದು ಮತ್ತು ತೋರಿಸಿಕೊಳ್ಳುವುದು" ಎಂಬ ಎರಡು ವರ್ಗಗಳಲ್ಲಿ "ತಿರುಚು ಸಂಶೋಧನಾ ಪ್ರಬಂಧ" ಮಂಡಿಸುತ್ತ - ತಿರುಚು ಪ್ರಾವೀಣ್ಯತೆ ಹೊಂದಿ ಶತಾಯಗತಾಯ ಸ್ವೀಕಾರಾರ್ಹತೆ ಪಡೆಯಲು ನೂಕುನುಗ್ಗಲು ಹೆಚ್ಚಿದೆ. ಅಂತಹ "ಹುಚ್ಚು ಸಂತೆಯ ಮೆಚ್ಚಿನ ಪದಬಂಧ"ಗಳಿಗೆ ಮತ್ತು ಪ್ರಬಂಧಕಾರರಿಗೆ ಅವರವರೇ ಸೇರಿಕೊಂಡು "ಉಘೇ ಉಘೇ" ಎನ್ನುತ್ತಿರುವ ಪ್ರಹಸನಗಳೂ ನಡೆಯುತ್ತಿರುತ್ತವೆ.
ಒಳ್ಳೆಯ ವ್ಯಕ್ತಿಯಾಗುವುದು ಒಂದು ಆದರ್ಶ. ಆದರೆ ಯಾವುದೇ ಆದರ್ಶದಿಂದ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ ಒಳ್ಳೆಯ ವ್ಯಕ್ತಿ "ಅನ್ನಿಸಿಕೊಳ್ಳುವುದು" ಪ್ರತಿಯೊಂದು ಬದುಕಿಗೆ ಅವಶ್ಯ...ಅಧಿಕಾರ, ಸ್ವಾತಂತ್ರ್ಯ, ಹಕ್ಕುಗಳೆಲ್ಲವೂ ಬದುಕಲಿಕ್ಕೆಂದೇ ಇರುವುದು. ಅಪ್ಪಟ ಒಳ್ಳೆಯ ಬದುಕನ್ನು ಪಾಲಿಸುವುದರಿಂದ ಯಾರದೇ ಪ್ರಕೃತಿದತ್ತ ಅಧಿಕಾರವು ಕುಸಿಯುವುದಾದರೆ, ಸ್ವಾತಂತ್ರ್ಯವು ಕಡಿತವಾದರೆ, ಹಕ್ಕುಗಳು ಮಿತಗೊಂಡರೆ...ಅಂತಹ ಒಳ್ಳೆಯ ಬದುಕಿನ ಮಾರ್ಗವು ಜೀವವಿರೋಧಿ ಆಗುತ್ತದೆ. ಯಾವುದೇ ವ್ಯಕ್ತಿಯ ಕರ್ತವ್ಯಕ್ಕೂ ಇತಿಮಿತಿಯಿರಲೇಬೇಕು; ಯಾವುದೇ ಕರ್ತವ್ಯವು ಹೇರಿಕೆಯಾಗಬಾರದು. ಪ್ರಕೃತಿದತ್ತ ಕರ್ತವ್ಯಗಳನ್ನು ಧಿಕ್ಕರಿಸುವ ಹಕ್ಕು ಜನ್ಮಸಿದ್ಧವಾಗಿ ಹೊಂದದಿದ್ದರೆ ಸೃಜನಶೀಲ ಕ್ರಿಯೆಗಳಿಗೆ ಅಡ್ಡಿಯುಂಟುಮಾಡಿದಂತೆ ಆದೀತು. ಆದ್ದರಿಂದ ಹಕ್ಕುಗಳನ್ನು ಕತ್ತರಿಸುವ ಯಾವುದೇ ಕರ್ತವ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಧಿಕ್ಕರಿಸುವುದು ತಪ್ಪಲ್ಲ. ಬದುಕಲು ಒಳ್ಳೆಯ ವ್ಯಕ್ತಿ ಆಗಲೇ ಬೇಕೆಂದಿಲ್ಲ. ಒಳ್ಳೆಯತನವನ್ನು "ತೋರಿಸಿ"ಕೊಂಡರೂ ಸಾಕಾಗುತ್ತದೆ. ಯಾಕೆಂದರೆ ಬದುಕಿನ ಯಶಸ್ಸು ಎಲ್ಲಕ್ಕಿಂತ ದೊಡ್ಡದು. ಒಳ್ಳೆಯ ವ್ಯಕ್ತಿಯಾಗುವ ವ್ಯರ್ಥ ಭ್ರಮೆಯಲ್ಲಿ ಯಾವುದೇ ಬದುಕು ನಷ್ಟವಾಗಬಾರದು... ತಮಗೆ ಸರಿ ಕಂಡಂತೆ - ಜನ ಮೆಚ್ಚುವಂತೆ ಬದುಕಲು ಎಲ್ಲರಿಗೂ ಹಕ್ಕಿದೆ... ಆದ್ದರಿಂದ ಶಕ್ತಿಯಿಂದಲೋ ಯುಕ್ತಿಯಿಂದಲೋ - ಹೇಗಾದರೂ ಮಿಣಮಿಣ ಮಿಂಚಲು ಯತ್ನಿಸುವುದೇ ಯಾವುದೇ ಬದುಕಿಗೆ ಸೂಕ್ತವಾದ ದಾರಿ. ಒಳ್ಳೆಯದು ಅನ್ನಿಸಿಕೊಳ್ಳುವಾಗ ಅಥವ ತೋರಿಸಿಕೊಳ್ಳುವಾಗಲೂ ಕ್ಷಣಿಕವಾಗಿ ಒಳ್ಳೆಯತನದ ಆವಾಹನೆಯು ತಾನಾಗಿಯೇ ಆಗುವುದರಿಂದ ಒಳ್ಳೆಯ ವ್ಯಕ್ತಿಯಾಗುವ ಪೂರ್ಣ ಆದರ್ಶದ ಭ್ರಮೆಯಿಂದ ನಾವು ಪಾರಾಗುವುದೇ ಒಳ್ಳೆಯದು.... ತಮ್ಮ ಸ್ವಂತ ಕ್ಷೇಮ ಮತ್ತು ಸ್ವಂತ ಲಾಭವನ್ನೇ ಗುರಿಯಾಗಿಸಿಕೊಂಡ ಸಮಾಜಗಳು ಅನಾದಿಯಿಂದಲೂ "ಯಶಸ್ಸು" ಗಳಿಸುತ್ತ ಒಳ್ಳೆಯದಾಗುತ್ತಲೇ ಬಂದಿವೆ; ಉಪಾಯದಿಂದಲೇ ತಮ್ಮ ಬದುಕುಗಳನ್ನು ಸವಿಸವಿದು ಮೆದ್ದು ಹೋಗಿವೆ. ಹಣ್ಣುಗಳ ಮಧ್ಯದಲ್ಲಿ ಒಂದೆರಡು ಕೊಳೆತ ಹಣ್ಣುಗಳನ್ನೂ ಸೇರಿಸಿ ಮಾರುವುದು ವ್ಯಾಪಾರೀ ಧರ್ಮ; ದಿನವೂ ಭಜನೆ ಮಾಡಿ ನಿತ್ಯವ್ಯಾಪಾರದ ತಮ್ಮ ಕೆಡುಕನ್ನು ಒರೆಸಬಲ್ಲೆವು ಎನ್ನುವ ಮಾಂತ್ರಿಕ ಶಕ್ತಿಗಳಿಗೆ ಸಹಜವಾಗಿಯೇ ಹೆಚ್ಚು ಜನಧನ ಬಲ ಸಿಗುತ್ತದೆ. ಅದು ಬದುಕುವ - ಟೋಪೀ ಮಾರ್ಗವೂ ಹೌದು. ಆದರೆ ಒಳ್ಳೆಯದನ್ನು ಯಥಾವತ್ ಆಚರಿಸಲು ಪ್ರಯತ್ನಿಸುತ್ತಿದ್ದವರು ಗರಿಕೆ ಹುಲ್ಲಿನಂತೆ ಒಮ್ಮೆ ಒಣಗುತ್ತ ಒಮ್ಮೆ ಚಿಗುರುತ್ತ - ಯಥಾಸ್ಥಿತಿಯಲ್ಲಿ ಇರುವುದಕ್ಕೆ ಉಪಾಯದ ಕೊರತೆಯೇ ಕಾರಣ. ಒಳ್ಳೆಯತನವನ್ನು ಬಿಟ್ಟಲ್ಲದೆ ಉದ್ಧಾರವಿಲ್ಲ ಎಂಬ ಹಂತಕ್ಕೆ ಈಗ ಅವರೂ ಬರತೊಡಗಿದ್ದಾರೆ. ಒಳ್ಳೆಯತನ ಅನ್ನುವುದೇ ಸೋಲಿನ ಕತೆ. ಆದ್ದರಿಂದ ಒಳ್ಳೆಯ ಹುಟ್ಟಿಗಾಗಲೀ ಚಿಂತನೆಗಾಗಲೀ ಪ್ರಸ್ತುತದಲ್ಲಿ ಯಾವುದೇ ಸ್ಥಾನವಿಲ್ಲ. ಶೀಘ್ರ ಯಶಸ್ಸು ಪಡೆಯಲು ತೋರಿಕೆಯು ಬೇಕು. ಸಾಂದರ್ಭಿಕವಾಗಿ ವಾಗ್ಬಾಣ, ತೋಳ್ಬಾಣಗಳು ಬತ್ತಳಿಕೆಯಲ್ಲಿದ್ದರೆ ಸಾಕಾಗುತ್ತದೆ.... ಇಂತಹ - ಎಡಮಿದುಳಿನ ಪಾರಮ್ಯದ ಭಾವರಹಿತ ಚಿಂತನೆಗಳ ಮೋಡ ಕವಿದ ಸಮಾಜದಲ್ಲಿ ಈಗ ನಾವಿದ್ದೇವೆ.
