Wednesday, November 25, 2015

ಭಾರ್ಗವನಿಗೊಲಿದ ಕನ್ನಡದ ಕಡಲು

(2004 ರಲ್ಲಿ (ಮಾರ್ಚ್  6) ಡಾ. ಕೋಟ ಶಿವರಾಮ ಕಾರಂತರ 102 ನೇ ಜನ್ಮದಿನದ ಪೂರ್ವದಲ್ಲಿ  - ಮಂಗಳೂರು ಆಕಾಶವಾಣಿಯಲ್ಲಿ  ಅವರನ್ನು ಕುರಿತು ನಾನು ಪ್ರಸ್ತುತ ಪಡಿಸಿದ್ದ , ಕಡಲ ತಡಿಯ ಕಬ್ಬಿಗರು ಮಾಲಿಕೆಯಲ್ಲಿ ಮೂಡಿಬಂದ "ಭಾರ್ಗವನಿಗೊಲಿದ ಕನ್ನಡದ ಕಡಲು" ಶಬ್ದ ರೂಪಕದ ಸಂಗ್ರಹಿತ  - ಪರಿಷ್ಕೃತ ರೂಪ)

"ಕಾರಂತರು  ಗೊತ್ತುಂಟಾ?" 
"ಗೊತ್ತುಂಟು !" 
"ಹೌದಾ ? ಗೊತ್ತುಂಟಾ ?" 
" ಏನೋ ಸ್ವಲ್ಪ ಸ್ವಲ್ಪ...ಹೋಗಿ ಮಾರಾಯ್ರೆ...ನನಗೆ ಗೊತ್ತಿಲ್ಲ" 
"ಗೊತ್ತಿಲ್ಲವಾ ?"
"ಗೊತ್ತಿಲ್ಲ !"

1902 ನೇ ಇಸವಿಯ ಅಕ್ಟೋಬರ್ 10 ರಂದು ಜನಿಸಿದ ಡಾ. ಕೆ. ಶಿವರಾಮ ಕಾರಂತರು 1997 ರ ಡಿಸೆಂಬರ್ 9 ರಂದು ಭೌತಿಕ ಶರೀರದಿಂದ ಕಳಚಿಕೊಂಡರು. ಇಂದಿಗೆ 18 ವರ್ಷಗಳು ಕಳೆದೇ ಹೋದವು. ಬದುಕಿದ 95 ವಷಗಳ ಕಾಲ ತಮ್ಮ ಇಚ್ಛೆಯಂತೆಯೇ ಬದುಕಿದ ವಿಶಿಷ್ಟ ವ್ಯಕ್ತಿ ವಿಶೇಷ – ಡಾ. ಕಾರಂತರು.



ಬದುಕು ಅಂದರೆ ಹೊಂದಾಣಿಕೆ. ೊಗುತ್ತ ಉರತ್ತಿರಮ್ಮ ುಕಿನಲ್ಲಿ ಕರ್ಮ ಆಯ್ಕೆ ಮಾತ್ರಮ್ಮು. ಪಿಣಾಮ ಆಯ್ಕೆಯ- ಆಯಾ ಕರ್ಮದ್ದು. ಾ. ಕೋಟ ಿವಾಮಾರಂತುಕಈ ಮಾತಿಗೆ ದಷ್ಟಾಂತಾಗಲ್ಲು. ಕಾರಂತರನ್ನು - ಅವುಕನ್ನಹತ್ತಿರದಿಂದ ಬಲ್ಲವರೆಲ್ಲರೂ ಅವರನ್ನು ಚಿತ್ರಿಸಿದ ಬಗೆ ಒಂದು ತೆರನಾದರೆ ನಾನು ಅವರಲ್ಲಿ ಕಂಡದ್ದು ಇನ್ನೊಂದು ಮುಖ. ಕಾರಂತರೆಂದರೆ “ಖಡಕ್, ಮುಖಕ್ಕೆ ಹೊಡೆದಂತೆ ಮಾತನಾಡುವವರು, ನಿಷ್ಠುರ...” ಎಂಬ ಅನ್ನಿಸಿಕೆಯು ಸರ್ವೇ ಸಾಮಾನ್ಯ. ಆದರೆ ನಾನು ಕಂಡಂತೆ “ಕಾರಂತರು ಅತ್ಯಂತ ಪ್ರಾಮಾಣಿಕ, ಸತ್ಯವಾದಿ, ಮುಖ ಸ್ತುತಿ ಒಲ್ಲದವರು, ಪ್ರೀತಿಗೆ ಒಲಿಯುವವರು...”

ುಕಿನ "ಹುಚ್ಚಸ್ಸಿನತ್ತು ಮಖ" ನ್ನು ಸ್ಪರ್ಿಸಿದು - ಕಾರಂತು. ಕಾರಂತರನ್ನು “ವಸ್ತುನಿಷ್ಠ” ಎನ್ನುವವರಿದ್ದಾರೆ. ಆದರೆ ಅವರೊಳಗೆ ಒಬ್ಬ ಸುಂದರ ಕನಸುಗಾರನಿದ್ದ. ಅವರನ್ನು “ಖಾರಂತ – ಬಿರುಸು ಮಾತಿನವರು” ಎನ್ನುವವರಿದ್ದಾರೆ. ಆದರೆ ಅವರೊಳಗೆ ನೇರ ನಡೆನುಡಿಯ “ಮೈಮನಗಳ ಸುಳಿ” ಗೆ ಸಿಲುಕಿದ ಒಬ್ಬ ಪ್ರಾಮಾಣಿಕ ಶ್ರೀಸಾಮಾನ್ಯನಿದ್ದ. ಕಾರಂತರನ್ನು “ಕೋಮುವಾದಿ” ಅನ್ನುವವರೂ ಇರಬಹುದು !! ಆದರೆ ಅವರೊಳಗೆ ನಿಸ್ಸಂದಿಗ್ಧವಾದ ವಿಚಾರ ಪುಷ್ಟಿ ಮತ್ತು ದೇಶಪ್ರೇಮಿಯಿದ್ದ. “ಹಮ್ಮಿನ ಮನುಷ್ಯ” ಎಂಬವರೂ ಇರಬಹುದು. ಆದರೆ ಒಣ ಪೊಗರಿನ ಅರ್ಧ ಕೊಡಗಳನ್ನು ಕಂಡರೆ ಅವರು ಉರಿದು ಬೀಳುತ್ತಿದ್ದರು. ಅನನುಭವದ ಪುಸ್ತಕದ ಬದನೇಕಾಯಿಗಳನ್ನು ಅವರು ತಿರಸ್ಕರಿಸುತ್ತಿದ್ದರು. ಕಾರಂತರ ಮೇರು ವ್ಯಕ್ತಿತ್ವದೊಳಗೆ - ಮಕ್ಕಳೊಂದಿಗೆ ಲೀಲಾಜಾಲವಾದ ಸಂವಹನ ಸಾಧ್ಯವಾದ ಮೃದು ಹೃದಯವಿತ್ತು.

ಕಾರಂತರು “ಕೃಷ್ಣ ಪಕ್ಷ ಶುಕ್ಲ ಪಕ್ಷ” ವನ್ನು ಮಾತ್ರ ಕಂಡು ತೃಪ್ತರಾಗಲಿಲ್ಲ. ರಕ್ತ ಸುರಿದು ಗಳಿಸಿದ ಸ್ವಾತಂತ್ರ್ಯದ ಉಸ್ತುವಾರಿಯಲ್ಲಿ ದೇಶದ ಆಡಳಿತವು ಸ್ವಜನಹಿತ ಪಕ್ಷಪಾತಿಯಾಗುತ್ತಿರುವುದನ್ನು ಗಮನಿಸಿ ಶುದ್ಧೀಕರಣಕ್ಕೆಂದು ಹೊರಟರು. ಅಲ್ಲೂ ಸ್ವತಂತ್ರ ಪಕ್ಷದ ಸ್ವತಂತ್ರ ಮುಖವನ್ನೇ ತೋರಿದರು. ಆದರೆ...ಆದರೆ ಅದಾಗಲೇ ಸ್ವತಂತ್ರ ಭಾರತದ ಪ್ರಜೆಗಳ ಅಭಿರುಚಿಯು ಬದಲಾಗಿತ್ತು. ದೇಶವಾಸಿಗಳಿಗೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ದುರುಪಯೋಗದ ಚಟ ಹತ್ತಿಯಾಗಿತ್ತು. ಪ್ರಾಮಾಣಿಕರನ್ನು ಕಂಡರೆ “ಅವರಿಗೆ ತಲೆ ಸರಿಯಿಲ್ಲ..” ಎನ್ನುವಷ್ಟು ರಾಜಕೀಯವು ಕಲುಷಿತವಾಗಿ ಹೋಗಿತ್ತು. ಅಂತಹ ಗುಂಪಿನಲ್ಲಿ ಕಾರಂತರು ಹೊಂದುವುದಿಲ್ಲ ಎಂದುಕೊಂಡೋ ಏನೋ - “ೀವಸ್ವತಂತ್ರವಾಗಿರಿ” ಎಂದು ಕಾರಂತರಿಗೆ ಜನರು ತೀರ್ಪು ಕೊಟ್ಟರು. ಕಾರಂತರ ಅದೃಷ್ಟ ! ಅನಂತ ಪ್ರಸ್ತುತದ ಪ್ರಜಾಪ್ರಭುತ್ವದ ಗೊಂಡಾರಣ್ಯ ದಿಂದ ಕಾರಂತರು ಪಾರಾಗಿ ಬಿಟ್ಟರು ! 

ಮನುಷ್ಯ ಮತ್ತು ದೇವರು ಎಂಬ ಕಲ್ಪನೆಗಿಂತ ಮನುಷ್ಯ ಮನುಷ್ಯರ ಸಂಬಂಧವೇ ಕಾರಂತರಿಗೆ ಹೆಚ್ಚಸುಖ ಕೊಟ್ಟಿತು. ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸುವುದು ಸಾಧ್ಯವೆಂದು ಅವರು ಕವನ ಹೊಸೆಯುತ್ತ ಕುಳಿತವರಲ್ಲ. ಅದನ್ನು ಪ್ರಾಯೋಗಿಕವಾಗಿ ತೋರಿದವರು ಡಾ. ಕಾರಂತರು. ಸಂಸ್ಕೃತದ ಕಾಳಿದಾಸನಾಗಲೀ ಕನ್ನಡದ ಪಂಪ, ರನ್ನ, ಹರಿಹರ ರಾಘವಾಂಕ, ಕುಮಾರವ್ಯಾಸನಿಗೂ ಕಾರಂತರನ್ನು ಪೀಡಿಸಲು, ಕೂತಲ್ಲೇ ಕೂಡಿಸಲು ಆಗಲಿಲ್ಲ. ಪಂಡಿತ ಹಾದಿಯು ತನ್ನದಲ್ಲ ಎಂಬುದನ್ನು ಬಹು ಬೇಗ ಕಂಡುಕೊಂಡ ಕಾರಂತರನ್ನು ಕೇವಲ ಮಾನವತಾವಾದಿಯಾಗಿಯೇ “ಇಹ” – ಕಟ್ಟಿತು.

ಇಂದಿಗೆ ಸುಮಾರು 115 ವರ್ಷಗಳ ಹಿಂದೆ ಜನಿಸಿದ್ದ ಡಾ. ಕೋಟ ಶಿವರಾಮ ಕಾರಂತರು ತಮ್ಮ ಕೊನೆಯುಸಿರಿನವರೆಗೂ ಸುಮಾರು ಒಂದಾನಲ್ಲಿ ತಮ್ಮ ಸಿದ್ಧಾಂತವನ್ನು ನೆಚ್ಚಿಕೊಂಡೇ ಬದುಕಿ ಹೋದವರು. “ಕಾಲಕ್ಕೆ ತಕ್ಕಂತೆ ಕೋಲ” ಕಟ್ಟುವ ಜಾಯಮಾನವು ಅವರದಾಗಿರಲಿಲ್ಲ. ಆನೆಯನ್ನು ಮುಟ್ಟಿದ ಕುರುಡರು ಆನೆಯೆಂದರೆ “ಗೆರಸಿಯಂತೆ, ಹಾವಿನಂತೆ, ಒನಕೆಯಂತೆ, ಕಂಬದಂತೆ...” ಎಂದೆಲ್ಲ ಸೀಮಿತ ಅನುಭವದಲ್ಲಿ ಬಣ್ಣಿಸಿದಂತೆ ಕಾರಂತರನ್ನು ಕಂಡವರು ಅವರವರ ಪ್ರಜ್ಞೆಗೆ ದಕ್ಕಿದಂತೆ ಬಣ್ಣಿಸಬಹುದು. ಪ್ರತಿಕ್ರಿಯಿಸಬಹುದು. ಆದರೆ ನಿಜವಾಗಿಯೂ ಕಾರಂತರು ಅಂದರೆ ಯಾರು ? ಅವರು ಹೇಗಿದ್ದರು? ಇವರೇ ಕಾರಂತರೆ ? ಕಾರಂತರನ್ನು ಆತ್ಮೀಯವಾಗಿ ಮುಟ್ಟಿ ನೋಡುವ ಪ್ರಯತ್ನವಿದು.
                                                                    **--**
ಮಂಗಳೂರು ಆಕಾಶವಾಣಿಯು ಆರಂಭವಾದ ಹೊಸತರಲ್ಲಿ, ಬಹುಶಃ 1978 – 79 ರಲ್ಲಿ, ಕಾರಂತರು ಅಕಾಶವಾಣಿಗಾಗಿ ಎರಡು ಸಂಗೀತ ರೂಪಕಗಳನ್ನು ನೀಡಿದ್ದರು. “ಲವ ಕುಶ" (ಇನ್ನೊಂದು ರೂಪಕದ ಹೆಸರು ಮರೆತಿದೆ.) ಎಂಬ ಸಂಗೀತ ರೂಪಕವನ್ನು ನಮ್ಮ Studio ದಲ್ಲಿ ಸ್ವತಹ ಕೂತು ನಿರ್ದೇಶಿಸಿದ್ದರು. ಅವರಿಗೆ ಸಹಾಯಕರಾಗಿ ಮಂಗಳೂರಿನ ಶ್ರೀ ಶೀನಿವಾಸ ಉಡುಪ ಎಂಬವರು ಬಂದಿದ್ದರು. ಆ ಕಾರ್ಯಕ್ರಲ್ಲಿ ಒಂದು ಪಾತ್ರವನ್ನು ನಾನೂ ನಿರ್ವಹಿಸಿದ್ದೆ. ಅಂದಅಢಾಣ ರಾಗದ ಒಂದು ಹಾಡನ್ನು ಹೇಳುವಾಗ “ನಿಷಾದ” ಸ್ವರವು ಕೋಮಲವಾಯಿತು...ಎನ್ನುತ್ತ ಶ್ರೀನಿವಾಸ ಉಡುಪರು ಸ್ವಲ್ಪ ಏರು ದನಿಯಲ್ಲಿ ನನ್ನನ್ನು ತಿದ್ದಲು ಹೊರಟಾಗ ಅಲ್ಲೇ ಕೂತಿದ್ದ ಕಾರಂತರು ಅದನ್ನು ತಾವೇ ಹಾಡಿ ನನಗೆ ಹೇಳಿ ಕೊಟ್ಟಿದ್ದರು. ನನಗೆ ಪರಿಚಿತವಲ್ಲದ ಅಢಾಣ ರಾಗವನ್ನು ಆ ರೂಪಕದ ಸಾಂದರ್ಭಿಕ ಭಾವಕ್ಕೆ ಒತ್ತುಕೊಟ್ಟು ನಾನಹಾಡಿದ್ದ ಆ ಭಾಗವನ್ನು ಹಾಗೇ ಉಳಿಸಿಕೊಳ್ಳುವಂತೆ ಅಂದು ಕಾರಂತರು ನಿರ್ದೇಶಿಸಿದ್ದರು. ಶಾಸ್ತ್ರೀಯ ಸಂಗೀತದವರು ರಾಗದ ಸ್ವಚ್ಛತೆಯ ಕಡೆಗೆ ಮಾತ್ರ ಯೋಚಿಸುತ್ತಿದ್ದರೆ ಕಾರಂತರು ಭಾವವನ್ನೂ ಅಷ್ಟೇ ಗಮನಿಸುತ್ತಿದ್ದರು. ಅದು ಕಾರಂತರ ವೈಶಿಷ್ಟ್ಯವಾಗಿತ್ತು.

ಮಂಗಳೂರು ಆಕಾಶವಾಣಿಗಾಗಿ ನಾನು ನಿರ್ಮಿಸಿದ "ಭಾರ್ಗವನಿಗೊಲಿದ ಕನ್ನಡದ ಕಡಲು" ಎಂಬ ರೂಪಕಕ್ಕಾಗಿ ಯಕ್ಷರಂಗದ ಮೇರು ಶ್ರೀ ಕೆರೆಮನೆ ಮಹಾಬಲ ಹೆಗಡೆ ಅವರನ್ನು ನಾವು ಮಾತನಾಡಿಸಿದಾಗ ಅವರು ಕಾರಂತರ ಒಡನಾಟದ ನೆನಪನ್ನು ಬಿಚ್ಚಿ ಇಟ್ಟಿದ್ದರು.