"ಬ್ರಹ್ಮನೊಬ್ಬನೇ ಸತ್ಯ; ಕಾಣುವ ಈ ಜಗತ್ತು ಮಿಥ್ಯ" ಎಂದು ನಂಬಿಕೊಂಡ ಜನ - ಸಂಪ್ರದಾಯಸ್ಥ ಭಾರತೀಯರು. ಆದ್ದರಿಂದ ಈ ಮಿಥ್ಯ ಜಗತ್ತಿನಲ್ಲಿ ಆದರ್ಶ ಸತ್ಯಗಳಿಗೆ ನೆಲೆ ಸಿಗದು... "ಒಳ್ಳೆಯದು" ಎಂಬ ಅಪರಂಜಿಯಿಂದ ಬದುಕಿನ ಆಭರಣವನ್ನು ದೃಢವಾಗಿ ಕಟ್ಟಲಾಗದು..." ಇತ್ಯಾದಿ ಆಕ್ರಮಣಕಾರೀ - "ತಿರುಚು" ಸಂಶೋಧನೆಗಳಿಂದಾಗಿ, ಸದ್ಭಾವದ ಹೆದ್ದಾರಿಗಿಂತ ಸಂಕುಚಿತ ಕಿರುದಾರಿಯಲ್ಲಿಯೇ ಇಂದು ಯುವಜನರ ನೂಕುನುಗ್ಗಲು ಹೆಚ್ಚಿದೆ; ಅಟ್ಟಹಾಸಗಳು ವೇದಿಕೆ ಹಂಚಿಕೊಳ್ಳುತ್ತಿವೆ ಅಥವ ಪುರಭವನಗಳ ಎದುರಿನಲ್ಲಿ ಅಟಕಾಯಿಸುತ್ತವೆ. ಇದರಿಂದ, ಅಂತಹ ವಾತಾವರಣವನ್ನು ವೈಭವೀಕರಿಸುವ - ಪುನರಪಿ ಪ್ರದರ್ಶಿಸುವ ವ್ಯಾಪಾರೀ ಮಾಧ್ಯಮಗಳ ನಿತ್ಯದ ಬುತ್ತಿಯಂತೂ ತುಂಬುತ್ತಿದೆ.
ಒಂದು ದೇಶವು ಯುವಜನರಿಂದ ತುಂಬಿ ತುಳುಕುವ ದೇಶವಾದರೆ ದೇಶೋದ್ಧಾರವಾದೀತೆ ? ಎಂತಹ ಯುವಜನ ಎಂದೂ ಗಮನಿಸಬೇಕಲ್ಲವೆ ? ಇಂದಿನ ಯುವಜನರ ನಡುವೆ ಆಗಾಗ ಸಿಡಿಯುತ್ತಿರುವ "ಒಳ್ಳೇ ಬೆಂಕಿ"ಯ ಕಿಡಿಗಳು ಈ ದೇಶದ ಸಂಪತ್ತನ್ನು ಉಳಿಸಬಹುದೆ ? ದೇಶಪ್ರೇಮ ಎನ್ನುವ ಮಾತು - ಭಾವವನ್ನೇ "ಹುಚ್ಚು ಅಮಲು" ಎನ್ನುವ - ಧೀರ ಶಿಕ್ಷಕ ಯೋಧರು ಬಹಳ ಕಾಲದಿಂದಲೂ ನಮ್ಮ ಜೊತೆಗಿದ್ದಾರೆ. ವಿಶ್ವವಿದ್ಯಾಲಯಗಳೆಂಬ ಹಟ್ಟಿಗಳು ಅಂದು ಹುಟ್ಟಿದಾಗಲೇ ಕೆಟ್ಟೆಯಾಗಿದ್ದವು. ಈಗ ಗಬ್ಬು ನಾರುತ್ತಿದೆ - ಅಷ್ಟೆ. ಬುದ್ಧಿ ತಿರುಗಿಸಿಕೊಂಡೇ ಹುಟ್ಟಿದ ಮತ್ತು ಹುಟ್ಟಿದ ನಂತರ ತಾವಾಗಿಯೇ ಗುದ್ದಿ ತಿರುಗಿಸಿಕೊಂಡಿರುವ ಬುದ್ಧಿಯ "ತಿರುಪೋಕಿ ಶಿಕ್ಷಕ"ರು - "ಒಳ್ಳೆ" ಆಗುವ ಹುಮ್ಮಸ್ಸಿನಲ್ಲಿ ನಡೆಸುತ್ತಿರುವ ಹದ್ದು ಮೀರಿದ ಸೇವೆಯಾಟದ ಪರಿಣಾಮವು ಈಗ ನಮ್ಮ ಎದುರಿಗೇ ಇದೆ. ಭಾರತದ ಕೆಲವು ಸಂಸ್ಥೆಗಳಲ್ಲಿರುವಂತಹ ಇಂತಹ ಯುವಜನ ಸಂಪತ್ತು ಯಾವ DEMOCRACY ಯಲ್ಲೂ ಕಾಣಸಿಗದು. ಬೊಗಳುವವರನ್ನು ಕೆನೆಯಲು, ಕೆನೆಯುವವರನ್ನು ಊಳಿಡಲು ನೇಮಿಸಿದರೆ ಅಂತಹ ಅಪಾತ್ರರಿಂದ ಯಾವ ಕಾರ್ಯವೂ ಎಣಿಕೆಯಂತೆ ನಡೆಯಲಾರದು; ಯಾವ ಸಂಸ್ಥೆಯೂ ತಲೆ ಎತ್ತಿ ನಿಲ್ಲಲಾಗದು. ಸ್ವಸ್ಥ ಚಿಂತನೆ ಮತ್ತು ಸ್ವಸ್ಥ ಕರ್ಮದಿಂದ ಮಾತ್ರ ಸ್ವಸ್ಥ ಸಮಾಜವು ಅಸ್ತಿತ್ವ ಪಡೆದೀತು. ಉಪಕಾರ ಸ್ಮರಣೆಯ ಪರಿಚಯವಿಲ್ಲದ ಯಾವುದೇ ಅಸ್ವಸ್ಥ ಶಿಕ್ಷಣವು - ಗೋರ್ಕಲ್ಲ ಮೇಲೆ ಮಳೆಗರೆದಂತೆ ವ್ಯರ್ಥ.