ಶ್ರೀ ಕೆರೆಮನೆ ಮಹಾಬಲ ಹೆಗಡೆ ಅವರ ಮಾತಿನ ತುಣುಕುಗಳು...


"ನಾನು ಕಾರಂತರೊಂದಿಗೆ ಸಂಪರ್ಕ ಸಾಧಿಸಿದ್ದು 1962 ನೇ ಇಸವಿಯಲ್ಲಿ. ಯಕ್ಷಗಾನ ಮತ್ತು ದಾಸ ಸಾಹಿತ್ಯದಲ್ಲಿ ಮಾತ್ರವಿದ್ದ ದ್ವಿಜಾವಂತಿ ಎಂಬ ಅಪೂರ್ವ ರಾಗ, ಆನಂದ ಭೈರವಿ, ಮಧುಮಾಧುರಿ...ಮೊದಲಾದ ಎಂಟು ರಾಗಗಳನ್ನು ನನ್ನಲ್ಲಿ ಕೇಳಿ ದ್ವನಿಮುದ್ರಿಸಿಕೊಂಡು ಹೋಗಿದ್ದರು..."

(ನನ್ನುರುಗಾಗಿದ್ದುಂದಾಪುರ ಶ್ರೀ ವಾಸುದೇವಾಯಕ್ ಅವನ್ನಆಗಾಗ ೇಟಿಯತ್ತಿದ್ದ ಂತು ಸಂಗೀತಕ್ಕೆ ಸಂಬಿಸಿದನ್ನು ಪಿಹಿಸಿಕೊಳ್ಳುತ್ತಿದ್ದುದನ್ನೂ ನಾನು ಕಂಡಿದ್ದೇನೆ. ಏಕವ್ಯೆಯಾದಿ !) 
 

ೆರೆಮೆಯು ಸ್ಮಿಸಿಕೊಂಡ ಇನ್ನೊಂದು ವಿ : "ಭೀಷ್ಮ ವಿಜಯ, ಸೈಂಧವ ವಧೆ ಎಂಬ ಮಾತಿಲ್ಲದ ಯಕ್ಷಗಾನ ಪ್ರಸಂಗಗಳನ್ನು ಪ್ರಯೋಗಾತ್ಮಕವಾಗಿ ನಡೆಸುವ ಸಂದರ್ಭದಲ್ಲಿ ನನ್ನನ್ನು ಕರೆದಿದ್ದರು. ಆಗ ನಾನು ಹೋಗಿ, ಪರಶುರಾಮ, ಅರ್ಜುನನನ ಪಾತ್ರವನ್ನು ವಹಿಸಿ ಕಾರಂತರ ಪ್ರಯೋಗಕ್ಕೆ ಒಳಗಾಗಿದ್ದೆ. ಆದಅವರಿಗೆ ಪ್ರಯೋಗ ಪರಿಣತಿ ಏನೂ ಇರಲಿಲ್ಲ.....ಆದ ಅವರ ನಿರ್ದೇಶನದ ಋಣವನ್ನು ತೆಗೆದು ಹಾಕಲಿಕ್ಕೆ ಇಷ್ಟವಿಲ್ಲ. ಯಾಕೆಂದರೆ ಯಕ್ಷಗಾನವನ್ನು ಸಮರ್ಪಕವಾಗಿ ಅವರು ಕಲ್ಪಿಸಬಲ್ಲವರಾಗಿದ್ದರು. ಕಾರಂತರ ಮೂಲಕವಾಗಿ ನಾನು ಯಕ್ಷಗಾನಕ್ಕೆ ಹೆಚ್ಚು ಅಂಟಿಕೊಂಡೆ. ಅದು ನನಗೆ ಹೊಸ ಲೋಕವನ್ನೇ ತೆರೆದು ಕಾಣಿಸಿತು...ನಾನು ಪ್ರೇರಿತನಾದೆ...ನನ್ನ ಮನಃಸ್ಥಿತಿಯ ಬದಲಾವಣೆಗೆ ಕಾರಂತರೇ ಕಾರಣ ಅಂತ ಹೇಳಬೇಕಾಗ್ತದೆ...ಅವರ ಸ್ವಾತಂತ್ರ್ಯವನ್ನು ನಾನು ಪ್ರಶ್ನಿಸುವುದಿಲ್ಲ.
ಅವರ ಸಂಪರ್ಕದಲ್ಲಿದ್ದಾಗ ನನಗೆ ಅನ್ನಿಸಿದ್ದು - ಬಹುಶಃ ಅನೇಕ ಅನರ್ಹ ವ್ಯಕ್ತಿಗಳ ಸಂಪರ್ಕದಿಂದಾಗಿ ಯಾರ ಅಭಿಪ್ರಾಯವನ್ನೂ ಸುಲಭವಾಗಿ ಸ್ವೀಕರಿಸುವ ಮನಃಸ್ಥಿತಿಯನ್ನು ಅವರು ಕಳೆದುಕೊಂಡಿದ್ದರು. ಆ ಕಾರಣದಿಂದಲೂ ನಾನು ಅವರನ್ನು ಗೌರವಿಸುತ್ತೇನೆ." 

 ಅನುಭವ ಶೂನ್ಯ ಲೊಟ್ಟೆಗಳನ್ನು ಕಾರಂತರು ತಿರಸ್ಕರಿಸುತ್ತಿದ್ದರು....


ಕೋಟದಲ್ಲಿ (ಸಾಲಿಗ್ರಾಮ) ನಡೆದ ಕಾರಂತರ 92 ಅಥವ 93 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಹಾಡಿ, ಕಾರಂತರು ರಂಗದಲ್ಲಿ ಕುಣಿದದ್ದನ್ನು ಸ್ಮರಿಸಿಕೊಂಡ ಮಹಾಬಲ ಹೆಗಡೆಯವರು, ಅಂದು "ನೋಡಿೆಗೆಯೇ, ಈಗೀಗಾಕಿಂಗ್ ಹೋಗುವಾಗಶ್ವಾಸ ರ್ತೆ. ಆದೆ ನೋಡಿ...ಮೊನ್ನೆ ಯಕ್ಾನಾಕೇಂದ್ರಕ್ಕೆ ಹೋದೆ. ಒಂದು ತಾಸು ಕುಣಿದೆ. ಏನಆಗಿಲ್ಲ. ಅದೇನಿರುದು ?"  ಎಂದ  ಕಾರಂತರು ಆಡಿದ ಮಾತುಗಳನ್ನೂ ಸ್ಮರಿಸಿಕೊಂಡಿದ್ದರು. ಉತ್ತರ ಕನ್ನಡದ ಸಂಗೀತ ವಿದ್ವಾಂಸ ಯಕ್ಷಗಾನ ದಿಗ್ಗಜ ಶ್ರೀ ಕೆರೆಮನೆ ಮಹಾಬಲ ಹೆಗಡೆಯವರು ಸುಮಾರು 38 ವರ್ಷಗಳ ಕಾಲ ಕಾರಂತರ ಸಿಡುಕು, ಹಾಸ್ಯ, ಗಾಂಭೀರ್ಯ, ತನ್ಮಯತೆ, ಆಸಕ್ತಿಗಳನ್ನು ಹತ್ತಿರದಿಂದ ಕಂಡು ಅನುಭವಿಸಿದವರು. "ಕಾರಂತರ ಜ್ಞಾನ ಸಂಪತ್ತಿನ ಹೆಚ್ಚಿನಂಶವು ಏಕಲವ್ಯ ಸಾಧನೆ.." ಎಂದ ಕೆರೆಮನೆ ಅವರು - ಕಾರಂತರ ಮಾತುಗಳನ್ನು ಸ್ಮರಿಸಿಕೊಳ್ಳುತ್ತ - ತಮ್ಮ ಆಸಕ್ತಿಯನ್ನು ಕೊನೆಯವರೆಗೂ ಾರಂತ ಉಳಿಸಿಕೊಂಡದ್ದನ್ನು ನೆನಸಿಕೊಳ್ಳುತ್ತ ಮಹಾಬಲ ಹೆಗಡೆಯವರು ಆರ್ದ್ರರಾಗಿ ಅಂದಗದ್ಗದಿತರಾಗಿದ್ದರು. "ಕಾರಂತರು ಈಗ ಭೌತಿಕವಾಗಿ ಅಳಿದ ಮೇಲೆ -   ಕಾರಂತರ ವ್ಯಕ್ತಿತ್ವವನ್ನು ತಿಳಿಯಬೇಕೆ ? ಹಾಗಿದ್ದರೆ ಅವರ ಕಾದಂಬರಿಗಳನ್ನು ಓದಿ..." ಎಂದು ಹೇಳಿದ್ದ ಕೆರೆಮನೆ ಮಹಾಬಲ ಹೆಗಡೆಯವರು ಅಂದು ಗೌರವಪೂರ್ವಕವಾಗಿ ತಲೆತಗ್ಗಿಸಿ ಶ್ರದ್ಮೌನವಾಗಿದ್ದರು.