ಕುಸಂಸ್ಕೃತ, ಲೆಕ್ಕಭರ್ತಿ ಖಾಲಿ ಬುರುಡೆಗಳ ಯಜಮಾನಿಕೆಯ ಕಾಲವಿದು. ಇಂದಿನ ನಮ್ಮ DEMOCRACY ಯಲ್ಲಿ ಕೋಟು ವಾಚುಗಳೂ ಹಾಸಿಗೆ ದಿಂಬುಗಳೂ ರಾಜಕೀಕರಣಗೊಳ್ಳುತ್ತಿಲ್ಲವೆ ? ಅಬ್ಬರಿಸಿ ಬೊಬ್ಬಿರಿಯುವವನೇ ಜಯಶಾಲಿ ಎನ್ನಿಸಿಕೊಳ್ಳುತ್ತಿಲ್ಲವೆ ? ಗಂಡ ಬಿಟ್ಟವಳಿಗೆ ಇಷ್ಟು - ಬಿಡಿಸಿಕೊಂಡವಳಿಗೆ ಇಷ್ಟು, ರೇಪ್ ಮಾಡಿಸಿಕೊಂಡವಳಿಗೆ ಇಷ್ಟು (ಅದರಲ್ಲೂ ಸಣ್ಣ ರೇಪಾದರೆ ಸ್ವಲ್ಪ - ಗುಂಪು ರೇಪಾದ Braveheart ಗಳಿಗೆ ಸ್ವಲ್ಪ ಹೆಚ್ಚು), ಕೆಲವು ಜಾತಿಯ ಮಂದಿ ಸತ್ತರೆ ಇಷ್ಟು, ಕೆಲವು ಜಾತಿಗೆ ದರ ಕಡಿಮೆ, ಕೆಲವು ಜಾತಿಗೆ ಹೆಚ್ಚು, ಕೆಲವು ಜಾತಿಯು ಮಾರುಕಟ್ಟೆಯಲ್ಲಿ ಆವುಕವಿಲ್ಲ...ಜಾತಿಗೊಂದು ರೇಟು, ರೈತ ಸತ್ತರೆ ಇಷ್ಟು, ಬಗೆಬಗೆಯ ಕಿರುಕುಳಗಳಿಗೆ ಇಷ್ಟಿಷ್ಟು, ಪಕ್ಷದವರಾದರೆ ಇಷ್ಟು - ನಿಷ್ಪಕ್ಷವಾದರೆ ಚಿಪ್ಪು - - ಎಂದು ನಿಗದಿ ಪಡಿಸುತ್ತ, --- ತನ್ಮೂಲಕ ಯಾರದೋ ಕೊಪ್ಪರಿಗೆಯನ್ನು ಎತ್ತೆತ್ತಿ ಕೊಡುವವರಿಗೆ ಸಿಗುವ ಪ್ರತಿಫಲ ಲಾಭವನ್ನನುಸರಿಸಿ ದರ ಚೀಟಿ ಹಚ್ಚಿ ವ್ಯಾಪಾರ ನಡೆಯುತ್ತಿರುವಾಗ ಸಮಾಜದ ನಿರ್ದಿಷ್ಟ ಮನುಷ್ಯ ಪ್ರಾಣಿಗಳು "ತೂಕಕ್ಕಿಟ್ಟ ವಸ್ತು"ಗಳಾಗುತ್ತಿಲ್ಲವೆ ? ನಾವು ಕಳೆದುಕೊಳ್ಳುವ ಎಲ್ಲ ಸುಖಗಳಿಗೂ - ಒಳಗಾಗುವ ಎಲ್ಲ ದುಃಖಗಳಿಗೂ ದುಡ್ಡೊಂದೇ ಪರಿಹಾರವೆ ? ದೇಶವಾಸಿಗಳ ಕ್ಷೇಮಚಿಂತನೆಗೆ ಇದೊಂದೇ ಪರ್ಯಾಯ ಮಾರ್ಗವೆ ? ಅನ್ಯ ಸಭ್ಯ ಮಾರ್ಗಗಳಿಲ್ಲವೆ ? ಯುವಜನರ ಯರ್ರಾಬಿರ್ರಿ ಘೋಷಣೆಗಳಿಂದ ರೋಮಾಂಚನಗೊಂಡು ಕುಪ್ಪಳಿಸುತ್ತಿರುವ ಈ ದೇಶದ ತಲೆ ತಿರುಗಿದ ಒಂದು ವರ್ಗದಿಂದ - "ಹೊಸ ಹೊಸ ಉದ್ಯೋಗ ಸೃಷ್ಟಿಸಿಕೊಳ್ಳಲು ಇಂತಹ ಆಮಿಷಗಳಿಂದ ಏನಾದರೂ ಕುಪ್ರೇರಣೆ ದೊರೆಯುತ್ತಿದೆಯೇ" ಎಂಬ ಸಮೀಕ್ಷೆಯನ್ನು ಎಲ್ಲಾದರೂ ನಡೆಸಲಾಗಿದೆಯೆ ? ಒಂದಿಷ್ಟು ನಂಬಿಕಾರ್ಹತೆಯನ್ನು ಯಾವುದೇ ಸಮೀಕ್ಷೆಗಳಾದರೂ ಈಗ ಉಳಿಸಿಕೊಂಡಿವೆಯೆ ? ದೇಶಹಿತದ ಮುಂದಾಲೋಚನೆಯಿಂದ ಉತ್ತಮ ಕಾರ್ಯಕ್ಕೆಳಸಲು ಪ್ರಯತ್ನಿಸುವ "ಬಹುಮತ ಸಭೆ"ಗಳನ್ನು ತಮ್ಮ ದೊಂಡೆಯಿಂದಲೇ (ದೊಂಡಾಸ್ತ್ರ) ಅಡಗಿಸುವ - ಪಶುಬಲ ತೋಳ್ಬಲಕ್ಕೂ ಮುಂದಾಗುತ್ತಿರುವ ರೌಡಿ (ಅಧಿಕ) ಪ್ರಸಂಗಗಳಿಗೆ ಈ ದೇಶವು ಈಗ ಮೂಕಸಾಕ್ಷಿಯಾಗುತ್ತಿಲ್ಲವೆ ? ಕೇವಲ ಪಕ್ಷ ಕಾಳಜಿಯೊಂದಲ್ಲದೆ ಯಾವುದೇ ಜನಪರ ಕಾಳಜಿಯಿಂದ ಯಾವುದಾದರೂ ದೇಶಹಿತ ಕಾರ್ಯವನ್ನು ನಡೆಸಲು ಈಗ ಸಾಧ್ಯವಾಗುತ್ತಿದೆಯೆ ? ಹೀಗೆ ಸ್ವಪಕ್ಷದ ಮತ ಬೇಟೆಗಾಗಿ ಜನರ ದುಡ್ಡನ್ನು ಬೇಕಾಬಿಟ್ಟಿಯಾಗಿ ಹಂಚುವ ದೊಂಬರಾಟವು ಯಾವ - ಯಾರ ಪುರುಷಾರ್ಥಕ್ಕಾಗಿ ? ಮಾತಿನ ರಂಗಪೂಜೆಯ ನಿತ್ಯದ ತೆಗಲೆ ವಿನೋದಾವಳಿಗಳಿಂದ ಬಿಡುವು ದೊರೆತರಲ್ಲವೇ ಯಾರಾದರೂ ಯೋಚಿಸುವುದು ? ಜನರು ಎಚ್ಚರಗೊಳ್ಳದೆ ಇಂತಹ ಯಾವ ಆಟಗಳೂ ನಿಲ್ಲಲಾರವು.
America ದ ಪ್ರಜಾಪ್ರಭುತ್ವದ ಯಶಸ್ಸಿಗೆ ಅವರ ರಾಷ್ಟ್ರಪ್ರೇಮವೇ ಮುಖ್ಯ ಕಾರಣ. America ದವರ ಚಲನಚಿತ್ರಗಳೂ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ. ಅವರ ಸೈನ್ಯ ಮತ್ತು ಪೋಲೀಸರನ್ನು ಆರಾಧಿಸುವ ಮತ್ತು ಅದನ್ನು ಸೂಕ್ತವಾಗಿ ಬಿಂಬಿಸುವ ಮನೋಭಾವ ಪ್ರತೀ ಅಮೇರಿಕನ್ನರಲ್ಲಿದೆ. ಕೆಲವೊಮ್ಮೆ ಅತಿಶಯೋಕ್ತಿ - ಅತಿವಿಜೃಂಭಣೆ ಅನ್ನಿಸಿದರೂ ಅಮೇರಿಕನ್ನರ ಆಂತರ್ಯದಲ್ಲಿರುವ ಸ್ವಾಭಿಮಾನವೇ ಅಂತಹ ನಿರ್ಮಾಣಗಳಿಗೆ ಕಾರಣ. ಆದರೆ, ಭಾರತದ ಸ್ಥಿತಿ - ಗತಿ ಇದಕ್ಕೆ ವಿಪರೀತವಾಗಿದೆ. ಇಂದಿನ ಬಹುತೇಕ ಭಾರತೀಯ ಚಲನಚಿತ್ರಗಳು ಅನುಕರಣೆ, ಅಣಕವಾಡು, ನಿರ್ಭಾವ, ಅಸಂಬದ್ಧಗಳ ಸಂತೆಯಾಗಿದೆ. ಯುವಜನತೆಗೆ ಸ್ಫೂರ್ತಿ ನೀಡಿ ದಾರಿ ತೋರಿಸಬಲ್ಲ ಯಾವುದೇ ಚಲನಚಿತ್ರಗಳು ಈಗ ಕಾಣಿಸುವುದಿಲ್ಲ. ಆದ್ದರಿಂದಲೇ ಭಾವಕ್ಕಿಂತ ದೇಹ ನೋಡುವ ಜನರೇ ಹೆಚ್ಚುತ್ತಿದ್ದಾರೆ. ಇಂತಹ Fashion ಗೆ ಒಳಗಾದ ಭಾರತೀಯ ಜಾನಪದವೂ ನವ್ಯದ ಹೆಸರಿನಲ್ಲಿ, Big Boss ಎಂಬ ಅಪಭ್ರಂಶದ ಪ್ರತಿರೂಪವಾಗುತ್ತ ಮನೆಹಾಳಿಗೆ ಹೊಸ ಹೊಸ ಕಾಣಿಕೆ ನೀಡುತ್ತಿದೆ. ಇಂದಿನ ಭಾರತೀಯ ಅಬದ್ಧ ಸಂತತಿಗಳಿಗೆ ಮತದಾನಕ್ಕಾಗಿ - ಉದ್ಯೋಗಿಗಳಿಗೆ ರಜೆ ಕೊಟ್ಟರೆ ಅವರು ಮತದಾನದಲ್ಲಿ ಭಾಗವಹಿಸದೆ Trekking, Picnic - ಎಂದು ತಿರುಗುತ್ತಾರೆ. ಅದೇ ಕರ್ತವ್ಯ ಮರೆತ ಸಂತತಿಗಳು ಗಲ್ಲಿ ಗಲ್ಲಿಗಳಲ್ಲಿ ನಿಂತು ಅಷಡ್ಡಾಳ ಮಾಡುತ್ತ ಹಕ್ಕುಗಳಿಗಾಗಿ ಗೋಳಿಡುವುದರಲ್ಲಿ ಮಾತ್ರ ಮೊದಲಿಗರಾಗುತ್ತಾರೆ.
ಅಂದರೆ...ಅಮೇರಿಕವು ಸ್ವರ್ಗವೆಂದೇನಲ್ಲ. ಆದರೆ, ಅವರ ರಾಷ್ಟ್ರೀಯ ಶಿಸ್ತು, ಕರ್ತವ್ಯ ಶ್ರದ್ಧೆಯು ಅನುಕರಣೀಯ. ಒಳ್ಳೆಯದನ್ನು ಅನುಕರಿಸಲು ಯಾವ ಮಡಿವಂತಿಕೆಯೂ ಬೇಕಾಗಿಲ್ಲ. ಲೌಕಿಕ ಭೋಗದ ಚರಮತಾಣವಾಗಿರುವ ಅಮೇರಿಕವನ್ನು ಮತ್ಸರಿಸುವ ಯೋಗ್ಯತೆಯು ನಮಗೆ ಸದ್ಯಕ್ಕಂತೂ ಇಲ್ಲ. ಯಾಕೆಂದರೆ ನಮ್ಮಲ್ಲಿ ಸದ್ಯಕ್ಕೆ- ಅಲೌಕಿಕದಲ್ಲಿ ನಂಬಿಕೆಯಿಲ್ಲ; ಲೌಕಿಕ ಪಾರಮ್ಯ ಸಾಧಿಸುವ ಯೋಗ್ಯತೆಯೂ ಇಲ್ಲ. ಭಾರತವು ಮೂಲತಃ ಆಧ್ಯಾತ್ಮಿಕದ ಗಟ್ಟಿ ನೆಲೆ. ವಿದೇಶೀಯರು ಭಾರತದತ್ತ ತಿರುಗಿ ನೋಡುವುದೂ ಇದೇ ಕಾರಣಕ್ಕೆ. ಅವರಿಗೆ OLIVE OIL ಹಿತವಾದರೆ ನಮ್ಮ ಪ್ರಕೃತಿಗೆ ತೆಂಗಿನೆಣ್ಣೆ / ಎಳ್ಳೆಣ್ಣೆ / ಸಾಸಿವೆ ಎಣ್ಣೆಯೇ ಸೂಕ್ತ. ಯಾರದ್ದೋ ವ್ಯಾಪಾರಕ್ಕಾಗಿ ಗಂಡಸು ಸೀರೆ ತೊಡಬೇಕಾಗಿಲ್ಲ; ಹೆಂಗಸು ಮೀಸೆ ಅಂಟಿಸಿಕೊಳ್ಳಬೇಕಾಗಿಲ್ಲ. ಅವರಿಗೆ PIZZA ವೇ ಬದುಕಾದರೆ, ನಮಗೆ ರೊಟ್ಟಿಯೇ ಬದುಕು. ಆಯಾ ನೆಲದ ಪ್ರಕೃತಿಗೆ ಹೊಂದುವ ಕ್ರಿಯೆಗಳಿಂದಲೇ ನಾವು ಔನ್ನತ್ಯವನ್ನು ಸಾಧಿಸಬೇಕೇ ವಿನಃ ಅಲ್ಲಿ ಇಲ್ಲಿಂದ ಪಡೆದ ಎರವಲು ಕೃತ್ಯ - ಚಿಂತನೆಗಳಿಂದಲ್ಲ.
"ಯಾವ ಅಂಗವೈಕಲ್ಯವೂ ಇಲ್ಲದ ನನ್ನ ದೇಹವನ್ನು ನಾನೇ ಶುಚಿಗೊಳಿಸಿಕೊಳ್ಳುತ್ತೇನೆ; ಅದಕ್ಕೆ ಯಾವ ಅಂಡೆಪಿರ್ಕಿಗಳ ಸಹಾಯವೂ ಬೇಡ" ಎನ್ನುವ ಜನಸಮೂಹವಿರುವಲ್ಲಿ ಮಾತ್ರ DEMOCRACY ಎಂಬುದು ಯಶಸ್ವಿಯಾಗುತ್ತದೆ. ವಿಕೃತ ಚಿಂತನೆ ನಡೆಸುತ್ತ ಕೈಕಾಲುಚಾಚಿ ಸದಾ ಮಲಗಿಕೊಂಡೇ ಇರುವ ಜನರಿಗೆ ಈ ವ್ಯವಸ್ಥೆಯು ನಿಶ್ಚಯವಾಗಿ ಹೇಳಿಸಿದ್ದಲ್ಲ. ಸರ್ವರಿಗೂ ಸಮಪಾಲು, ಸಮ ಬಾಳು ನೀಡಲಾಗದ DEMOCRACY ಯು DEMOCRACY ಯೇ ಅಲ್ಲ. ಅದು DEMOCRACY ಯ ಕರಾಳ ವಿಡಂಬನೆ.