ಇವು ಡಾ. ಕೋಟ ಿವಾಮಾರಂತು....
         
ಕಾರಂತರದು ಶಾಸ್ತ್ರ ಕೇಳಿ ಗಾಳ ಇಕ್ಕುವ ಪಾಂಡಿತ್ಯವಲ್ಲ. ಅದೊಂದು ಪ್ರಯೋಗಶೀಲ ಮನಸ್ಸು. 1924 ರಲ್ಲೇ ತಮ್ಮ ಗೆಳೆಯರು, ಸಾಹಿತ್ಯಾಸಕ್ತರು ಮಾತ್ರವಲ್ಲದೆ ತಮ್ಮ ಗುರುಗಳಾದ ಐರೋಡಿ ಶಿವರಾಮಯ್ಯನವರನ್ನೂ ಸೇರಿಸಿಕೊಂಡು ಕುಂದಾಪುರಿಂದ ಒಂದು ಮಾಸ ಪತ್ರಿಕೆಯನ್ನು ಹೊರಡಿಸಿದ ಸಾಹಸಿ - ಕಾರಂತರು. ಆ ಮಾಸ ಪತ್ರಿಕೆಯೇ "ವಸಂತ". ಆಗ ಕಾರಂತರದ್ದು - ಇಂದಿನ ಹೆಚ್ಚಿನ ವಿದ್ಯಾರ್ಥಿಗಳು ಉರುಹೊಡೆದು ಗಿಣಿಪಾಠ ಒಪ್ಪಿಸುವ ವಯಸ್ಸು. ಆದೆ ಕಾರಂತು ವಿಿನ್ನ ೈಲಿಯಿದ್ಯಾರ್ಿಯಾಗಿದ್ದು. ಈ ಸೃಷ್ಟಿಯ ಸರ್ವವನ್ನೂ ಬಗೆದು ನೋಡುವ ಕುತೂಹಲದ ಬುಗ್ಗೆಯಾಗಿದ್ದ ಕಾರಂತರು "ನೋಡಿ ತಿಳಿಯುತ್ತ ಮಾಡಿ ಕಲಿಯುತ್ತ" ನಡೆದು ಬಂದವರು. "ಗುರುಗಾದ ಶಿವರಾಮಯ್ಯನವರ ಮುಂದೆ ನಾನು ಚಿಕ್ಕ ಹುಡುಗ; ಅವರ ಕಣ್ಮುಂದೆಯೇ ಬೆಳೆದವ. ಅವರು ಆ ಭಾವನೆಯನ್ನೂ ಇರಿಸಿಕೊಳ್ಳದೆ ನನಗೂ ಆಗಾಗ ಲೇಖನಗಳನ್ನು ಕೊಟ್ಟಿದ್ದಾರೆ." ಎಂದು ಕಾರಂತರೇ ತಮ್ಮುರುಗನ್ನು ಕೊಂಡಾಡಿ ಬರೆದುಕೊಂಡಿದ್ದಾರೆ.

ಅಂದು ಕಾರಂತರಿಗೆ ಸ್ವಪ್ನದ ಹೊಳೆ ಯ ವಯಸ್ಸು. ಬೆಟ್ಟದ ಜೀವ ಗೋಪಾಲಯ್ಯನನ್ನು ಇಂಚಿಂಚಾಗಿ ಆಸ್ವಾದಿಸಿದ ಜೀವವದು. ಬೆಟ್ಟದ ಜೀವಕ್ಕಾಗಿ ಮಾತ್ರವಲ್ಲ - ಅವರು ಜ್ಞಾನಪೀಠಸ್ಥ ಮೂಕಜ್ಜಿಯ ಕನಸು ಗಳಿಗೂ ಪ್ರತಿಸ್ಪಂದಿಸಿದವರು. ಅವರ ಮೂಕಜ್ಜಿಗೆ ಪ್ರಶಸ್ತಿ ದೊರೆತಾಗ "ಅಯ್ಯೋ, ಮರಳಿ ಮಣ್ಣಿಗೆ ಕಾದಂಬರಿಗೆ ಸಿಗಬೇಕಿತ್ತು.." ಎಂದು ನನಗೆ ಅನ್ನಿಸಿತ್ತು. "ಇರಲಿ; ಅಜ್ಜಿಗೆ ಪ್ರಥಮ ಪ್ರಾಶಸ್ತ್ಯ..."ಎಂದುಕೊಂಡು ನಾನೇ ಸಮಾಧಾನ ಮಾಡಿಕೊಂಡಿದ್ದೆ. 

ಕಾರಂತರು ದೃಷ್ಟಿ ಹಾಯಿಸಿದ ಪ್ರಪಂಚವು ಭೂಮ್ಯಾಕಾಶಗಳ ವ್ಯಾಪ್ತಿಯನ್ನು ಹೊಂದಿತ್ತು. "ಈ ಜಗತ್ತು" ಕಾರಂತರನ್ನು ಬಾಲ ಪ್ರಪಂಚದಿಂದ ವಿಜ್ಞಾನ ಪ್ರಪಂಚದವರೆಗೂ ನಡೆದಾಡಿಸಿತು.

ಕಾರಂತರು ಬರೆದದ್ದು ಮಾತ್ರವಲ್ಲ. ಪುತ್ತೂರಿನಲ್ಲಿ ಒಂದು ಪ್ರಕಟಣಾಲಯವನ್ನೂ ನಡೆಸಿದರು. ಅದೇ - "ಹರ್ಷ ಪ್ರಕಟಣಾಲಯ". ನಿಷ್ಪಾಪೀ ಬರಹಗಾರರನ್ನು ಸತಾಯಿಸುವ, ಬರಹಗಾರರ ಶ್ರಮವನ್ನು ವಟಾಯಿಸಿಕೊಂಡು ಬರಹಗಾರರ ಮೇಲೇ ಸವಾರಿ ಮಾಡುತ್ತ ತಮ್ಮ ಸ್ವಂತ ಜೀವನ ವ್ಯಾಪಾರ ನಡೆಸುತ್ತಿದ್ದ ಪ್ರಕಾಶಕರನ್ನು ಬಹುಶಃ ಕಾರಂತರೂ ಹಾದು ಹೋಗಿದ್ದಿರಬಹುದು. ಶೋಷಣೆಗೆ ಒಳಗಾಗಲು ಒಪ್ಪದ ಅವರ ಸ್ವಭಾವವು ಸ್ವ ಪ್ರಕಟಣೆಗೆ ತೊಡಗುವಂತೆ ಪ್ರೇರೇಪಿಸಿದ್ದರೆ ಆಶ್ಚರ್ಯವೇನಿಲ್ಲ. "ತನ್ನ ಬರಹಕ್ಕೆ ತಾನೇ ಗತಿ ಕಾಣಿಸುತ್ತೇನೆ.." ಎಂಬ ಮರ್ಜಿಯಲ್ಲೇ ಬರೆದು ಬಿಸಾಕಿದವರು - ಕಾರಂತರು ! ಬರೆದರು; ಪ್ರಕಟಿಸಿದರು - ಅಷ್ಟೆ.

ಕಾರಂತರು ಎಂತಹ ಪ್ರತಿಕ್ರಿಯೆಗಳಿಗೂ ತಲೆ ಕೆಡಿಸಿಕೊಂಡವರಲ್ಲ. "ಆನೆ ನಡೆದದ್ದೇ ಹಾದಿ" ಎಂಬಂತೆ ತಮಗೆ ಸರಿ ಕಂಡುದನ್ನು ಮಾಡುತ್ತ ತಲೆ ಎತ್ತಿ ನಡೆದವರು ನಮ್ಮ ಕಾರಂತರು ! ಹತ್ತು ಹಲವು ಪ್ರಶಸ್ತಿಗಳನ್ನು ಪಡೆದು 1978 ರಲ್ಲಿ ಜ್ಞಾನ ಪೀಠಕ್ಕೆ ತಲೆ ಕೊಟ್ಟರೂ ಅಂತ ಯಾವುದೂ ಕಾರಂತರನ್ನು ಡಿಂಗಾಗಿಸಲಿಲ್ಲ. ಯಾವುದೇ ಪ್ರಶಸ್ತಿಯಿಂದ ಕಾರಂತರನ್ನು ಮಿದುವಾಗಿಸಲು ಆಗಲಿಲ್ಲ. "ನೋಡಿ ಸ್ವಾಮೀ, ನಾವಿರುವುದು ಹೀಗೇ..." ಎಂಬುದಕ್ಕೆ ಕಾರಂತರು ಜ್ವಲಂತ ದೃಷ್ಟಾಂತ !