"ಒಳ್ಳೆಯದು ಅನ್ನುವುದೇ ಒಂದು ಆದರ್ಶ; ಅದು ಪ್ರಾಯೋಗಿಕವಲ್ಲ" ಅನ್ನುವವರು ಯೋಚಿಸಲಿ. DEMOCRACY ಅನ್ನುವುದೇ ಒಂದು ಆದರ್ಶ - ಅಲ್ಲವೆ ? ಪೂರ್ಣ ಸ್ವಾತಂತ್ರ್ಯ ಅನ್ನುವುದು ಇನ್ನೊಂದು ಆದರ್ಶ. ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದೂ ಆದರ್ಶವೇ. "ಬಹುಮತ" ಎಂಬ ನಿರ್ದೇಶಕರ ಪಾರುಪತ್ಯದಲ್ಲಿ ಸಾಗುವ "ಪ್ರಜಾಪ್ರಭುತ್ವ" ಎಂಬ ಅಮೂರ್ತವು ಆದರ್ಶದ ಪರಮಾವಧಿ. ಆದರೆ... ಇಂದಿನ ತಿರುಚು ಆದರ್ಶಗಳ ಪ್ರತಿಪಾದಕರಾದ ಬುದ್ಧಿ ತಿರುಕರು ಒಮ್ಮೊಮ್ಮೆ ತಮ್ಮ ಅನುಕೂಲವೆಂಬ ಶಾಸ್ತ್ರದ ಹಾದಿ ಹಿಡಿದರೆ ಇನ್ನೊಮ್ಮೆ ಹಿಟ್ಲರನ ಪೂಜಕರಂತೆ ವರ್ತಿಸುತ್ತ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿಲ್ಲವೆ ? ಈ ಬಳಗದವರದ್ದು - ತಮಗೆ "ಲಾಭ ತರುವ - ಒಪ್ಪುವ ಆದರ್ಶ"ಗಳು ಮಾತ್ರ ಬರುತ್ತಿರಲಿ; ತಮ್ಮನ್ನು "ನಿಯಂತ್ರಿಸುವ - ಒಪ್ಪದ ಆದರ್ಶ"ಗಳು ಬೇಡವೇ ಬೇಡ - ಅನ್ನುವ ಕಾ(ಕಾ)ಜಾಣ ನಿಲುವೆ ? ಇಂತಹ ಸೋಜಿಗ ಮೋಜಿಗರಿಗೆ - ಸ್ವಾನುಕೂಲಿಗರಿಗೆ DEMOCRACY ಯ ತುರಿಕೆ ಯಾಕೆ ? ಅರಾಜಕತೆ ಮತ್ತು ಪ್ರಜಾಪ್ರಭುತ್ವದ ನಡುವೆ ಇರುವುದು ಅತೀ ತೆಳ್ಳಗಿನ ಗೆರೆ. ಜವಾಬ್ದಾರಿ ಮರೆತ ಪ್ರಜಾಪ್ರಭುತ್ವವು "ಅರಾಜಕ"ವಾಗಲು ಹೆಚ್ಚು ಸಮಯ ಬೇಕಿಲ್ಲ. ಇಂದಿನ ಭಾರತವನ್ನು ನೋಡಿದರೆ ಪ್ಲೇಟೋ, ಅರಿಸ್ಟಾಟಲ್ ಗಳೂ "ತಪ್ಪಾಯ್ತು ತಪ್ಪಾಯ್ತು" ಅನ್ನುತ್ತ ತಲೆತಲೆ ಹೊಡೆದುಕೊಳ್ಳುವಂತಿದೆ.
ಭಾರತದ ಶೈಕ್ಷಣಿಕ ವಲಯಗಳಲ್ಲಿ "ಎಡ - ಬಿಡಂಗಿ ಒಳ್ಳೆಯತನ" ಎಂಬ ಭಾವನೆರಳಿನ ಶಿಕ್ಷಣವು ಬಹಳ ವರ್ಷಗಳಿಂದ ಪಸರಿಸಿದೆ. ನಮ್ಮ ತೆರಿಗೆಯ ದುಡ್ಡಿನಿಂದಲೇ ಪರಮಸ್ವಾರ್ಥಿಗಳಾದ ಪಿತೂರಿಕೋರರು ಸೇರಿಕೊಂಡು ನಡೆಸುತ್ತಿರುವ ಭಯಂಕರ ದ್ರೋಹ ಚಿಂತನೆಯ ಇಂತಹ ಪಿತ್ತ ಮಹಾಕಾಮಾಲಯಗಳು - ಈಗ ಬಯಲು ಬೆತ್ತಲಾಗುತ್ತಿವೆ. ಆದರೆ ನಮ್ಮ ಪ್ರಜಾಪ್ರಭುತ್ವದ ಗಟ್ಟಿ ಕಂಬ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಕೆಲವು ಮಾಧ್ಯಮಗಳು ಈಗಲೂ ಕಣ್ಣಿಗೆ ಧೂಳಡರಿದಂತೆ "ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ" ಪ್ರತಿಕ್ರಿಯಿಸುತ್ತಿವೆ. ಪಾಪ.....ಹೊಟ್ಟೇ ಪಾಡು !
ದುಷ್ಟತನವನ್ನು ಒಳ್ಳೆಯತನದ ಆಕುಂಠನದಿಂದ ಮರೆಯಾಗಿಸಿ ವೈಭವೀಕರಿಸುವ ವಿದ್ಯಾಲಯಗಳು, ಯಾವುದೇ ಕೆಲಸಕ್ಕೆ ಬಾರದ - ಕಿಂಚಿತ್ ಜೀವನೋಪಯೋಗಿಯೂ ಆಗದ ಸಂಶೋಧನಾ ಶಬ್ದ ಸಂತೆಯ ವ್ಯರ್ಥ Cut - Paste ಪ್ರಬಂಧಗಳು, ಅವುಗಳಿಗೆ ಚಿನ್ನದ ಪದಕಗಳು... ನಿಜ ವಿದೂಷಕ ವೇಷ ಧರಿಸುವ ಅನುಕರಣೆಯ - ಘಟಿಕೋತ್ಸವ ಪದವಿ ಪ್ರದಾನ ಸಮಾರಂಭಗಳ ಅಟ್ಟಹಾಸ, ಅದರ ನೇರ ಪ್ರಸಾರ... ಇವೆಲ್ಲವುಗಳ ಅತ್ತ ಇತ್ತಿನ ಖರ್ಚು ವೆಚ್ಚಗಳ ಕಾಗೆ ಲೆಕ್ಕ... ಅವನ್ನೆಲ್ಲ ಮಾತಿಲ್ಲದೆ ಒಪ್ಪಿ, ಅಂತಹ "ಒಳ್ಳೆ ಗುಳ್ಳೆ"ಗಳ ಛದ್ಮವೇಷದ ಸ್ಪರ್ಧೆಯಲ್ಲಿ ಭಾಗವಹಿಸುವ - "ತಿಂಗಳ ಮುಟ್ಟಿನಂತೆ ಬಂದು ಹೋಗುವ ಆಡಳಿತ ವ್ಯವಸ್ಥೆಗಳು"... ಹೀಗೆ, ಎಲ್ಲರಿಂದಲೂ "ಒಳ್ಳೆ" ಅನ್ನಿಸಿಕೊಳ್ಳುವ, ತೋರಿಸಿಕೊಳ್ಳುವ ನಾಟಕದಲ್ಲಿ ಎಲ್ಲರೂ ಸಹಪಾತ್ರಧಾರಿಗಳು. ಭಾರತದ ಸ್ವಾತಂತ್ರ್ಯಾ ನಂತರ ಹುಟ್ಟಿಕೊಂಡ ಸಾಮಾಜಿಕ ಶಿಕ್ಷಣವೆಂಬ ನಾಟಕ ಕಂಪೆನಿಗೆ - ಮರು ಕಾಯಕಲ್ಪ ಮಾಡುವ ಘಳಿಗೆಯು ಈಗಲಾದರೂ ಬರಬಹುದು ಅಂದುಕೊಳ್ಳಲು ಸುತರಾಂ ವಿಶ್ವಾಸ ಮೂಡಲಾರದು. ಯಾಕೆಂದರೆ ನಾನು ಈಗ ಚಾಲ್ತಿಯಲ್ಲಿರುವ "ಒಳ್ಳೆ" ಅನ್ನುವ ಶಬ್ದ ಮತ್ತು "ಒಳ್ಳೆ ಗುಂಪಿನ" ಅನುಯಾಯಿಯಲ್ಲ.
ಕೆಲವೇ ದಶಕಗಳ ಅವಧಿಯಲ್ಲಿ ವಿವೇಚನೆಯಿಲ್ಲದೆ - ಅಂಕೆಯಿಲ್ಲದೆ ನಾವು ಗೀಚಿದ ಮಿತಿಮೀರಿದ ಚಿತ್ತುಗಳನ್ನು ಈಗ ತಿದ್ದಿ ಬರೆಯುವುದು ಅಸಾಧ್ಯವೇ ಆಗಿಹೋಗಿದೆ. ಇಂದಿನ ಕೇಂದ್ರ ಸರಕಾರವು ನಡೆಸುತ್ತಿರುವ ಪ್ರಯತ್ನಗಳನ್ನೆಲ್ಲ ಕಾಮಾಲೆ ಬಣ್ಣದಿಂದಲೇ ಗುರುತಿಸುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ. ಅದಕ್ಕೆ ಪೂರ್ವ ಕವಿಗಳ ಯಾವುದೋ ಕವನದ ಯಾವುದೋ ನಡುವಿನ ಒಂದು ಸಾಲನ್ನು ಎತ್ತಿ ತೋರಿಸುವ ಬುದ್ಧಿಯ ಚೇಷ್ಟೆಯೂ ನಡೆಯುತ್ತಿದೆ. ಅತೀತವನ್ನು ನೋಡಿ ತಮ್ಮ ಯಶಸ್ಸಿನ ದಾರಿಯನ್ನು ಹುಡುಕಿ ಕಲಿತು ಅನುಸರಿಸುವವರಿಗೆ ಯಾವುದೋ ಬಣ್ಣ ಬಳಿದು ಮೂದಲಿಸುವ ಮೂಲಕ ತಮ್ಮನ್ನು ತಾವೇ "ಭವಿಷ್ಯದ ಕನಸು ಕಾಣುವ ವರ್ಗ" ಎಂದು ಸ್ಥಾಪಿಸಿಕೊಳ್ಳುವ ಹುನ್ನಾರವೂ ಆರಂಭವಾಗಿದೆ. ಕೆಲವರಿಗೆ ಗತದ ದುರ್ವಾಸನೆ - ಸುವಾಸನೆಗಳು ಅಗತ್ಯಕ್ಕೆ ಬೇಕಾದಂತೆ ಹೊಳೆದುಬಿಡುತ್ತವೆ. "ಸತ್ತ ಎಮ್ಮೆಗೆ ಹಾಲು ಹೆಚ್ಚು" ಎನ್ನುವ ಯಾವ ಸೋಗೂ ಅನಪೇಕ್ಷಿತ. ಆದರೆ ಮತಬೇಟೆಗೆ ದಿನಕ್ಕೊಂದು ಕಿಂಡಿಯು ತೆರೆದುಕೊಳ್ಳುತ್ತಲೇ ಇರುವುದು ವಾಸ್ತವ. ಅಸ್ತಿ - ಆಸ್ತಿಯ ವಿಲೇವಾರಿ ನಡೆಸುವ ಫಲಾನುಭವಿ ಸಂತಾನಗಳಿಗೆ ತಮ್ಮ ಅತೀತವನ್ನು ಧಿಕ್ಕರಿಸುವ ಮೌಢ್ಯವು ಇರಲೇಬಾರದು. ಹಿಂದೂ ಇಲ್ಲದ ಮುಂದೂ ಇಲ್ಲದ ಇವರನ್ನೆಲ್ಲ ಪೂರ್ತಿಯಾಗಿ ನಿಷ್ಪಕ್ಷ ದೃಷ್ಟಿಯಿಂದ ನೋಡಲು ಸೋತರೆ ಸ್ಪಷ್ಟತೆಯಿಲ್ಲದ ಅಯೋಮಯವೇ ಮುಂದುವರಿದೀತು. ಪಾರದರ್ಶಕತೆಯೊಂದಿಗೆ ಅಭಿವೃದ್ಧಿಯ ಸಾಕ್ಷ್ಯಗಳು ಸಾಕಾರಗೊಳ್ಳುತ್ತಿರುವ ಈ ಹಂತದಲ್ಲಿ ದೇಶದ ಬೆಳವಣಿಗೆಯ ವೇಗವನ್ನು ತಡೆಯುವ ಹುನ್ನಾರದಿಂದಲೇ "ಬೆಂಕಿ - ತುಪ್ಪ"ದ ಆಟದಲ್ಲಿ ಸಂಪೂರ್ಣ ಮುಳುಗಿರುವ ನಮ್ಮ "Shouting Sqaud" ನ್ನು ಎಲ್ಲರೂ ಪೂರ್ವಾಗ್ರಹವಿಲ್ಲದೆ ಗಮನಿಸಬೇಕಾಗಿದೆ. "ಚುನಾವಣಾ ಸ್ಪರ್ಧಿಯ ಧ್ವನಿಯ ತೀವ್ರತೆ - ಬಡಿದು ತಿನ್ನುವ ವ್ಯಾಘ್ರಶಕ್ತಿಯೇ ಭಾರತದ ಸಂಸದರಿಗೆ ಇರಬೇಕಾದ ಮುಖ್ಯ ಅರ್ಹತೆ" ಎಂದು ಭವಿಷ್ಯದಲ್ಲಿ ಪರಿಗಣಿಸಬೇಕಾದೀತೆ ? ಎಂದೂ ಯೋಚಿಸುವಂತಾಗಿದೆ. ಜನಪ್ರತಿನಿಧಿಗಳ ಕುತ್ಸಿತ ಚೇಷ್ಟೆಗಳಿಂದಾಗಿ ಸಂಸತ್ತಿನ ಗಾಂಭೀರ್ಯವು ಸಾರ್ವಕಾಲಿಕ ತಳ ಹಿಡಿದಿದೆ. ಲೋಕಸಭೆ, ರಾಜ್ಯಸಭೆಗಳ ನೇರ ಪ್ರಸಾರವನ್ನು ನೋಡುವ ಜನಸಾಮಾನ್ಯರು ಹತಾಶರಾಗುತ್ತಿದ್ದಾರೆ. ಹೀಗಿದ್ದರೂ... ಇವನ್ನೆಲ್ಲ "ಸಕಾರಾತ್ಮಕ"ವಾಗಿ ನೋಡಬೇಕು ಎನ್ನುವ ಸರ್ಕಸ್ ಗಳು ಈಗಲೂ ನಡೆಯುತ್ತಿವೆ. ಎಲ್ಲ ಬಗೆಯ ಸರ್ಕಸ್ ಗಳಿಗೂ ಈಗ ಪ್ರಾಯೋಜಕರು ಸಿಗುತ್ತಾರೆ!
ಭಾರತದ ಭೌಗೋಳಿಕ ಸ್ಥಿತಿ - ಗತಿಯ ಅಸ್ಥಿರತೆಗೆ ಮಹಾಭಾರತಕ್ಕೂ ಪೂರ್ವದ ದೀರ್ಘ ಹಿನ್ನೆಲೆಯೂ ಇದೆ. ಅದು ಇಂದಿಗೂ ಭಿನ್ನವಾಗಿಲ್ಲ. ಮೇಲಿನ ಉತ್ತರದಿಂದ ಆಗಾಗ ಮುನಿಸಿಕೊಳ್ಳುವ ಹಿಮಾಲಯವು ಲತ್ತೆ ನೀಡುತ್ತಿದ್ದರೆ, ಪಶ್ಚಿಮ ಬದಿಯಿಂದ ಅರಬ್ಬೀ ಅಲೆ, ಪೂರ್ವ ಬಲದಿಂದ - ಕೊಲ್ಲಿ ಬಂಗಾಳ. ಸುತ್ತಲೂ ದೈತ್ಯ ನೃತ್ಯ. ಇವುಗಳ ಕಾಲಬುಡದಲ್ಲಿ ಸಿಕ್ಕಿಕೊಂಡಿರುವ ಹಿಂದೂ ಮಹಾಸಮುದ್ರವು ನಿರಂತರ ಚಡಪಡಿಸುತ್ತಿದೆ, ತಳಮಳಿಸುತ್ತಿದೆ - ಅಂದಿನಿಂದಲೂ. ಶಕ್ತಿಯಾಗಬಹುದಾಗಿದ್ದ ನಮ್ಮ ಸಹಜ ಸಂಪತ್ತೇ ನಮಗೆ ತಿರುಗಿ ನಿಂತಿರುವುದಾದರೂ ಏಕೆ ? ನಮಗೆ ಪ್ರಜ್ಞೆ ಬೇಡವೆ ? ಈ ಭಾರತದ ನೂರಾರು ದೇಶಭಕ್ತರನ್ನು ಬೆರಳೆಣಿಕೆಯ ದ್ರೋಹಿಗಳು ನೆಲ ಕಚ್ಚಿಸಿದ ಸಾಕ್ಷ್ಯಗಳಿಲ್ಲವೆ ? ಬೇಜವಾಬ್ದಾರಿ ಸ್ವಾರ್ಥದ ಒಳ್ಳೆಯತನವು ಯಾರಿಗೂ ಎಂದಿಗೂ ಮಿತ್ರನಲ್ಲ; ಅದು ವಿನಾಶದ ಮಾರ್ಗದರ್ಶಿ.