ಕಾರಂತರು ಕುಂದಾಪುರಕ್ಕೆ ಬಂದಾಗಲೆಲ್ಲ ನಮ್ಮ ಮನೆಗೆ ಕಿರು ಭೇಟಿಯನ್ನಾದರೂ ಕೊಡುತ್ತಿದ್ದರು. ತಮ್ಮ ಗುರುಗಳಾದ ದಿ. ಐರೋಡಿ ಶಿವರಾಮಯ್ಯ ಅವರ ಪುತ್ರನಾದ ನನ್ನ ತಂದೆಯವರನ್ನು (ಪುರಾಣ ಭಾರತ ಕೋಶದ ಕರ್ತೃ ದಿ. ಯಜ್ಞನಾರಾಯಣ ಉಡುಪ) ನೋಡಿ ಮಾತನಾಡಿಸಿಕೊಂಡು ಹೋಗುತ್ತಿದ್ದರು. ಬಹುಶಃ "ಗುರುಪುತ್ರ" ಎಂಬ ಅಭಿಮಾನವಿದ್ದಿರಬಹುದು. ಅನಾರೋಗ್ಯಕ್ಕೆ ಒಳಾದಂತ, ಅಪ್ಪಯ್ಯನಿಗೇ ಏನಾದರೂ ಮಾತನಾಡುವುದಿದ್ದರೆ ಅದಕ್ಕೂ ಒಂದು ಮಾರ್ಗವಿತ್ತು. ಕುಂದಾಪುರದ ಹಳೆಯ ಬಸ್ ನಿಲ್ದಾಣದಲ್ಲಿ "ಕಾರಂತ" ಎಂಬ ಒಬ್ಬರು ಬಸ್ಸಿಗೆ ಟಿಕೆಟ್ ಕೊಡುವ ಉದ್ಯೋಗದಲ್ಲಿದ್ದರು. ಶಿವರಾಮ ಕಾರಂತರು ಕುಂದಾಪುರಕ್ಕೆ ಬಂದಾಗ ಬಸ್ ನಿಲ್ದಾಣದ ಎದುರಿಗಿದ್ದ ಆ ಕಾರಂತರ ಕಚೇರಿಯಲ್ಲಿ ಸ್ವಲ್ಪ ಹೊತ್ತು ಕಳೆಯುತ್ತಿದ್ದರು. ಆ ಕಚೇರಿಗೆ ಹೋಗಿ "ಶಿವರಾಮ ಕಾರಂತರು ಬಂದರೆ ಅಪ್ಪಯ್ಯನನ್ನು ನೋಡಿ ಹೋಗಲು ಹೇಳುತ್ತೀರಾ ?" ಅಂತ ನಾನೇ ಹೋಗಿ ಹೇಳಿಬಂದದ್ದಿದೆ. ಪ್ರತಿಯಾಗಿ - ಶಿವರಾಮ ಕಾರಂತರು ಮತ್ತೊಮ್ಮೆ ಬಂದಾಗ ಅಪ್ಪಯ್ಯನನ್ನು ಮಾತನಾಡಿಸಿ ಹೋದದ್ದೂ ಇದೆ. ಯಾವುದೇ ಜಂಬಿಲ್ಲಾರಂತು. ಮಾತ್ರಲ್ಲ - ಪಿಣುಟಿಗೆಲ್ಲಂಬಾಪು ಮಾಡುವುದನ್ನು ಕಂಡಿಡುತ್ತಿದ್ದು. ಕಾರಂತರಲ್ಲಿ ನಮ್ಮ ಕುಟುಂಬವು ಸರಳ ಸಜ್ಜನ ನೇರ ನಡೆನುಡಿಯ ವ್ಯಕ್ತಿಯನ್ನು ಕಂಡಿ.



ಅಂಿನಾಜಲ್ಲಿ, "ನಡೆದಾಡುವ ವಿಶ್ವಕೋಶ" ಎಂಬ ಮನ್ನಣೆಗೆ ಪಾತ್ರರಾಗಿದ್ದರು ನ್ನ ಅಜ್ಜಿ. ಐರೋಡಿ ಿವಾಮಯ್ಯು. "ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ; ಹೊಲಿ ನಿನ್ನ ತುಟಿಗಳನ್ನು.." ಎಂಬಂತೆ ಅಕ್ಷರಶಃ ತೆ ತಗ್ಗಿಸಿ ಬದುಕಿದ್ದ ಪಂಡಿತರವರು. ಪುಕ್ಕೆಯಾಗಿ ಜ್ಾನನ್ನು ಹಂಚುತ್ತುಕಿದಿಸ ವ್ಯಕ್ತಿ - ನಮ್ಮ ಅಜ್ಜ . ಿವಾಮಯ್ಯು. ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಐರೋಡಿ ಶಿವರಾಮಯ್ಯನವರು ಆಗ ಶಿವರಾಮ ಕಾರಂತರ ಗುರುಗಳಾಗಿದ್ದರು. ಮುಂದಕಾರಂತರು "ಸಿರಿಗನ್ನಡ ಅರ್ಥ ಕೋಶ" ವನ್ನು ಸಿದ್ಧಪಡಿಸಲು ಹೊರಟಾಗ ತಮ್ಮ ಗುರುಗಳಾದ ಐರೋಡಿ ಶಿವರಾಮಯ್ಯನವರನ್ನು (ಆಗ ಅವು ನಿವೃತ್ತಾಗಿದ್ದ) ತಮ್ಮ ಪುತ್ತೂರಿನ ಮನೆಗೇ ಕರೆಸಿಕೊಂಡು ಒಂದು ತಿಂಗಳ ಕಾಲ ಅಲ್ಲೇ ಉಳಿಸಿಕೊಂಡು ಮಾರ್ಗದರ್ಶನವನ್ನ ಪಡೆದಿದ್ದರು. ತನ್ನ "ಸಿರಿಗನ್ನಡ ಅರ್ಥ ಕೋಶ" ದ ಮುನ್ನುಡಿಯಲ್ಲಿ ಐರೋಡಿ ಶಿವರಾಮಯ್ಯ ಅವರನ್ನು "ತನ್ನಲ್ಲಿ ಕನ್ನಡದ ಒಲವನ್ನು ಹುಟ್ಟಿಸಿದ ಗುರು" ಎಂದು ಕಾರಂತರೇ ಸ್ಮರಿಸಿಕೊಂಡಿದ್ದಾರೆ. ತಮ್ಮ ನಿವೃತ್ತ ವಯಸ್ಸಿನಲ್ಲಿ ನನ್ನ ಅಜ್ಜ ಐರೋಡಿ ಶಿವರಾಮಯ್ಯನವರು ಏಕಾಂಗಿಯಾಗಿ "ಕನ್ನಡ - ಕನ್ನಡ ಶಬ್ದ ಕೋಶ" ವನ್ನು ರಚಿಸಿದ್ದರು. ಅದರ ಕೈ ಬರೆಹದ ಪ್ರತಿಯನ್ನು ಪ್ರೆಗಾಗಿ "ಲಕ್ಷ್ಮಣ ರಾವ್ ಎಂಡ್ ಸನ್ಸ್" ಸಂಸ್ಥೆಗೆ ಒಪ್ಪಿಸಿದ್ದರು. ಆದಅದು ಪ್ರಕಟವಾಗಲೂ ಇಲ್ಲ; ಹಸ್ತಪ್ರತಿಯೂ ಹಿಂದಿರುಗಿ ಬರಲಿಲ್ಲ. ಅಜ್ಜಯ್ಯನ ಶ್ರಮವನ್ನು ಯಾರು ಅಪಹರಿಸಿದರೋ ಹೇಗೆ ನಷ್ಟಾಯಿತೋ - ಗೊತ್ತಿಲ್ಲ ! ಈ ವಿಚಾರವು ಕಾರಂತರಿಗೂ ಗೊತ್ತಿತ್ತು. ಆದ್ದರಿಂದ ಅವರು ಸ್ವತಹ ಅರ್ಥ ಕೋಶವನ್ನು ಸಂಪಾದಿಸಲು ಹೊರಟಾಗ ತಮ್ಮ ಗುರುಗಳಾದ ಶಿವರಾಮಯ್ಯನವರ ನೆರವನ್ನು ಪಡೆಯಲು ನಿಶ್ಚಯಿಸಿದ್ದರು.