ಕೇವಲ ಪೊಗರು ತುಂಬುವ, ಬದ್ಧತೆಗಳ ಅರಿವು ಮೂಡಿಸಲಾಗದ ಇಂದಿನ ಎರವಲು ಶಿಕ್ಷಣದಿಂದಾಗಿ, ತಮಗೆ ಅನ್ನಿಸಿದ್ದನ್ನೆಲ್ಲ ಅವಿವೇಕಿಗಳಂತೆ ಮಾಡುವ ದಿಟ್ಟತನವು ಇಂದಿನ ಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. "ತಪ್ಪುಗಳನ್ನು ಮಾಡಲು ಆಕ್ಷೇಪವಿಲ್ಲ; ಆದರೆ ಸಿಕ್ಕಿಬೀಳಬೇಡಿ.." ಎಂಬ ಕಳ್ಳ ನೀತಿಪಾಠವು ಇಂದಿನ ಮಕ್ಕಳನ್ನು ಆತಂಕಗೊಳಿಸುತ್ತ ಕ್ರಮೇಣ ಭಯೋತ್ಪಾದಕರನ್ನಾಗಿಸುತ್ತಿದೆ. ಸಾಮಾನ್ಯ ಕಳ್ಳರನ್ನು ಪ್ರಚಂಡ ಕಳ್ಳರನ್ನಾಗಿಸುವ ಇಂದಿನ ಪಂಚತಾರಾ ವಿದ್ಯಾಲಯಗಳಿಗಾಗಿ ಸಾಮಾನ್ಯ ಪ್ರಜೆಗಳು ತಮ್ಮ ಹೊಟ್ಟೆಬಟ್ಟೆ ಕಟ್ಟಿ ತೆತ್ತ ತೆರಿಗೆಯ ಹಣದ ದುರ್ವ್ಯಯವಾಗುತ್ತಿದೆ. ಚುನಾಯಿತ ಸರಕಾರಗಳು ಹೀಗೆ ನೀಡುತ್ತಿರುವ ಬಿಟ್ಟಿ ಕೂಳು, ಬಿಟ್ಟಿ ಶಿಕ್ಷಣದ ತೆಗಲೆಯಿಂದಾಗಿ ಉಂಡಾಡಿಗುಂಡರ ಅವಿವೇಕಿ ಪಡೆಯು ಈಗ ಬಾಯ್ತೆರೆದು ನಿಂತಿದೆ. ದ್ರೋಹ ಚಿಂತನೆಯ ಅಂತಹ ಸೈನ್ಯಕ್ಕೆ ಪರೋಕ್ಷ ಸಹಾನುಭೂತಿ ತೋರುತ್ತ ಅವರನ್ನು ಜಾಣ್ಮೆಯಿಂದ ಬೆಳೆಸುತ್ತಿದ್ದ ಮಿದುಳುಜ್ವರದ ಖದೀಮರು, ಈಗ ಪ್ರತ್ಯಕ್ಷವಾಗಿ ಬೆಂಬಲ ನೀಡುವ ಸೊಕ್ಕನ್ನೂ ಪ್ರದರ್ಶಿಸುತ್ತಿದ್ದಾರೆ. ಒಟ್ಟಿನಲ್ಲಿ "ಒಳ್ಳೆಯ ಪಕ್ಷ" ಅನ್ನಿಸಿಕೊಳ್ಳಲು ವ್ಯಾಪಕವಾಗಿ ಆಂಗಿಕ ವ್ಯಾಯಾಮ - ಮೇಲಾಟ ನಡೆಯುತ್ತಿದೆ. ಭಾರತದ "ಪಕ್ಷ ರಾಜಕಾರಣ" ಎಂಬುದು ಸಾರ್ವಕಾಲಿಕ ನಿಕೃಷ್ಟ ಮಟ್ಟಕ್ಕೆ ಕುಸಿದಿದೆ. ಬುಗುಟು ಬುದ್ಧಿಯ ಪ್ರಶಸ್ತಿಗುಟುಕ ಅವಕಾಶವಾದಿ ಬುಕ್ಕಿಗಳು, ಸ್ವಯಂಘೋಷಿತ "ದೊಡ್ಡ ಮನುಷ್ಯರು"ಗಳು - ಬಂದ ಬಂದ ಗಂಗೆಯ ತೆರೆಯಲ್ಲಿ ತಾವೂ ಮುಳುಗಿ ಎದ್ದು - ತಮ್ಮ "ಒಳ್ಳೆಯ ವೇಷ"ವನ್ನು ಪ್ರದರ್ಶಿಸಲು ಸಾಲುಗಟ್ಟಿ ನಿಂತಿದ್ದಾರೆ. ಕೆಲವರು ಶತಶತಮಾನ ಪೂರ್ವದ ದೃಷ್ಟಾಂತ ತಿರುಚುಗಳ ಸುರಿಮಳೆಗರೆಯುತ್ತ ಒಳ್ಳೆಯ ಸಾಲಿನಲ್ಲಿ ಮುಂಚೂಣಿಯಲ್ಲಿರಲು ನರ್ತಿಸುತ್ತಿದ್ದಾರೆ. ಹಾಗಿದ್ದರೆ, ಇವರಲ್ಲಿ ಒಳ್ಳೆಯವರು ಯಾರು ? ತೋರಿಕೆಯವರು ಯಾರು ? ಒಳ್ಳೆಯದು ಯಾವುದು ? ತೋರಿಕೆ ಯಾವುದು ? ಎಂಬುದು ಅರ್ಥವಾಗದಷ್ಟು ಇಂದಿನ ಜನರು ಮುಗ್ಧರೆ ? ಆದರೆ ಭಾರತೀಯರು ಅತ್ಯಂತ ಸಹನಶೀಲರು ಎಂಬುದರಲ್ಲಿ ಸಂಶಯವಿಲ್ಲ. ತೀರ ತಮ್ಮ ಹಿತ್ತಲಿಗೇ ಯಾವುದೇ ಸಮಸ್ಯೆಯು ಬರುವ ವರೆಗೂ - ನಮ್ಮ ಜನರು ತಟಸ್ಥರಾಗಿರುವುದೂ ಕೂಡ "ಒಳ್ಳೆಯದು ಅನ್ನಿಸಿಕೊಳ್ಳುವ" - ಸ್ವಾರ್ಥ ಕೇಂದ್ರಿತ ಭಾರತೀಯ ರೀತಿಯೂ ಹೌದು. ಅದಕ್ಕೇ ಈ ಸನಾತನ ಭಾರತವು - ಅಂದಿನಿಂದಲೂ ಹೀಗೇ ಇದೆ. ನಮ್ಮ ಜನರ ಇಂತಹ ಉದಾಸೀನ ಭಾವದಿಂದಲೇ - ಪೂರ್ವದಲ್ಲಿ ಘಟಿಸಿದ ಅನೇಕ ಅನಾಹುತಗಳು, ಅನಂತರದ ನರಳಾಟಗಳು - ಇತಿಹಾಸದ ಪುಟಗಳಲ್ಲಿ ಎಲ್ಲೋ ಅಲ್ಪಸ್ವಲ್ಪ ಮಾತ್ರ ದಾಖಲಾಗಿವೆ. ಆದರೆ ಇಂದಿಗೂ - ನಾವು ಅಲ್ಲೇ ಇದ್ದೇವೆ. ಏಕೆಂದರೆ ನಾವಿರೋದು ಹೀಗೇ...!