ಕಾರಂತರದೇ ಮಾತಿನಂತೆ... ("ಐರೋಡಿ ಶಿವರಾಮಯ್ಯ ಬದುಕು ಬರೆಹ" ಪುಸ್ತಕದಿಂದ ಆಯ್ದ ಕಾರಂತರ ಮಾತುಗಳು.)


" ಕಾಲಕ್ಕೆ ಪುತ್ತೂರಿನ ನನ್ನ ಮನೆಗೆ ಶಿವರಾಮಯ್ಯನವರನ್ನು ಕರೆಸಿಕೊಂಡೆ. ಒಂದೆರಡು ತಿಂಗಳ ಕಾಲ ಅವರು ನನ್ನ ಜೊತೆಗಿದ್ದರು. ಸಾಂಪ್ರದಾಯಿಕರಾಗಿದ್ದ ಅವರು ಅಸಾಂಪ್ರದಾಯಿಕ ರೀತಿಯಿಂದ ಮದುವೆಯಾದ ನನ್ನ ಮನೆಯಲ್ಲಿ ಉಣ್ಣಲಾರರು. ತಾವೇ ಕೈಯಡಿಗೆ ಮಾಡಿಕೊಂಡು, ನನ್ನ ಶಬ್ದ ಕೋಶಕ್ಕೆ ಹೊಂದುವ ರೀತಿಯಲ್ಲಿ ಬೇಕಷ್ಟು ಶಬ್ದಗಳನ್ನು, ಪೌರಾಣಿಕ ವ್ಯಕ್ತಿಗಳ ಪೂರ್ವ ಚರಿತ್ರೆಯನ್ನು ಬರೆದು ಕೊಟ್ಟರು. ಅವರು ಕನ್ನಡ ಉಪಾಧ್ಯಾಯರಾಗಿ ನಮಗೆ ಪಾಠ ಹೇಳುತ್ತಿದ್ದ ಕಾಲದಲ್ಲಿ, ಕನ್ನಡ ಕಾವ್ಯಗಳಲ್ಲಿ ಯಾವ ಪೌರಾಣಿಕ ವ್ಯಕ್ತಿಯ ಹೆಸರೇ ಬರಲಿ, ಇಲ್ಲವೆ ಉಪಮೆ ಬರಲಿ - ಅವುಗಳ ಪೂರ್ವ ಕಥೆಗಳನ್ನು ಹೇಳಿ ನಮ್ಮ ಕಿವಿ ನಿಮಿರಿಸುತ್ತಿದ್ದರು. ಈ ಅಂಶವು ನನ್ನ ಶಬ್ದ ಕೋಶಕ್ಕೆ ಹೊಸ ವಿಷಯಗಳನ್ನು ಒದಗಿಸಿತು. ಶಿವರಾಮಯ್ಯನವರು ಬರೆದ ಪೂರ್ವ ಕಥೆಗಳ ಸಂಗ್ರಹ ಸಾಲದೆಂದು, ನಾನು ಮೋನಿಯರ್ ವಿಲಿಯಮ್ಸ್ ನಿಘಂಟನ್ನು ನೋಡಿಕೊಂಡು ಅವರು ಬರೆಯದಿದ್ದ ಅನೇಕ ಪೌರಾಣಿಕ ವ್ಯಕ್ತಿಗಳ ಕತೆಯನ್ನು ಸಂಗ್ರಹಿಸಿದೆ. ಒಂದು ರೀತಿಯಿಂದ ಶಿವರಾಮಯ್ಯನವರ ಪುರಾಣನಾಮ ಪರಿಚಯವು ಅಪೂರ್ಣವೆನಿಸಿತ್ತು. ಆದರೆ ಅವರ ಈ ಪ್ರಯತ್ನವು ಅವರ ಮಗ ಯಜ್ಞನಾರಾಯಣ ಉಡುಪ ಎಂಬವರನ್ನು ಪ್ರೇರಿಸಿ, ಅವರು ಅದನ್ನೇ ಪ್ರಮುಖ ವಿಷಯವನ್ನಾಗಿರಿಸಿಕೊಂಡು, ದುಡಿಯುವಂತೆ ಮಾಡಿತು. ಆ ಗ್ರಂಥವೇ "ಪುರಾಣ ಭಾರತ ಕೋಶ". ಅದು ಅವರ ತಂದೆಯ ಪ್ರೇರಣೆ ಮತ್ತು ಮಾರ್ಗದರ್ಶನಗಳ ಫಲ ಎಂಬುದಾಗಿ ತಿಳಿಯುತ್ತದೆ."







ಮುಂದೆ - ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದವರು 1977 ರಲ್ಲಿ ಪ್ರಕಟಿಸಿದ "ಐರೋಡಿ ಶಿವರಾಮಯ್ಯ ಬದುಕು ಮತ್ತು ಬರೆಹ" ಎಂಬ - 260 ಪುಟಗಳ ಪುಸ್ತಕದ ಸಂಪಾದಕರಾಗಿ ತಾವೇ ನಿಂತು ಅದ ಪ್ರಕಟವಾಗುವಂತೆ ನೋಡಿಕೊಂಡು, ಕಾರಂತರು ಗುರು ಕಾಣಿಕೆಯನ್ನೂ ನೀಡಿದರು. ಮಾತ್ರವಲ್ಲ, "ಈ ಕಾರ್ಯವು ನನ್ನಿಂದಲೇ ಆದುದಲ್ಲ..." ಎಂದು ತಾವೇ ಹೇಳಿ ಸೌಜನ್ಯವನ್ನೂ ತೋರಿದ್ದ ಕಾರಂತರವರು ! ಹಾಗಿತ್ತು ಕಾರಂತರ ಅಭಿಮಾನ; ಪಾಂಡಿತ್ಯಕ್ಕೆ ಅವರು ಕೊಡುತ್ತಿದ್ದ ವಿಶೇಷ ಸನ್ಮಾನ; ಕಾರಂತ ಶೈಲಿಯ ಕಾರ್ಯ ಿ !

ಕಾರಂತರು ಊಟ ತಿಂಡಿಯ ವಿಷಯದಲ್ಲಿ ಸರಳಾತಿಸರಳರಾಗಿದ್ದರು. ಸಮಯಕ್ಕೆ ಸರಿಯಾಗಿ ಹಿತಮಿತವಾದ ಆಹಾರ ಸೇವನೆಯು ಅವರ ಪದ್ಧತಿಯಾಗಿತ್ತು. ಒಂದು ಬೇಸಗೆಯಲ್ಲಿ ನಮ್ಮ ಮನೆಗೆ ಬಂದಾಗಲೂ "ನೋಡಿ, ನಾನು ಹಾಗೆಲ್ಲ ಆಹಾರ ತೆಗೆದುಕೊಳ್ಳುವುದಿಲ್ಲ. ಆದರೆ ನಿಮಗೂ ಬೇಸರ ಆಗಬಾರದು. ಹೊರಗೆ ಅಂಗಳದಲ್ಲಿ ಒಣಗಿಸಿದ ಕುಂಬಳಕಾಯಿಯ ಒಂದು ಸೆಂಡಿಗೆಒಂದೇ ಒಂದು ಔನ್ಸ್ ಮಜ್ಜಿಗೆ ಕೊಡಿ...ಬೇರೆ ಏನೂ ಬೇಡ.." ಎನ್ನುತ್ತಿದ್ದ ಕಾರಂತರು ಬದುಕುವುದಕ್ಕಾಗಿ ಮಾತ್ರ ತಿನ್ನುತ್ತಿದ್ದರು. ಅವರ ಕುಟುಂಬದಲ್ಲಿ ಎಲ್ಲರೂ ದೀರ್ಘಾಯುಷಿಗಳೇ ಆದರೂ ಶಿವರಾಮ ಕಾರಂತರ ಕುಗ್ಗದ ಚಟುವಟಿಕೆಗೆ ಅವರ ನಿತ್ಯದ ಆಹಾರ ಕ್ರಮವೂ ಕಾರಣವಾಗಿರಬಹುದು.