ನಂಬಿಕೆ, ದೇವರು ಎಂಬ ವಿಷಯದಲ್ಲಿಯೂ - ಇಂದು ನಮಗೆ ಇಂಥದ್ದೇ ದೇವರು, ನಂಬಿಕೆ ಎಂಬುದು ಬೇಕೆಂದಿಲ್ಲ; ಯಾವುದೂ ನಡೆಯುತ್ತದೆ. ಬಗೆಬಗೆಯ "ಭಾಗ್ಯ" ದೇವರುಗಳನ್ನು ಪಕ್ಷ ಮಾಸಗಳಿಗೊಮ್ಮೆ ನಾವೇ ಉದುರಿಸಬಲ್ಲೆವು ಎನ್ನುವ ರಾಜಕೀಯೋದ್ಭವ ಮಾಲಿಂಗಿಗಳಿಗೂ ಇಲ್ಲಿ ಬರವಿಲ್ಲ. ಸಮಾಜದಲ್ಲಿ ಪುರುಷವಾದಿ ಮಹಿಳೆಯರು ಹೆಚ್ಚುತ್ತಿದ್ದಾರೆ ಎಂದು ಗೋಳಿಡುವ ಕೂದಲು ನೆರೆತ ಮಹಿಳೆಯರು ಇರುವುದೂ ನಮ್ಮ - ಉಚಿತ ಭಾಗ್ಯವೇ. ಇಂತಹ ಪರಿಸರದಲ್ಲಿ ಉಸಿರು ಬಿಗಿಹಿಡಿದಿರುವ - "ಒಳ್ಳೆಯತನ" ಎಂಬ - "ಮಿಣಕಲಾಡಿ ವಿದ್ಯಾ ಭಾಗ್ಯ"ವನ್ನು ಗಿಟ್ಟಿಸಿಕೊಳ್ಳಲಾಗದ ಪಾಪದ (ಪಾಪಿ) ಜನರು ಬಸವಳಿದಂತೆ ಕಾಣುತ್ತಿರುವುದೂ ಸುಳ್ಳಲ್ಲ. ಆದ್ದರಿಂದಲೇ ನಮ್ಮ DEMOCRACY ಯ ಇಂದಿನ ಸ್ಥಿತಿಯು "Operation success, Patient died" ಎಂಬಂತಿದೆ. ಯಾವುದೇ ಮಾತು ಕೃತಿಗೆ ಇಳಿದಾಗ ಮಾತ್ರ ಯಶಸ್ಸು; ಅದಿಲ್ಲವಾದರೆ ಕಪ್ಪೆಗಳ ಗುಟುಗುಟುರು.
"ಗುಣವಂತನಾದ ಒಬ್ಬ ಪುತ್ರನಿದ್ದರೆ ಸಾಕು; ನೂರಾರು ಮಕ್ಕಳಿಂದ ಏನು ಪ್ರಯೋಜನ ? ಅನೇಕ ನಕ್ಷತ್ರಗಳಿಂದ ಹೋಗಲಾಡಿಸಲಾಗದ ಕತ್ತಲೆಯು ಒಬ್ಬ ಚಂದ್ರನಿಂದ ಪರಿಹಾರವಾಗುವುದು". ಅಂತಹ ಚಂದ್ರನಿಗಾಗಿ ಈ ದೇಶವು ತಹತಹಿಸುತ್ತಿದೆ. ರವಿಯಿಲ್ಲದ ನಭ, ನವಿಲಿಲ್ಲದ ವನ, ಸರೋಜವಿಲ್ಲದ ಕೊಳವು ಬರಡು. ದೇಶಭಾವವಿಲ್ಲದ ದೇಶವಾಸಿಗಳು ಕೋಟಿಯಿದ್ದರೂ ವ್ಯರ್ಥ. "ನೂರು ಜನ ಸಶಕ್ತ ಸುಸಂಸ್ಕೃತ ಯುವ ಬಲದಿಂದ ಜಗತ್ತನ್ನೇ ಕಟ್ಟಬಲ್ಲೆ" ಎನ್ನಬಲ್ಲ ಇನ್ನೊಂದು ವಿವೇಕಾನಂದ ಶಕ್ತಿಗೆ ಜೀವತುಂಬಬೇಕಾಗಿದೆ. ಗುಲಾಮತನ ಅಥವ ದುಂಡಾವರ್ತಿ ಮನೋಭಾವದ ಕ್ಷುಲ್ಲಕ ವರ್ತನೆಗಳು ಇಲ್ಲದಂತಾಗಿ ಪ್ರಜೆಗಳು ಸರಕಾರದ ಭಾಗದಂತೆ ನಡೆದುಕೊಳ್ಳುವ ಪ್ರದೇಶದಲ್ಲಿ ಮಾತ್ರ ಪ್ರಜಾಪ್ರಭುತ್ವವು ಯಶಸ್ಸು ಕಾಣಬಹುದು. ವಿತಂಡವಾದದ ಬುದ್ಧಿ ಹೆಗ್ಗಣಗಳಿರುವಲ್ಲಿ ಯಾವ ಪ್ರಭುತ್ವವೂ ಚಿಗುರಲಾರದು. Abnormal ಗಳನ್ನುNormal ಮಾಡುವ ಸಡಿಲು ಸಡಗರದಲ್ಲಿ ತೊಡಗಿಕೊಂಡು, Normal ಗಳನ್ನು Abnormal ಆಗಿ ಪರಿವರ್ತಿಸುತ್ತಿದ್ದೇವೆಯೆ ? ಎಂಬುದೂ ಯೋಚಿಸಬೇಕಾದ ವಿಷಯ. ಅತೀತವನ್ನು ಧಿಕ್ಕರಿಸಿ ಭೋರ್ಗರೆಯುವುದೇ ಆಧುನಿಕತೆಯ ಲಕ್ಷಣವೆಂಬಂತೆಯೂ ತೋರುತ್ತದೆ. ಆದರೆ ಸುವ್ಯವಸ್ಥೆಗಾಗಿ - "ಅತೀತ"ದ ಔಷಧವನ್ನೇ "ಭವಿಷ್ಯ"ದಲ್ಲೂ ಅವಲಂಬಿಸುವುದು ಅನಿವಾರ್ಯ. ದೇಶಭಾವದ ಜೊತೆಗೆ ಚೆಲ್ಲಾಟವಾಡುತ್ತ ತೋಳು ತೊಡೆ ತಟ್ಟುವವರಿಗೆ - "ದಂಡಂ ಪರಮೌಷಧಂ".
ಇಂತಹ ಕುಪುತ್ರರನ್ನು ಹಿಡಿದು ಕಟ್ಟಿ, ಖೊಟ್ಟಿ ಮನುಷ್ಯರ ಅಡೆತಡೆಗಳನ್ನು ಎದುರಿಸಿ - ಹದ್ದುಬಸ್ತಿನಲ್ಲಿರಿಸಿ, ಪುಂಡ ಪೋಕರಿಗಳ ಅಮಿತ ಗಂಡಾಗುಂಡಿಗಳನ್ನೆಲ್ಲ ಸಮೂಲವಾಗಿ ತೊಳೆದು, ಅಸೀಮ ಸ್ವಾರ್ಥದಿಂದ ಕೊಚ್ಚೆಯಾಗಿಸಿದ ಭಾರತವನ್ನು ಈಗ ಸ್ವಚ್ಛ ಭಾರತವಾಗಿಸುವುದು ಸುಲಭಸಾಧ್ಯವೆ ? ಆದರೆ ಪ್ರಯತ್ನಕ್ಕೆ ಒಲಿಯದ ದೈವವಿಲ್ಲ; ಭಾಗ್ಯವಿಲ್ಲ. ಹತಾಶೆಗಿಂತ - ಪ್ರಯತ್ನವೆಂಬ ಆಶಾವಾದವು "ಒಳ್ಳೆಯದು"; ಭರವಸೆಯ ಪ್ರವಾದಿಗಳಾಗದೆ ನಮಗೆ ಬೇರೆ ದಾರಿಯೂ ಇಲ್ಲ.

ವರಮೇಕೋ ಗುಣೀಪುತ್ರೋ ನ ಚ ಮೂರ್ಖ ಶತೈರಪಿ
ಏಕಶ್ಚಂದ್ರಃ ತಮೋಹಂತಿ ನ ಚ ತಾರಾಗಣೈರಪಿ