ಕರ್ನಾಟಕದ ಕರಾವಳಿಗೆ ಯಾರೆಂದು ಬಲ್ಲಿರಿ ? ಅವರು ಡಾ. ಶಿವರಾಮ ಕಾರಂತರು. ಸಾಗರಕ್ಕೆ ಸಾಗರವೇ ಹೋಲಿಕೆಯೆಂಬಂತೆ ಕಾರಂತರಿಗೆ ಕಾರಂತರೇ ಉಪಮೆ. ಅವರು ಜನ ಮೆಚ್ಚುಗೆಗಾಗಿ ಕೆಣಕಿದವರೂ ಅಲ್ಲ; ತಿಣುಕಿದವರೂ ಅಲ್ಲ. ತನ್ನನ್ನು ಎತ್ತಿ ಹೊತ್ತು ಮೆರೆಸಲಿ ಎಂದು ಅಪೇಕ್ಷಿಸಿದವರೂ ಅಲ್ಲ. ಸುಮಾರು 80 ರ ದಶಕದಲ್ಲಿ ಪಂಜೆ ಮಗೇಶ ರಾಯರನ್ನು ಕುರಿತು ಒಂದು ಶಬ್ದ ರೂಪಕವನ್ನು ನಾನು ಆಕಾಣಿಗಾಗಿ ನಿರ್ಮಿಸಿದಾಗ ಕಾರಂತರನ್ನು ಅವಾಲಿಗ್ರಾಮೆಯಲ್ಲಿಯಸಂದರ್ಶಿಸಿ ಅವರ ಮಾತುಗಳನ್ನೂ ಧ್ವನಿಮುದ್ರಿಸಿಕೊಂಡಿದ್ದೆ. ಅಂದು ಪಂಜೆ ಅವರನ್ನು ಅತ್ಯಂತ ಆತ್ಮೀಯವಾಗಿ ಕಾರಂತರು ಸ್ಮರಿಸಿಕೊಂಡಿದ್ದರು. ನಾವು ಅಲ್ಲಿಂದ ಹೊರಡುವಾಗ "ಇಂತಹ ದಿನಾಂಕದಂದು ಈ ಕಾರ್ಯಕ್ರಮವು ಪ್ರಸಾರವಾಗುತ್ತದೆ..." ಎಂದು ಅಳುಕುತ್ತಲ ನಾನು ಹೇಳಿದಾಗ - "ನಿಮ್ಮ ಕೆಲಸ ಆಯಿತಲ್ಲವಾ ? ಹೊರಡಿ.." ಅಂದಿದ್ದರು. ಆದರೆ ಅದೇ ಪ್ರದೇಶದವಳಾದ ನನಗೆ ಆ ಭಾಷೆ ಭಾವದ ಪರಿಚಯವಿದ್ದುದರಿಂದ ಅಂದನಗುತ್ತ ಅವಿಗಕೈಮುಗಿದು ಹೊರ ಬಂದಿದ್ದೆ. ಬಾಯಿ ಬಣ್ಣ, ಗಿಲೀಟಿನ ಮಾತುಗಳು ಅವರ ಹತ್ತಿರ ಸುಳಿಯಲೇ ಇಲ್ಲ. ತಾವು ಆಡಲಿಲ್ಲ ಮಾತ್ರವಲ್ಲ - ಅಂತಹ ಮಾತುಗಳನ್ನು ಕೇಳಿದರೂ ಕಾರಂತರು ಸಿಡುಕುತ್ತಿದ್ದರು. ಅದು ಎಂತಹ ಸನ್ನಿವೇಶವೇ ಇರಲಿ, ತನ್ನ ಮನಸ್ಸು ಒಪ್ಪಿದ್ದನ್ನು ಹೇಳಿಯಾರು; ಯಾರು ಕಿವಿ ಮುಚ್ಚಿದರೂ ಅವರಿಗಿರಲಿಲ್ಲ ಚಿಂತೆ.

1902 ರ ಅಕ್ಟೋಬರ್ 10 ರಂದು ಅವಿಭಜಿತ ದಕ್ಷಿಣ ಕನ್ನಡದ ಕೋಟದ ಮಣ್ಣಿನಲ್ಲಿ ಬದುಕಿನ ದೀಕ್ಷೆ. ಮಣ್ಣಿಂದ ಮಣ್ಣಿಗೆ ಎಂಬ ಸರಳವೆಂದು ಕಾಣುವ ಸೂತ್ರವನ್ನು ಗಟ್ಟಿಯಾಗಿ ಹಿಡಿದವರು ಕಾರಂತರು. ಪ್ರತಿಯೊಂದು ಪಾತ್ರವನ್ನೂ ಅತ್ಯಂತ ಪ್ರೀತಿಯಿಂದ ಪೋಷಿಸಿದ ಮೂರು ತಲೆಮಾರಿನ  ಕತೆಯುಳ್ಳ "ಮರಳಿ ಮಣ್ಣಿಗೆ" ಎಂಬ ಕಾರಂತರ ಕಾದಂಬರಿಯು ಅವರ ಕೃತಿಗಳಲ್ಲೇ ಅತಿ ಸುಂದರ ಎನ್ನಬಹುದಾದ ಕುಸುಮ. ಜ್ಞಾನಪೀಠಸ್ಥ ವ್ಯಕ್ತಿಯೊಬ್ಬ ಮಕ್ಕಳಿಗಾಗಿಯೂ ಬಹಳಷ್ಟು ಬರೆದದ್ದೂ ಹೌದು; ಮಕ್ಕಳ ಶಿಕ್ಷಣದ ಬಗ್ಗೆ ಕಾರಂತರದ್ದೇ ಆದ ಒಂದು ನಿಲುವು ಇದ್ದದ್ದೂ ಹೌದು. ಒಂದಶತಮಾನವಿಡೀ " ಕಾರಂತುವೆಂಪು, ಬೇಂದ್ರೆ" ಎಂಬುಡಿಗುಚ್ಛು ಕನ್ನಿಗಾಯಲ್ಲಿ ನಿದದ್ದೂ ಹೌದು. ಅವೀವಿತೌವ್ವ  ಚುವಿಕೆಯ ಅವಿಯಲ್ಲಿ ಪುತ್ತೂರಿನಲ್ಲಿ ವಾಸ್ತವ್ಯಿದ್ದೂ ವೃದ್ಾಪ್ಯಲ್ಲಿ ನ್ನಣ್ಣಿನೆಳೆತು ಕಾರಂತನ್ನ ಜನ್ಮಸ್ಾದೋಟೀಪಾಲಿಗ್ರಾಮಲ್ಲಿ ನೆಲೆಸುವಂತೆ ಮೆ ಬಿಡಿಲ್ಲ. 1997 ರಿಸೆಂಬರ್ 9 ರಂದು ಅವೊನೆಯಾಗಿ "ಮಿ ಮಣ್ಣಿಗೆ"  ೇರಿದ್ದಮ್ಮೋಟೆಯೋಟಲ್ಲೇ. ಜೀವ ನ್ನು ಸ್ವಲ್ಪಲ್ಲೇ ತಪ್ಪಿಸಿಕೊಂಡಾರಂತ "ಮಿ ಮಣ್ಣಿಗೆ" ಯು ಅಂದಾವೂರ್ಣಾವ್ಯಾಯಿತು. ಒಂದು ಮಾ ಜೀವಾವ್ಯುಕ್ತಾಯಾಯಿತು...

ತಮ್ಮ ಇಳಿವಯಸ್ಸಿನಲ್ಲಿ ಸಾಲಿಗ್ರಾಮಕ್ಕೆ ಬಂದ ನಂತರ ಸುಮಾರು 25 ವರ್ಷಗಳ ಕಾಲವೂ ಕಾರಂತರು ವಿಶ್ರಾಂತಿಯೆಂದು ಸುಮ್ಮನೆ ಪೀಠದಲ್ಲಿ ಕೂತವರಲ್ಲ. ಕಾರಂತರನ್ನು ಪೀಠದಲ್ಲಿ ಬಹಳ ಹೊತ್ತು ಸುಮ್ಮನೆ ಕೂರಿಸುವುದೇ ಒಂದು ಅಸಹಜ ವಿಷಯ ! "ಇದ್ದರೂ ಚಿಂತೆ" ಎಂದು - ಎಂದೂ ಗೊಣಗದೆ, ಜನರು ಕರೆದಲ್ಲಿಗೆ ನಡೆದರು. ಜನರೊಂದಿಗೇ ನಡೆದರು. ನಡೆಯುತ್ತ ನಡೆಯುತ್ತ ನಡೆದೇ ಬಿಟ್ಟರು. ನುಡಿದು ನುಡಿಸಿ,  ನುಡಿಯುಳಿಸಿ ನಡೆದೇ ಬಿಟ್ಟರು.

ಪ್ರಾಚೀನ ಮೌಲ್ಯಗಳನ್ನೂ ಸಾರಾಸಗಟಾಗಿ ತಿರಸ್ಕರಿಸದೆ, ಪ್ರಸ್ತುತದಲ್ಲಿ ಅವನ್ನು ತೂಗಿ ನೋಡಿ, ಭಾವೀ ತಲೆಮಾರಿಗೆ ಉಳಿಸಬೇಕಾದುದನ್ನು ಬೊಟ್ಟಿಟ್ಟು ತೋರಿಸಿದವರು ಕಾರಂತರು. "ಪಡೆದುದಕ್ಕಿಂತಲೂ ನೀಡಿದ್ದು ಕಡಿಮೆಯಾಗಬಾರದು" ಎಂಬ ಪೂರ್ಣ ಎಚ್ಚರದಲ್ಲಿದ್ದ ಪ್ರಜ್ಞಾಪೂರ್ಣ ಬದುಕು ಕಾರಂತರದ್ದು. "ಚೋಮನ ದುಡಿ" ಯಂತಹ ಕಾದಂಬರಿಯಲ್ಲಿ ಸಮಾಜದ ತೀರ ಸಾಮಾನ್ಯರನ್ನೂ ಮುಟ್ಟಿದ್ದು, ಭಾವ ಸಂವಹನ ನಡೆಸಿದ್ದು - ಈ ಲೌಕಿಕದ ಒಂದು ಅಲೌಕಿಕ ಸಂಗತಿ.

"ನಾವು ಅಸಂಖ್ಯ ಜನರಿಗೆ ಋಣಿಗಳಲ್ಲವೆ ? ಈ ಸೃಷ್ಟಿಯ ಅನಂತ ವಿಸ್ಮಯಗಳಿಗೆ ಋಣಿಗಳಲ್ಲವೆ ?" ಎಂದು ಕಾರಂತರು ಕೇಳುತ್ತಿದ್ದರು. ತಮ್ಮ ಬದುಕು - ಬರೆಹಗಳ ಮೂಲಕ ಒಂದಿಷ್ಟು ಋಣ ಸಂದಾಯವನ್ನೂ ಮಾಡಿದರು. ಪ್ರತಿಯೊಂದು ಜೀವಿಯೂ ತನ್ನ ಇತಿಮಿತಿಯಲ್ಲಿ ಈ ಜಗತ್ತಿಗೆ ಋಣ ಸಂದಾಯ ಮಾಡುವುದೇ ಕಾರಂತರ ಸಂಸ್ಮರಣೆಗೆ ಇರುವ ಪ್ರಶಸ್ತ ದಾರಿ.

ಹಾಗೆಂದು.....ಕಾರಂತರು ಸುಖ ವೈಭೋಗವನ್ನೇ ಕಂಡುಂಡವರಲ್ಲ. ಅವರ ಬದುಕಿನಲ್ಲೂ ಬಿರುಗಾಳಿ ಬೀಸಿದ್ದಿದೆ. ಈ ಬದುಕು ಎಂಬುದು ಕಾರಂತರನ್ನೂ ಅಲುಗಾಡಿಸದೆ ಬಿಡಲಿಲ್ಲ. ಆದರೆ ಪ್ರಕೃತಿಯೊಂದಿಗೆ ತಾದಾತ್ಮ್ಯವನ್ನು ಸಾಧಿಸಿ, ಬದುಕುಗಳ ಪ್ರತಿಕೃತಿಯನ್ನು ಬಿಡಿಸುತ್ತಲೇ ಉಬ್ಬರದ ಏರಿಳಿತಗಳಿಂದ ಪಾರಾದವರು ಕಾರಂತರು. ಬದುಕು ಕಾರಂತರೊಳಗೋ ಕಾರಂತರು ಬದುಕಿನೊಳಗೋ - ಎಂಬಂತೆ ಸ್ವಂತ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಎಂಬ ಭೇದವಿಲ್ಲದೆ ಎಲ್ಲ ರಂಗಗಳಲ್ಲೂ ಇಣುಕಿ ನೋಡಿ, ತಾವು ನೋಡಿದ್ದನ್ನು ಎಲ್ಲರಿಗೂ ಹೇಳುತ್ತ ಬದುಕಿದ್ದ ಧೀಮಂತ ವ್ಯಕ್ತಿತ್ವವೇ - ಡಾ. ಕೋಟ ಶಿವರಾಮ ಕಾರಂತ ! ಸುತ್ತಲೂ ಮುತ್ತಿದ್ದ ಯಾವುದೇ ತಾಪತ್ರಯವು ಅವರ ಬರೆಹವನ್ನು, ಕ್ರಿಯಾಶೀಲತೆಯನ್ನು ಇಂಗಿಸಲಿಲ್ಲ. ಸತ್ಯವೆಂದು ತಾವು ನಂಬಿದ್ದನ್ನೇ ನುಡಿದರು; ನಡೆದರು. ಚಿತ್ರ ಬಿಡಿಸಿದರು, ಹಾಡಿದರು, ಕುಣಿದರು, ವಾಗ್ಝರಿ ಹರಿಸಿದರು, ಎಲ್ಲರೊಂದಿಗೆ ಬೆರೆತರು...ತಮ್ಮನ್ನೇ ಮರೆತರು ! ಬದುಕನ್ನು ಬಿಡಿಬಿಡಿಯಾಗಿ ಕಂಡರು; ಇಡಿಯಾಗಿ ಉಂಡರು. ಪ್ರೀತಿಸಿದ ಬದುಕಿನ ಅನುಭವಗಳನ್ನೆಲ್ಲ ಬಾಚಿ ತಬ್ಬಿಕೊಂಡರು. ತಾವು ನಂಬಿದ ಮೌಲ್ಯಗಳನ್ನು ಕೊನೆಯ ವರೆಗೂ ಬಿಡದೆ ಪ್ರತಿಪಾದಿಸುತ್ತ 1997 ರ ಡಿಸೆಂಬರ್ 9 ರಂದು ವಾಸ್ತವಕ್ಕೆ ತಲೆಬಾಗಿ ನಡೆದೇ ಬಿಟ್ಟರು. ಈಸಬೇಕು ಇದ್ದು ಜೈಸಬೇಕು ಎನ್ನುತ್ತ ಬದುಕನ್ನು ಅಪ್ಪಿಕೊಂಡರೆ - ಸಾವನ್ನು ಎದೆಗೊತ್ತಿ ಒಪ್ಪಿಕೊಂಡರು ! ಹುಟ್ಟು ಸಾವಿನ ನಡುವಿನ ಭೂಮಿಯ ಭೇಟಿಯೆಂಬ ಬದುಕಿನ ಆಟ. ಆ ಬದುಕಿನ ಕ್ಷಣ ಕ್ಷಣವೂ ಕಾರಂತರದೇ ವಾಸ್ತವ. ಇದು "ಮುಗಿದ ಯುದ್ಧ" ವೆ ?

ಕಾರಂತರು ಇಲ್ಲೇ ಇದ್ದಾರೆ. ಕನ್ನಡದ ಸ್ವರ ವ್ಯಂಜನದಲ್ಲಿ; ಶಬ್ದ ಗುಂಜನದಲ್ಲಿ... ಕಾರಂತರು ಇದ್ದಾರೆ; ಕನ್ನಡದ ಉಸಿರಿನಲ್ಲಿ; ಕಡಲ ತಡಿಯ ಮಣ್ಣಿನ ಬಸಿರಿನಲ್ಲಿ... ಕನ್ನಡವು ಇರುವ ವರೆಗೂ ಕಾರಂತರು ಇರುತ್ತಾರೆ. ಸಮೃದ್ಧ ಬದುಕಿನ "ಮುಟ್ಟುವ ಆಟ" ದಲ್ಲಿ ಅವರೊಬ್ಬರೇ ಆಡುತ್ತ ಹೋದರು. ನಮ್ಮನ್ನೆಲ್ಲ ಮುಟ್ಟಿ ಮುಟ್ಟಿ ಹೋದರು. ಅವರನ್ನು ಮುಟ್ಟಲು ಕೊನೆಯ ವರೆಗೂ ಯಾರಿಗೂ ಬಿಡಲಿಲ್ಲ. ನಾನೀಗ ಕಾರಂತರನ್ನು ಮುಟ್ಟಿದೆನೆ ? ಕಾರಂತರು ಕೇಳುತ್ತಿದ್ದರೆ ಹೇಳಿಯಾರು - "ನಿನ್ನ ಕೆಲಸ ಮುಗಿಯಿತಲ್ಲವಾ ? ಹೊರಡು....."
 
                                                                                                                                           ಾರಾಯೀ ದಾಮೋದರ್